ಅಫ್ಘಾನಿಸ್ತಾನ: ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಇಬ್ಬರು ಪಾದ್ರಿಗಳು ಇಂದು ತಾಯ್ನಾಡಿಗೆ

ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಇಬ್ಬರು ಪಾದ್ರಿಗಳು ಭಾನುವಾರ ತಾಯ್ನಾಡಿಗೆ ಮರಳುತ್ತಿದ್ದಾರೆ. 
ಕಾಬುಲ್ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಆಫ್ಘನ್ ಮಹಿಳೆಯರು
ಕಾಬುಲ್ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಆಫ್ಘನ್ ಮಹಿಳೆಯರು
Updated on

ಮಂಗಳೂರು: ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಇಬ್ಬರು ಪಾದ್ರಿಗಳು ಇಂದು ತಾಯ್ನಾಡಿಗೆ ಮರಳುತ್ತಿದ್ದಾರೆ. 

ನೋಡೆಲ್‌ ಅಧಿಕಾರಿ ಎಡಿಜಿಪಿ ಉಮೇಶ್ ಕುಮಾರ್‌ ಅವರು ಮಾತನಾಡಿ, ಮಂಗಳೂರಿನ ಫಾ.ಜೆರೋಮ್‌ ಸಿಕ್ವೇರಾ ಮತ್ತು ತೀರ್ಥಹಳ್ಳಿಯ ಫಾ. ರಾಬರ್ಟ್‌ ರೊಡ್ರಿಗಸ್‌ ಅವರು ಭಾನುವಾರ ಮಂಗಳೂರಿಗೆ ಆಗಮಿಸುತ್ತಿದ್ದಾರೆಂದು ಹೇಳಿದ್ದಾರೆ. 

ಫಾದರ್ ರೋಡ್ರಿಗಸ್ ಅವರ ಸಂಬಂಧಿಕರು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಭಾರತಕ್ಕೆ ಮರಳುವಂತೆ ಮಾಡುವಂತೆ ನೆರವು ಕೋರಿದ್ದರು. ಬಳಿಕ ರೋಡ್ರಿಗಸ್ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಯಿತು. ಸಂಪರ್ಕ ಸಾಧಿಸಿದ ಬಳಿಕ ಈ ಮನವಿಯನ್ನು ವಿದೇಶಾಂಗ ಸಚಿವಾಲಯ ಅಧಿಕಾರಿಗಳಿಗೆ ತಿಳಿಸಲಾಯಿತು. ಇದೀಗ ಈ ಸಮಸ್ಯೆಯನ್ನು ವಿದೇಶಾಂಗ ಸಚಿವಾಲಯ ಬಗೆಹರಿಸಿದ್ದು, ಇಬ್ಬರೂ ಪಾದ್ರಿಗಳೂ ತಾಯ್ನಾಡಿಗೆ ಮರಳುತ್ತಿದ್ದಾರೆಂದು ತಿಳಿಸಿದ್ದಾರೆ. 

ಭಾನುವಾರ ಕಾಬುಲ್ ನಿಂದ ಹೊರಡುವ ಭಾರತೀಯ ವಾಯುಪಡೆಯ ಎರಡು ವಿಮಾನಗಳಲ್ಲಿ 250 ಭಾರತೀಯರ ಜೊತೆಗೆ ಇಬ್ಬರು ಪಾದ್ರಿಗಳೂ ಇರಲಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com