ಟ್ರೆಂಡ್ ರಿವರ್ಸ್: ಹಾಸಿಗೆ ಅರಸಿ ಬೆಂಗಳೂರಿನಿಂದ ಅಕ್ಕಪಕ್ಕದ ಜಿಲ್ಲೆಗಳ ಮೊರೆ ಹೋಗುತ್ತಿರುವ ರೋಗಿಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಾಗಿ ಬೆಂಗಳೂರು ಜನ ಅಕ್ಕಪಕ್ಕದ ಜಿಲ್ಲೆಗಳ ಮೊರೆ ಹೋಗುತ್ತಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಾಗಿ ಬೆಂಗಳೂರು ಜನ ಅಕ್ಕಪಕ್ಕದ ಜಿಲ್ಲೆಗಳ ಮೊರೆ ಹೋಗುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಹಾಸಿಗೆ ಸಮಸ್ಯೆ, ರೆಮ್ಡಿಸಿವಿರ್, ಆ್ಯಂಬುಲೆನ್ಸ್  ಹಾಗೂ ಐಸಿಯು ನೀಗಿಸಲು ಅಧಿಕಾರಿಗಳು ಹಗಲಿರುಳು ಪ್ರಯತ್ನ ಪಡುತ್ತಿದ್ದಾರೆ,  ಹಾಸಿಗೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಬೇಡುತ್ತಿದ್ದಾರೆ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ,ಮೈಸೂರು ಮತ್ತು ಹಾಸನಗಳಲ್ಲಿ ಬೆಂಗಳೂರಿಗಿಂತ ಸೋಂಕಿನ ಪ್ರಮಾಣ ಕಡಿಮೆಯಿರುವ ಕಾರಣ ರೋಗಿಗಳು ಇಲ್ಲಿ ಹಾಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿಯ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಎಂಎಸ್) 50 ಐಸಿಯು ಹಾಸಿಗೆಗಳು ಸೇರಿದಂತೆ 250 ಹಾಸಿಗೆಗಳನ್ನು ಹೊಂದಿದೆ. ಇದು ನಗರದಿಂದ ಕೇವಲ 100 ಕಿ.ಮೀ ದೂರದಲ್ಲಿದ್ದು ಆಂಬ್ಯುಲೆನ್ಸ್ ಮೂಲಕ ತಲುಪಲು ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ
ಬಹಳಷ್ಟು  ಬೆಂಗಳೂರು ಜನರು ಅಲ್ಲಿಗೆ ಬರುತ್ತಿದ್ದಾರೆ. 

ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನಿಂದ ಬಂದ ಅನೇಕರು ಪ್ರವೇಶ ಪಡೆಯಲು ಅಲ್ಲಿಗೆ ಹೋಗಿದ್ದಾರೆ ಎಂದು ಏಮ್ಸ್ ನ ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್ ಹೇಳಿದ್ದಾರೆ. ಆದರೆ ಮಂಡ್ಯ ಮತ್ತು ಹಾಸನದಿಂದಲೂ ರೋಗಿಗಳು ಬರುತ್ತಿದ್ದಾರೆ, ಹೀಗಾಗಿ ನಾವು ಅವರಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಂಡ್ಯ ಮೂಲದ ಮಹೇಶ್ ಗೌಡ(ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು.ಆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಕೆಲ ವರ್ಷಗಳ ಹಿಂದೆ ಜನ  ಉತ್ತಮ ಆರೋಗ್ಯ ಸೇವೆ ದೊರೆಯುತ್ತದೆ ಎಂದು ಬೆಂಗಳೂರಿಗೆ ಬರುತ್ತಿದ್ದರು.

ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ನಿಯಂತ್ರಣ ತಪ್ಪಿದ ಸೋಂಕಿನಿಂದ ಸನ್ನಿವೇಶ ಬದಲಾಗಿದೆ. ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಹಲವು ಕೋವಿಡ್ ರೋಗಿಗಳು ರಾಮನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ರಾಮನಗರ ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. 

ತುರ್ತು ಅವಶ್ಯಕತೆ ಇರುವ ಕಾರಣ ನಾವು ಅವರಿಗೆ ನಿರ್ಬಂಧ ವಿಧಿಸುತ್ತಿಲ್ಲ,  ಹಲವು ಮಂದಿ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಶಿಫಾರಸ್ಸು ಮಾಡಿಸುತ್ತಿದ್ದಾರೆ , ಆದರೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕಾದ ಕಾರಣ ಅಧಿಕಾರಿಗಳು ಒತ್ತಡದಲ್ಲಿದ್ದಾರೆ,

ಬೆಂಗಳೂರು ದಕ್ಷಿಣ ವಲಯದ ರೋಗಿ, ಮಾರತ್ ಹಳ್ಳಿ ಅಥವಾ ಯಲಹಂಕದಲ್ಲಿನ ಆಸ್ಪತ್ರೆಗೆ ತಲುಪಲು ಸುಮಾರು ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ, ಈ ಸಮಯದಲ್ಲಿ ಬೇರೆ ಜಿಲ್ಲೆಯ ಆಸ್ಪತ್ರೆ ತಲುಪಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com