ರಾಜ್ಯದಲ್ಲಿನ ಹಳೆಯ ಆಮ್ಲಜನಕ ಸ್ಥಾವರಗಳ ಪುನಾರಂಭಕ್ಕೆ ಎಂಜಿನಿಯರ್‌ ಗಳ ಸಾಥ್!

ರಾಜ್ಯದಲ್ಲಿನ ಆಮ್ಲಜನಕ ಬಿಕ್ಕಟ್ಟನ್ನು ನೋಡಿರುವ ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಕಳ್ಳತನದಲ್ಲಿ ಮಾರಾಟ ಮಾಡಲಾಗುತ್ತಿರುವ ದೆಹಲಿಯ ಹಾದಿಯಲ್ಲಿ ಬೆಂಗಳೂರು ಸಾಗದಂತೆ ನೋಡಿಕೊಳ್ಳಲು, ಇಲ್ಲಿನ ಎಂಜಿನಿಯರ್‌ ಗಳು ಕಂಪೆನಿಗಳು ತಮ್ಮ ನಿಷ್ಕ್ರಿಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಮರುಪ್ರಾರಂಭಿಸಲು ನೆರವಾಗುತ್ತಿದ್ದಾರೆ.
ಯಲಹಂಕದ ರೈಲು ಗಾಲಿಗಳ ಕಾರ್ಖಾನೆಯಲ್ಲಿನ ಆಮ್ಲಜನಕ ಸ್ಥಾವರವು ಜೂನ್ ವೇಳೆಗೆ ಮತ್ತೆ ತೆರೆಯಲು ಸಜ್ಜಾಗಿದೆ
ಯಲಹಂಕದ ರೈಲು ಗಾಲಿಗಳ ಕಾರ್ಖಾನೆಯಲ್ಲಿನ ಆಮ್ಲಜನಕ ಸ್ಥಾವರವು ಜೂನ್ ವೇಳೆಗೆ ಮತ್ತೆ ತೆರೆಯಲು ಸಜ್ಜಾಗಿದೆ

ಬೆಂಗಳೂರು: ರಾಜ್ಯದಲ್ಲಿನ ಆಮ್ಲಜನಕ ಬಿಕ್ಕಟ್ಟನ್ನು ನೋಡಿರುವ ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಕಳ್ಳತನದಲ್ಲಿ ಮಾರಾಟ ಮಾಡಲಾಗುತ್ತಿರುವ ದೆಹಲಿಯ ಹಾದಿಯಲ್ಲಿ ಬೆಂಗಳೂರು ಸಾಗದಂತೆ ನೋಡಿಕೊಳ್ಳಲು ಇಲ್ಲಿನ ಎಂಜಿನಿಯರ್‌ ಗಳು ಕಂಪೆನಿಗಳು ತಮ್ಮ ನಿಷ್ಕ್ರಿಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಮರುಪ್ರಾರಂಭಿಸಲು ನೆರವಾಗುತ್ತಿದ್ದಾರೆ. ಈ ಮೂಲಕ ಆಮ್ಲಜನಕ ತಕ್ಷಣದ ಕೊರತೆ ನೀಗಿಸಲು ಮುಂದಾಗಿದ್ದಾರೆ.

ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ - ಅಥರ್ ಎನರ್ಜಿಯ ಭಾಗವಾಗಿರುವ ಕೈಗಾರಿಕಾ, ಸಂಸ್ಕರಣೆ, ಯಾಂತ್ರಿಕ ಮತ್ತು ಇತರ ವಿಭಾಗದ  ಸುಮಾರು 1,500 ಎಂಜಿನಿಯರ್‌ಕಂಪನಿಗಳು ಮತ್ತು ಆಸ್ಪತ್ರೆಗಳೊಂದಿಗೆ ಅಸ್ತಿತ್ವದಲ್ಲಿರುವ ಆಮ್ಲಜನಕ ಸ್ಥಾವರಗಳ ಪುನರಾರಂಭ ಅಥವಾ ಸಾಮರ್ಥ್ಯವನ್ನು ಹೆಚ್ಚಿಸಲು ಮಾತುಕತೆ ನಡೆಸಿದ್ದಾರೆ.

