ಪ್ರವಾಸಿಗರನ್ನು ಆಕರ್ಷಿಸುತ್ತಿರುವ ನೀಲಕುರಂಜಿ ಹೂಗಳು; ಹೆಲಿ ರೈಡ್ ವ್ಯವಸ್ಥೆ!

ಕೂರ್ಗ್ ನಲ್ಲಿ ಅಪರೂಪದ ನೀಲ ಕುರಂಜಿ ಹೂಗಳು ಅರಳುವ ಮೂಲಕ ಪರಿಸರ ಪ್ರೇಮಿಗಳು, ಸಸ್ಯ ಪ್ರಿಯರು, ಫೋಟೋಗ್ರಾಫರ್ ಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ನೀಲ ಕುರಂಜಿ ಹೂಗಳು
ನೀಲ ಕುರಂಜಿ ಹೂಗಳು
Updated on

ಬೆಂಗಳೂರು: ಕೂರ್ಗ್ ನಲ್ಲಿ ಅಪರೂಪದ ನೀಲ ಕುರಂಜಿ ಹೂಗಳು ಅರಳುವ ಮೂಲಕ ಪರಿಸರ ಪ್ರೇಮಿಗಳು, ಸಸ್ಯ ಪ್ರಿಯರು, ಫೋಟೋಗ್ರಾಫರ್ ಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.ಈ ಹೂಗಳಿಂದಾಗಿ ಕೊಡಗಿನ ಮಾಂದಲಪಟ್ಟಿ ಮತ್ತು ಕೋಟೆ ಬೆಟ್ಟ ಸಂಪೂರ್ಣ ನೀಲಿಮಯವಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. 12 ವರ್ಷಕ್ಕೊಮ್ಮೆ ನಂತರ ಅರಳುವ ಈ ಹೂಗಳ ಸೌಂದರ್ಯ ಸವಿಯಲು ಪ್ರವಾಸಿಗರು ಭಾರತದ ಸ್ಕಾಟ್ ಲ್ಯಾಂಡ್ ನತ್ತ ಆಗಮಿಸುತ್ತಿದ್ದಾರೆ. 

ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಧೀರ್ಘಕಾಲದಿಂದ ನೆನೆ ಗುದಿಗೆ ಬಿದ್ದಿರುವ ಹೆಲಿ ಟೂರಿಸಂನ್ನು ಪರಿಶೀಲಿಸಬೇಕಾಗಿದೆ. ಬೆಟ್ಟದಲ್ಲಿ ಅಪರೂಪಕ್ಕೆ ಅರಳುವ ನೀಲ ಕುರಂಜಿ ಹೂಗಳ ಸೌಂದರ್ಯ ಸವಿಯುವ ನಿಟ್ಟಿನಲ್ಲಿ 
ಬೆಂಗಳೂರಿನ ಸಂಸ್ಥೆಯೊಂದು ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಲಿ ರೈಡ್ ವ್ಯವಸ್ಥೆ ಮಾಡಿದೆ.

ಯಲಹಂಕದ ವಾಯುನೆಲೆಯಿಂದ ಕೂರ್ಗ್ ವರೆಗೆ ಈ ವಾರದ ಆರಂಭದಲ್ಲಿ ಈಗಾಗಲೇ ಒಂದು ಟ್ರಿಪ್ ಮುಗಿದಿದೆ. ಈಗ ಕೂರ್ಗ್ ಗೆ ಮತ್ತೊಂದು ಪ್ಯಾಕೇಜ್ ಟೂರ್ ಗೆ ಅವಕಾಶವಿದೆ. ಇದರಲ್ಲಿ ಮಾಂದಲಪಟ್ಟಿಗೆ ತೆರಳಲು ಅವಕಾಶ ಮಾಡಿಕೊಡುವುದಾಗಿ ತುಂಬೆ ವಿಮಾನಯಾನ ಖಾಸಗಿ ಕಂಪನಿ ನಿರ್ದೇಶಕ ಗೋವಿಂದ್ ನಾಯರ್ ತಿಳಿಸಿದ್ದಾರೆ.

12 ವರ್ಷಕ್ಕೊಮ್ಮೆ ಅರಳುವ ಈ ಹೂಗಳ ಸೌಂದರ್ಯ ಸವಿಯಲು ಬರುವ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅನೇಕ ರೆಸಾರ್ಟ್ ಗಳು ಪ್ಯಾಕೇಜ್ ಮೂಲಕ ತೆರಳುವ ಪ್ರವಾಸಿರಿಗೆ ವಿಶೇಷ ಆಫರ್ ನೀಡುತ್ತಿವೆ. ಪಾರ್ಕ್ ಗಳು, ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅರಣ್ಯಾಧಿಕಾರಿಗಳು ಆಕ್ಷೇಪಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ರಾಜ್ಯದಲ್ಲಿ ಸುಮಾರು 45 ಜಾತಿಯ ಕುರಂಜಿ ಹೂಗಳಿವೆ, ಕೆಲವು ಆರು ತಿಂಗಳಿಗೆ ಅರಳಿದರೆ ಮತ್ತೆ ಕೆಲವು 11 ಅಥವಾ 12 ವರ್ಷಕ್ಕೊಮ್ಮೆ ಅರಳುತ್ತವೆ. ಆದ್ದರಿಂದ ಆಡಳಿತ ಪ್ರವಾಸೋದ್ಯವನ್ನು ಖಾತ್ರಿಪಡಿಸಬೇಕು ಮತ್ತು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಅವಕಾಶ ನೀಡಬಾರದು, ಆದ್ದರಿಂದ ಈ ಹೂಗಳನ್ನು ರಕ್ಷಿಸಬಹುದಾಗಿದೆ ಎಂದು ಸಸ್ಯಶಾಸ್ತ್ರಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com