ಹುಬ್ಬಳ್ಳಿ ಬಾಲಕಿಯ ಕಿಡ್ನ್ಯಾಪ್ ಕೇಸ್: ದೂರು ಸ್ವೀಕರಿಸಿದ 3 ಗಂಟೆಗಳಲ್ಲೇ ಬೆಂಗಳೂರಿನಲ್ಲಿ ಆರೋಪಿ ಬಂಧನ

ದೂರು ಸ್ವೀಕರಿಸಿದ 3 ಗಂಟೆಗಳಲ್ಲಿಯೇ 6 ವರ್ಷದ ಬಾಲಕಿಯ ಅಪಹರಣ ಪ್ರಕಣವನ್ನು ಹುಬ್ಬಳ್ಳಿ ಪೊಲೀಸರು ಬೇಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಣವಾಗಿದ್ದು ಪೊಲೀಸರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ದೂರು ಸ್ವೀಕರಿಸಿದ 3 ಗಂಟೆಗಳಲ್ಲಿಯೇ 6 ವರ್ಷದ ಬಾಲಕಿಯ ಅಪಹರಣ ಪ್ರಕಣವನ್ನು ಹುಬ್ಬಳ್ಳಿ ಪೊಲೀಸರು ಬೇಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಣವಾಗಿದ್ದು ಪೊಲೀಸರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಶಬ್ನಮ್ ಗಡಕ್ಕರ್ ಎಂಬ 19 ವರ್ಷದ ಯುವತಿ ಆರು ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿಯಾಗಿದ್ದಾಳೆ. ಬಾಲಕಿ ಹುಬ್ಬಳ್ಳಿಯ ರಾಮಲಿಂಗೇಶ್ವರ ನಿವಾಸಿಯಾಗಿದ್ದು ನೆರೆಮನೆಯ ಹಾಗೂ ದೂರದ ಸಂಬಂಧಿ ಶಬ್ನಮ್ ಜೊತೆ ಬಾಲಕಿ ತಂದೆ ಅಸ್ಲಮ್ ಬಳ್ಳಾರಿ ಉತ್ತಮ ಬಾಂಧವ್ಯ ಹೊಂದಿದ್ದರು. ಶಬ್ನಮ್ ಜೊತೆ ಆಗಾಗ ಹೋಗಿ ಆರು ವರ್ಷದ ಬಾಲಕಿ ಆಟವಾಡಿ ಬರುತ್ತಿದ್ದಳು.

ಆಗಿದ್ದೇನು?: ಕಳೆದ ಶನಿವಾರ ತಮ್ಮ ಮಗಳ ಜೊತೆ ಹೊರಗೆ ಹೋಗಿ ಬರುವುದಾಗಿ ಹೇಳಿ ಬಾಲಕಿಯನ್ನು ಕರೆದುಕೊಂಡು ಶಬ್ನಮ್ ಹೊರಹೋಗಿದ್ದಾಳೆ,ಸಾಯಂಕಾಲವಾದರೂ ವಾಪಸ್ ಬರಲಿಲ್ಲ. ಬಾಲಕಿಯ ಪೋಷಕರು ಶಬ್ನಮ್ ನ್ನು ಮೊಬೈಲ್ ನಲ್ಲಿ ಸಂಪರ್ಕಿಸಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ, ರಾತ್ರಿಯಾದರೂ ಕಾಣದಿದ್ದಾಗ ಪೋಷಕರಿಗೆ ಆತಂಕವಾಯಿತು. ತಮ್ಮ ಸಂಬಂಧಿಕರನ್ನು ಸಂಪರ್ಕಿಸಿ ಮರುದಿನ ಭಾನುವಾರ ಬೆಳಗ್ಗೆಯವರೆಗೆ ಕಾದರು.

ಮೊನ್ನೆ ಭಾನುವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸರನ್ನು ಸಂಪರ್ಕಿಸಿ ಘಟನೆ ವಿವರಿಸಿದರು. ಕೂಡಲೇ ಪೊಲೀಸರು ಶಬ್ನಮ್ ನ ಮೊಬೈಲ್ ಟವರ್ ಲೊಕೇಶನ್ ಸಂಪರ್ಕಿಸಿದಾಗ ಬೆಂಗಳೂರು ತಲುಪಿರುವುದು ತಿಳಿದುಬಂತು. ಫೋನ್ ಕರೆಗೆ ಶಬ್ನಮ್ ಪ್ರತಿಕ್ರಿಯಿಸಲಿಲ್ಲ.