"ಲಾಕ್ ಡೌನ್ ಘೋಷಿಸಲಾಗಿದೆ ಮತ್ತು ನಮಗೆ ಹೆಚ್ಚಿನ ಕೆಲಸವಿಲ್ಲ. ನಮ್ಮ ಪರಿಣತಿ ಮತ್ತು ಶಿಕ್ಷಣವನ್ನು ಏಕೆ ಉತ್ತಮ ಬಳಕೆಗೆ ಬಳಸಬಾರದು ಎಂದು ನಾವು ಯೋಚಿಸಿದ್ದೇವೆ ಮತ್ತು ನಿಷ್ಕ್ರಿಯವಾಗಿರುವ ಆಮ್ಲಜನಕ ಘಟಕಗಳನ್ನು ಮರುಪ್ರಾರಂಭಿಸುವ ಆಲೋಚನೆಯನ್ನು ನಾವು ಹೊಂದಿದ್ದೇವೆ. ಹೊಸ ಸ್ಥಾವರವನ್ನು ಸ್ಥಾಪಿಸಲು ಬಹಳ ಸಮಯ ಬೇಕಿದೆ.ನಮ್ಮಲ್ಲಿ ಹೆಚ್ಚು ಸಮಯವಿಲ್ಲ. ಬದಲಾಗಿ, ನಾವು ರಾಜ್ಯ ಅಥವಾ ನೆರೆಯ ರಾಜ್ಯಗಳಲ್ಲಿ ಎಲ್ಲಿಯಾದರೂ 3-4 ದಿನಗಳಲ್ಲಿ ನಿಷ್ಕ್ರಿಯ ಘಟಕಗಳನ್ನು ಸಿದ್ಧಪಡಿಸಬಹುದು ”ಎಂದು ಯೋಜನೆಯ ಹಿರಿಯ ವ್ಯವಸ್ಥಾಪಕ ಸೌರಭ್ ಎಸ್ ಹೇಳಿದರು.

ತಮಿಳುನಾಡು, ಬೆಂಗಳೂರು, ಮೈಸೂರು ಮತ್ತು ಹೊಸೂರು ಮತ್ತು ಕೊಯಮತ್ತೂರು ಮತ್ತು ಸುತ್ತಮುತ್ತಲಿನ ಅನಿಲ ಉತ್ಪಾದನಾ ಘಟಕಗಳೊಂದಿಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು. ಅಥರ್ ನಿಂದ ಮಾತ್ರವಲ್ಲ, ಇತರ ಕಂಪನಿಗಳ ವೃತ್ತಿಪರರು ಸಹ ತೀವ್ರವಾದ ಕೋವಿಡ್ ಎರಡನೇ ಅಲೆ ಬಗ್ಗೆ ರಾಜ್ಯ ಮತ್ತು ದೇಶಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ, ಏಕೆಂದರೆ ಆರ್ಥಿಕತೆಗೆ ತೊಂದರೆಯಾಗುವುದರೊಂದಿಗೆ ಅವರಿಗೆ ಈಗ ಹೆಚ್ಚಿನ ಪ್ರಮಾಣದ ಕೆಲಸಗಳಿಲ್ಲ.

ಎಂಎನ್‌ಸಿಯ ಎಂಜಿನಿಯರ್‌ಗಳ ಮತ್ತೊಂದು ತಂಡವು, “ನಾವು ಸರ್ಕಾರ ಮತ್ತು ಕೈಗಾರಿಕೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಅವುಗಳ ಆಮ್ಲಜನಕ ಸ್ಥಾವರಗಳ ನಿರ್ವಹಣೆಯನ್ನು ಒದಗಿಸುತ್ತಿದ್ದು, ಇದರಿಂದ ಅವರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಘಟಕಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಅನೇಕ ಘಟಕಗಳು ಸ್ಥಗಿತಗೊಳ್ಳುವುದರೊಂದಿಗೆ ಈ ಹಿಂದೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಸರಬರಾಜುದಾರರು ಸಹ ತಮ್ಮ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ರೋಗಿಗಳು ತೊಂದರೆ ಅನುಭವಿಸದಂತೆ ನಾವು ಅವರಿಗೆ ಸಹಾಯ ನೀಡುತ್ತಿದ್ದೇವೆ. ”

ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಇನ್ನೂ ಕೆಲವು ಎಂಜಿನಿಯರ್‌ಗಳು ಉದ್ಯೋಗ ಕಳೆದುಕೊಂಡಿದ್ದಾರೆ, ಅಂಯಹಾ ಕೆಲವರು ಈಗ ತಮ್ಮ ಹಿಂದಿನ ಸಹೋದ್ಯೋಗಿಗಳಿಗೆ ಆಸ್ಪತ್ರೆಗಳೊಂದಿಗೆ ಸಂವಹನ ನಡೆಸುವ ಮೂಲಕ ಆಮ್ಲಜನಕ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com