ಆರೋಗ್ಯ ಶಿಬಿರದಲ್ಲಿ ಅತ್ಯಾಚಾರದ ಘಟನೆ ಬೆಳಕಿಗೆ...

ಹಿಂದೊಮ್ಮೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಎನ್ ಜಿಒ ನಡೆಸುತ್ತಿದ್ದ ಆರೋಗ್ಯ ಶಿಬಿರದಲ್ಲಿ ಬೆಳಕಿಗೆ ಬಂದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 
ಅತ್ಯಾಚಾರ
ಅತ್ಯಾಚಾರ
Updated on

ಬೆಂಗಳೂರು: ಹಿಂದೊಮ್ಮೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಎನ್ ಜಿಒ ನಡೆಸುತ್ತಿದ್ದ ಆರೋಗ್ಯ ಶಿಬಿರದಲ್ಲಿ ಬೆಳಕಿಗೆ ಬಂದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 

16 ವರ್ಷದ ಬಾಲಕಿ ಪರಿಚಯಸ್ಥರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಾರೆ.  ಒಂದು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದರೂ ಬಾಲಕಿಯ ತಾಯಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ಆರೋಪಿಯಿಂದ ತನ್ನ ಮಗಳಿಗೆ ಏನಾದರೂ ಸಮಸ್ಯೆಯಾಗಬಹುದು ಎಂಬ ಭೀತಿಯಿಂದ ಮನೆಯನ್ನೇ ಬದಲಾಯಿಸಿದ್ದರು.

ಆಸ್ರಾ, ಎಂಬ ಎನ್ ಜಿಒ ನಗರದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿತ್ತು. ಸಂತ್ರಸ್ತೆಯ ಮನೆಯ ಬಳಿಯೇ ಈ ಶಿಬಿರ ಆಯೋಜನೆಗೊಂಡಿದ್ದರಿಂದ ಆಕೆಯನ್ನೂ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಎನ್ ಜಿಒ ಸ್ವಯಂಸೇವಕರು ಆ ಬಾಲಕಿ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿರುವುದನ್ನು ಕಂಡಿದ್ದು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಅನುಮಾನ ವ್ಯಕ್ತವಾಗಿದೆ. 

ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಹೆಚ್ಚಿನ ತಪಾಸಣೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ಅಲ್ಲಿನ ವೈದ್ಯರು ದೃಢಪಡಿಸಿದ್ದಾರೆ. ಬಳಿಕ ವೈದ್ಯಕೀಯ-ಕಾನೂನು ನೊಟೀಸ್ ನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಕಳಿಸಲಾಗಿದೆ. ವಿವರಗಳನ್ನು ಪಡೆದ ಪೊಲೀಸರು ಸಂತ್ರಸ್ತೆಯ ಕುಟುಂಬದವರಿಗೆ ಪರಿಚಯವಿದ್ದ ಶಾಜು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

16 ವರ್ಷದ ಬಾಲಕಿ ಅಪಾರ್ಟ್ ಮೆಂಟ್ ನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು, ಕೆಲಸದಿಂದ ವಾಪಸ್ಸಾಗುವುದು ವಿಳಂಬವಾದಾಗಲೆಲ್ಲಾ ಶಾಜು ಎಂಬ ವ್ಯಕ್ತಿ ಆಕೆಯನ್ನು ಮನೆಗೆ ತಲುಪಿಸುತ್ತಿದ್ದ. ನ.09 ರಂದು ರಾತ್ರಿ ಸಂತ್ರಸ್ತೆಯನ್ನು ಇದೇ ರೀತಿ ಮನೆಗೆ ಕರೆದೊಯ್ಯುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಿರಂತರ ಅತ್ಯಾಚಾರವೆಸಗಿದ್ದಾನೆ. ರಾತ್ರಿ ತಡವಾದರೂ ಮಗಳು ಮನೆಗೆ ಬಾರದೇ ಇರುವುದರಿಂದ ಆತಂಕಕ್ಕೆ ಒಳಗಾಗಿ ಶಾಜುಗೆ ಕರೆ ಮಾಡಿದ್ದ ಮಹಿಳೆಗೆ "ಬೈಕ್ ನಲ್ಲಿ ಸಮಸ್ಯೆ ಇದ್ದಿದ್ದರಿಂದ ವಿಳಂಬವಾಗುತ್ತಿದೆ ಎಂಬ ಉತ್ತರ ನೀಡಿದ್ದಾನೆ. ಮರುದಿನ ಬೆಳಿಗ್ಗೆ ಆಕೆಯನ್ನು ಸ್ನೇಹಿತರ ಮನೆಗೆ ಕರೆದೊಯ್ದಿದ್ದಾನೆ. ಈ ಬಳಿಕ ಆಕೆಯನ್ನು ಮನೆಗೆ ತಲುಪಿಸಿದ್ದ. ಮನೆಗೆ ತಲುಪುತ್ತಿದ್ದಂತೆಯೇ ಯುವತಿ ನಡೆದ ವಿಷಯವನ್ನು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಘಟನೆ ಬಗ್ಗೆ ಮನೆಯಲ್ಲಿ ಏನಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಆರೋಪಿ ಹಾಕಿದ್ದ. ಇದರಿಂದ ಭಯಗೊಂಡ ಸಂತ್ರಸ್ತೆಯ ಕುಟುಂಬ ಆ ಪ್ರದೇಶವನ್ನೇ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿತ್ತು. ಆರೋಪಿ ಅತ್ಯಾಚಾರದ ವಿಡಿಯೋವನ್ನೂ ಮಾಡಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com