ಆಸ್ಪತ್ರೆಗಳಲ್ಲಿ  ಅವಶ್ಯಕ‌ ಔಷಧಿ, ತಪಾಸಣಾ ಕಿಟ್  ಒದಗಿಸಲು ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿ ರಚನೆ

ರಾಜ್ಯದ ‌ಎಲ್ಲ‌ ಆಸ್ಪತ್ರೆಗಳಲ್ಲಿ ಅವಶ್ಯಕ‌ವಿರುವ ಔಷಧಿ ಮತ್ತು‌ ಪ್ರಯೋಗಾಲಯಗಳಲ್ಲಿ ಅವಶ್ಯಕವಾಗಿರುವ ಉಪಕರಣ, ರಾಸಾಯನಿಕ ಹಾಗೂ ತಪಾಸಣಾ ಕಿಟ್ ಗಳನ್ನು ಒದಗಿಸಲು ನೇರವಾಗುವ ನಿಟ್ಟಿನಲ್ಲಿ ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿಯನ್ನು ರಚಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ‌ಎಲ್ಲ‌ ಆಸ್ಪತ್ರೆಗಳಲ್ಲಿ ಅವಶ್ಯಕ‌ವಿರುವ ಔಷಧಿ ಮತ್ತು‌ ಪ್ರಯೋಗಾಲಯಗಳಲ್ಲಿ ಅವಶ್ಯಕವಾಗಿರುವ ಉಪಕರಣ, ರಾಸಾಯನಿಕ ಹಾಗೂ ತಪಾಸಣಾ ಕಿಟ್ ಗಳನ್ನು ಒದಗಿಸಲು ನೇರವಾಗುವ ನಿಟ್ಟಿನಲ್ಲಿ ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕರು ಈ ಸಮಿತಿಯ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಐವರು ಸದಸ್ಯರು ಹಾಗೂ ಒಬ್ಬರು ಸದಸ್ಯ ಕಾರ್ಯದರ್ಶಿ ಇರುತ್ತಾರೆ. 

ರಾಜ್ಯದಲ್ಲಿನ ಆರೋಗ್ಯ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಇ- ಔಷಧ ಸಾಫ್ಟ್ ವೇರ್ ಮೂಲಕ ಔಷಧ ಖರೀದಿ ಮಾಡಲು ಹಾಗೂ ಈ ಔಷಧಿಗಳ ಅವಶ್ಯಕ ಬಳಕೆ ಮತ್ತು ಪ್ರಯೋಗ ಶಾಲೆಗಳಲ್ಲಿ ಅವಶ್ಯವಿರುವ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ವಿವರವನ್ನು  ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

ಈ ಮೇಲ್ವಿಚಾರಣಾ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು ಹಾಗೂ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಿ ಇ-ಔಷಧ ಸಾಫ್ಟ್ ವೇರ್ ನಲ್ಲಿ ದಾಖಲಾಗುವ ದತ್ತಾಂಶವನ್ನು ಪರಿಶೀಲಿಸುವುದು, ಜಿಲ್ಲಾವಾರು ಔಷಧ, ಪ್ರಯೋಗಶಾಲಾ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ಬೇಡಿಕೆ ಪರಿಶೀಲಿಸಿ, ನ್ಯೂನ್ಯತೆಯನ್ನು ಗುರುತಿಸಿ ಸರಿಪಡಿಸುವುದು ಮತ್ತಿತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com