ಜೀವಕ್ಕೆ ಎರವಾದ ಸೆಲ್ಫಿ ಕ್ರೇಜ್: ಕಾಳಿನದಿಗೆ ಬಿದ್ದು ಸ್ನೇಹಿತರಿಬ್ಬರು ನಾಪತ್ತೆ!

ಸೆಲ್ಫಿ ಪಡೆಯುವ ಸಲುವಾಗಿ ಪ್ರಯತ್ನದಲ್ಲಿದ್ದಾಗ ಸ್ನೇಹಿತರಿಬ್ಬರು ಕಾಳಿ ನದಿ ಸೇತುವೆ ಮೇಲಿಂದ ಬಿದ್ದು  ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ನಡೆದಿದೆ.
ನೀರಿಗೆ ಬಿದ್ದ ಸ್ನೇಹಿತರನ್ನು ಪತ್ತೆಮಾಡಲು ಶೋಧಕಾರ್ಯಾಚರಣೆ ಮುಂದುವರಿದಿದೆ
ನೀರಿಗೆ ಬಿದ್ದ ಸ್ನೇಹಿತರನ್ನು ಪತ್ತೆಮಾಡಲು ಶೋಧಕಾರ್ಯಾಚರಣೆ ಮುಂದುವರಿದಿದೆ
Updated on

ಕಾರವಾರ: ಸೆಲ್ಫಿ ಪಡೆಯುವ ಸಲುವಾಗಿ ಪ್ರಯತ್ನದಲ್ಲಿದ್ದಾಗ ಸ್ನೇಹಿತರಿಬ್ಬರು ಕಾಳಿ ನದಿ ಸೇತುವೆ ಮೇಲಿಂದ ಬಿದ್ದು  ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ನಡೆದಿದೆ. ಗಣೇಶಗುಡಿಯ ಸಮೀಪವಿರುವ ಸೂಪ ಅಣೆಕಟ್ಟಿನಲ್ಲಿ ಈ ಘಟನೆ ನಡೆದಿದ್ದು  ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರು ಸೇತುವೆಯ ದಂಡೆಯ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಜಾರಿಬಿದ್ದಾಗ. ಅದನ್ನು ಹಿಡಿಯುವ ಪ್ರಯತ್ನದಲ್ಲಿ ಅವಳು ನೀರಿಗೆ ಬಿದ್ದಿದ್ದಾಳೆ.

"ತನ್ನ ಸ್ನೇಹಿತೆಯನ್ನು ಉಳಿಸಲು ಪ್ರಯತ್ನಿಸಿದ ಯುವಕ ಸಹ ಸಮತೋಲನವನ್ನು ಕಳೆದುಕೊಂಡು ನೀರಿಗೆ ಬಿದ್ದದ್ದಾನೆ." ಸ್ಥಳೀಯರೊಬ್ಬರು ಹೇಳಿದ್ದಾರೆ.ಘಟನೆಗೆ ಸಾಕ್ಷಿಯಾದ ಜನರು ಸ್ಥಳಕ್ಕೆ ಧಾವಿಸಿದ್ದಲ್ಲದೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಅಕ್ವಾಸ್ಫೋರ್ಟ್ಸ್ ಆಪರೇಟರ್‌ಗಳು ಮತ್ತು ಅಗ್ನಿಶಾಮಕದಳದವರ ಸಹಾಯದಿಂದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಮೊಬೈಲ್ ಫೋನ್ ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ.

ಫೋನ್ ನಲ್ಲಿದ್ದ ಮಾಹಿತಿಯಂತೆ ಯುವತಿಯ ಗುರುತು ಪತ್ತೆಯಾಗಿದ್ದು ಆಕೆ ಬೀದರ್ ಮೂಲದ ರಕ್ಷಾ ಎಂದು ತಿಳೀದುಬಂದಿದೆ. ಅಲ್ಲದೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳೆನ್ನುವುದು ಸಹ ಪತ್ತೆಯಾಗಿದೆ. ಆದರೆ ರಕ್ಷಾ ಜತೆಗಿದ್ದ ಯುವಕನ ವಿವರಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.

ಪೊಲೀಸರ ಪ್ರಕಾರ, ಈ ಇಬ್ಬರೂ ದಾಂಡೇಲಿಯಿಂದ ರಿಕ್ಷಾದಲ್ಲಿ ಬಂದಿದ್ದರು. ಕತ್ತಲಾಗಿದ್ದರಿಂದ ಶೋಧಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಮಂಗಳವಾರ ಸಹ ಕಾರ್ಯಾಚರಣೆ ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com