ಹಾಸನ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ; ಕಸಾಯಿಖಾನೆಗೆ ಸಾಗಿಸುತ್ತಿದ್ದ 18 ಕರುಗಳ ಸಾವು

ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 41 ಕರುಗಳ ಪೈಕಿ 18 ಕರುಗಳು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿಯಲ್ಲಿ ಗುರುವಾರ ನಡೆದಿದೆ. 
ಅಪಘಾತ (ಸಂಗ್ರಹ ಚಿತ್ರ)
ಅಪಘಾತ (ಸಂಗ್ರಹ ಚಿತ್ರ)
Updated on: 

ಹಾಸನ: ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 41 ಕರುಗಳ ಪೈಕಿ 18 ಕರುಗಳು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿಯಲ್ಲಿ ಗುರುವಾರ ನಡೆದಿದೆ. 

ಗ್ರಾಮಸ್ಥರ ಸಹಾಯ ಪಡೆದು ಪೊಲೀಸರು 23 ಕರುಗಳನ್ನು ರಕ್ಷಿಸಿ ಅವುಗಳನ್ನು ಮೈಸೂರಿನ ಪಿಂಜರಾಪೋಲ್ ಸೊಸೈಟಿಗೆ ದಾಖಲಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಬೇಲೂರು ಶಾಸಕ ಕೆಎಸ್ ಲಿಂಗೇಶ್ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿಯೂ ಈ ಘಟನೆ ಬಗ್ಗೆ ಶಾಸಕರು ಬರೆದಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಹಾಸನ, ಮಡಿಕೇರಿ, ಮಂಗಳೂರಿನಲ್ಲಿದ್ದ ಕಸಾಯಿಖಾನೆಗೆ ತೆರಳುವ ಧಾವಂತದಲ್ಲಿ  ವೇಗವಾಗಿ ಚಲಿಸುತ್ತಿದ್ದಾಗ ತಿರುವಿನಲ್ಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಚಾಲಕ 

ವಾಹನದಲ್ಲಿ ಸಾಗಿಸುತ್ತಿದ್ದ ಕರುಗಳ ಬಾಯಿ ಹಾಗೂ ಕಾಲುಗಳನ್ನು ಪ್ಲಾಸ್ಟಿಕ್ ಹಗ್ಗದಿಂದ ಬಿಗಿಯಲಾಗಿತ್ತು ಹಾಗೂ ಟಾರ್ಪಾಲ್ ನಿಂದ ಮುಚ್ಚಲಾಗಿತ್ತು. ಉಸಿರುಗಟ್ಟಿ ಕರುಗಳು ಸಾವನ್ನಪ್ಪಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ವಾಹನ ಅಪಘಾತಕ್ಕೆ ಒಳಗಾದರೂ ಸಹ ಚಾಲಕ ಪವಾಡಸದೃಶವಾಗಿ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಎಸ್ ಪಿ ಕೆಆರ್ ಶ್ರೀನಿವಾಸಗೌಡ ಭೇಟಿ ನೀಡಿ ಪರಿಶೀಲಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಹಳೇಬೀಡು ಪೊಲೀಸರು ಸರಕು ಸಾಗಣೆ ವಾಹನದ ಮಾಲಿಕ ಪರಮೇಶ್ ಹಾಗೂ ತಪ್ಪಿಸಿಕೊಂಡಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕರುಗಳ ಸಾವಿಗೆ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥ ಬಸವರಾಜ ವಾಹನಗಳಲ್ಲಿ ಗೋವುಗಳ ಕಳ್ಳಸಾಗಣೆಯನ್ನು ತಡೆಯುವಲ್ಲಿ ಪೊಲೀಸರ ವೈಫಲ್ಯವನ್ನು ಬೊಟ್ಟು ಮಾಡಿದ್ದಾರೆ. ಪೊಲೀಸರು ಹಾಗೂ ಅಕ್ರಮ ಗೋವು ಸಾಗಣೆ ಮಾಡುವವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com