ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಗ್ರರ ವಿರುದ್ಧ ಹೋರಾಡಲು ಬೆಂಗಳೂರಿಗೆ ಎರಡು ಸ್ವಾಟ್ ತಂಡಗಳು ಸಜ್ಜು!

ನಗರದಲ್ಲಿ ಯಾವುದೇ ಭಯೋತ್ಪಾದಕ ದಾಳಿ ಸಂಭವಿಸಿದ್ದರೆ  ಅಂತಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಎರಡು ಸ್ವಾಟ್ ತಂಡಗಳನ್ನು ನಗರದ ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡಲಾಗಿದೆ. ಈ ತಂಡಗಳಿಗೆ ಎರಡು ತಿಂಗಳ ಕಾಲ ಕಮಾಂಡೋ ತರಬೇತಿ ನೀಡಲಾಗಿದೆ. 
Published on

ಬೆಂಗಳೂರು: ನಗರದಲ್ಲಿ ಯಾವುದೇ ಭಯೋತ್ಪಾದಕ ದಾಳಿ ಸಂಭವಿಸಿದ್ದರೆ  ಅಂತಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು  ಎರಡು ಸ್ವಾಟ್ ತಂಡಗಳನ್ನು ನಗರದ ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡಲಾಗಿದೆ. ಈ ತಂಡಗಳಿಗೆ ಎರಡು ತಿಂಗಳ ಕಾಲ ಕಮಾಂಡೋ ತರಬೇತಿ ನೀಡಲಾಗಿದೆ. 

ಪ್ರತಿ ಜಿಲ್ಲೆಗೂ ಸ್ವಾಟ್ ತಂಡಗಳನ್ನು ಪೊಲೀಸ್ ಇಲಾಖೆ ಸಜ್ಜುಗೊಳಿಸುತ್ತಿದೆ.  ನಗರದಲ್ಲಿ ಯಾವುದೇ ಭಯೋತ್ಪಾದಕ ದಾಳಿ ಸಂದರ್ಭಗಳಲ್ಲಿ ಗರುಡ ಪಡೆ ಬರುವ ಮುಂಚೆಯೇ ಇದು ತ್ವರಿತವಾಗಿ ಸ್ಪಂದಿಸಲಿದೆ. ಇದರ ಭಾಗವಾಗಿ ಎರಡು ತಂಡಗಳನ್ನು ನಗರಕ್ಕಾಗಿ ಸೇರಿಸಿಕೊಳ್ಳಲಾಗಿದೆ. ಇದಕ್ಕಾಗಿ ಸಿಎಆರ್ ಘಟಕಗಳಿಂದ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಎಂಟು ಮಂದಿ  ಮೀಸಲ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 120 ಮಂದಿ ಸಿಬ್ಬಂದಿ ಇದ್ದಾರೆ. ಈ ಪೈಕಿ ನಾಲ್ಕು ಆರ್ ಎಸ್ ಐಗಳು ಮತ್ತು 60 ಸಿಬ್ಬಂದಿ ನಗರದ ಆಂತರಿಕ ಭದ್ರತೆ ವಿಭಾಗದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದೆ.

ತರಬೇತಿ ಪಡೆದ 64 ಸಿಬ್ಬಂದಿಯನ್ನು ಎರಡು ತಂಡಗಳಾಗಿ ವಿಭಜಿಸಿ, ನಗರದಲ್ಲಿ ಅಗತ್ಯವಿರುವ ಸ್ಥಳಗಳಿಗೆ ನಿಯೋಜಿಸಲಾಗಿದೆ.  ನಗರದ ಎಲ್ಲಾ 8 ವಿಭಾಗಗಳಲ್ಲಿ ಒಂದು ತಂಡವನ್ನು ನಿಯೋಜಿಸಲು ಚಿಂತಿಸಲಾಗಿದೆ. ಸ್ಟನ್ ಗ್ರೇನೇಡ್ ಗಳು, ಮೆಷಿನ್ ಗನ್ ಸೇರಿದಂತೆ ಮತ್ತಿತರ ಆಧುನಿಕ ಸಶಸ್ತ್ರಗಳ ಬಗ್ಗೆ ಗರಡು ಪಡೆ ಕಮಾಂಡೋಗಳಿಂದ ಇವರಿಗೆ ತರಬೇತಿ ನೀಡಲಾಗಿದೆ. ಕಟ್ಟಡ ಅಥವಾ ಚಲಿಸುವ ವಾಹನಗಳಲ್ಲಿ ಒತ್ತೆಯಾಳು ಸನ್ನಿವೇಶಗಳನ್ನು ನಿಭಾಯಿಸುವ ಬಗ್ಗೆಯೂ ಈ ತಂಡಗಳಿಗೆ ತರಬೇತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಗ್ರರ ದಾಳಿಯಾದಾಗ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಬಗ್ಗೆ ಈ ತಂಡಗಳಿಗೆ ತರಬೇತಿ ನೀಡಲಾಗಿದೆ. ಅಂತಾರಾಷ್ಟ್ರೀಯ ಮಹತ್ವವುಳ್ಳ ಕಾರ್ಯಕ್ರಮಗಳಿಗೆ ಭದ್ರತೆ ನಿಯೋಜನೆ ಅಲ್ಲದೇ, ಉಗ್ರ ವಿರೋಧಿ, ನಕ್ಸಲ್ ವಿರೋಧಿ ಕಾರ್ಯಾಚರಣೆ ಬಗ್ಗೆಯೂ ತರಬೇತಿ ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com