ಬಾಯ್ ಫ್ರೆಂಡ್ ಜೊತೆ ಸಂಪರ್ಕ: ವಿಚ್ಛೇದನ ಪಡೆದಿದ್ದ ಶಬ್ನಮ್ ಬಾಯ್ ಫ್ರೆಂಡ್ ಹೊಂದಿದ್ದು ಆತ ಕೂಡ ಹುಬ್ಬಳ್ಳಿಯವನಾಗಿದ್ದು ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನನ್ನು ಭೇಟಿ ಮಾಡಿ ಅವನ ಜೊತೆ ವಾಸವಿರಲು ಬೆಂಗಳೂರಿಗೆ ಬಂದಿದ್ದ ಶಬ್ನಮ್ ಬಾಲಕಿಯ ಮೇಲಿನ ವ್ಯಾಮೋಹ, ಪ್ರೀತಿಯಿಂದ ಅಪಹರಿಸಿ ತನ್ನ ಬಳಿ ಇಟ್ಟುಕೊಳ್ಳಲು ನೋಡಿದ್ದಳು. ಆದರೆ ಆಕೆಯ ಬಾಯ್ ಫ್ರೆಂಡ್ ಗೆ ಈ ವಿಷಯ ತಿಳಿದಿರಲಿಲ್ಲ.

ಬಾಲಕಿ ಜೊತೆ ಬೆಂಗಳೂರಿಗೆ ಬಂದಿದ್ದ ಶಬ್ನಮ್ ತನ್ನ ಸ್ನೇಹಿತನನ್ನು ಬಿಟ್ಟರೆ ಬೇರೆ ಯಾರ ಕರೆಗಳಿಗೂ ಸ್ಪಂದಿಸುತ್ತಿರಲಿಲ್ಲ. ಮೊನ್ನೆ ಭಾನುವಾರ ಬೆಳಗ್ಗೆ ಸ್ನೇಹಿತನನ್ನು ಭೇಟಿ ಮಾಡುವ ಯೋಜನೆಯಲ್ಲಿದ್ದಳು. ಆತನಿಗೆ ಬೇರೆ ಕೆಲಸವಿದ್ದ ಕಾರಣ ಸಮಯಕ್ಕೆ ಸ್ನೇಹಿತ ಬೆಂಗಳೂರಿಗೆ ಬಂದಿರಲಿಲ್ಲ.

ಪೊಲೀಸರು ಶಬ್ನಮ್ ನ ಸ್ನೇಹಿತನನ್ನು ಫೋನ್ ಮೂಲಕ ಸಂಪರ್ಕಿಸಿ ಶಬ್ನಮ್ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದು ಇದರಲ್ಲಿ ತಮಗೆ ಸಹಕಾರ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪೊಲೀಸರ ಎಚ್ಚರಿಕೆಯಿಂದ ಆರೋಪಿ ಶಬ್ನಮ್ ನ ಬಾಯ್ ಫ್ರೆಂಡ್ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುವಂತೆ ಅಲ್ಲಿ ತನಗಾಗಿ ಕಾದು ನಿಲ್ಲುವಂತೆ ಹೇಳಿದನು.

ಬೆಂಗಳೂರು ಪೊಲೀಸರ ಸಂಪರ್ಕ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಬು ರಾಮ್ ಮೆಜೆಸ್ಟಿಕ್ ಬಳಿಯ ಉಪ್ಪಾರಪೇಟೆ ಪೊಲೀಸರನ್ನು ಮತ್ತು ಎಸಿಪಿಯನ್ನು ಸಂಪರ್ಕಿಸಿದರು. ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಲು ಸಿಬ್ಬಂದಿಯನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ನಿಲ್ಲಿಸಿದರು. ಪೊಲೀಸರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿ ಶಬ್ನಮ್ ಬಂಧಿಸಿ ಬಾಲಕಿಯನ್ನು ರಕ್ಷಿಸಿದರು.

ಬಾಲಕಿ ತನ್ನ ಬಳಿ ಇರಬೇಕೆಂದು ಬಯಸಿ ಶಬ್ನಮ್ ಅಪಹರಿಸಿದ್ದಳು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಬಾಲಕಿ ಪೋಷಕರು ದೂರು ನೀಡಿದ್ದರೆ ಅಪರಾಹ್ನ 3 ಗಂಟೆಯ ಹೊತ್ತಿಗೆ ಶಬ್ನಮ್ ನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಲಾಯಿತು ಎಂದು ಗೋಕುಲ ರಸ್ತೆ ಪೊಲೀಸ್ ಇನ್ಸ್ ಪೆಕ್ಟರ್ ಜೆ ಎಂ ಕಲಿಮಿರ್ಚಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com