ಸಿಎಎ, ಎನ್‌ಆರ್‌ಸಿ ಹಿಂಪಡೆಯಬೇಕು'- ಸೈಯದ್ ಸಾದತ್ ಉಲ್ಲಾ ಹುಸೈನಿ ಒತ್ತಾಯ

ಇತ್ತೀಚಿಗೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿರುವಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಕಾಯ್ದೆಗಳನ್ನೂ ಕೇಂದ್ರ  ಸರ್ಕಾರ ಹಿಂಪಡೆಯಬೇಕು ಎಂದು ಜಮಾತೆ ಇ ಇಸ್ಲಾಮಿ ಹಿಂದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತ್ ಉಲ್ಲಾ ಹುಸೈನಿ ಒತ್ತಾಯಿಸಿದ್ದಾರೆ. 
ಸೈಯದ್ ಸಾದತ್ ಉಲ್ಲಾ ಹುಸೈನಿ
ಸೈಯದ್ ಸಾದತ್ ಉಲ್ಲಾ ಹುಸೈನಿ
Updated on

ಬೆಂಗಳೂರು: ಇತ್ತೀಚಿಗೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿರುವಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಕಾಯ್ದೆಗಳನ್ನೂ ಕೇಂದ್ರ  ಸರ್ಕಾರ ಹಿಂಪಡೆಯಬೇಕು ಎಂದು ಜಮಾತೆ ಇ ಇಸ್ಲಾಮಿ ಹಿಂದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತ್ ಉಲ್ಲಾ ಹುಸೈನಿ ಒತ್ತಾಯಿಸಿದ್ದಾರೆ. 

ಶನಿವಾರ ನಗರದಲ್ಲಿದ್ದ ಅವರು ಕೆಲವು ಮುಸ್ಲಿಂ ವಿದ್ವಾಂಸರನ್ನು ಭೇಟಿ ಮಾಡಿ, ಮತಾಂತರ ವಿರೋಧಿ ಕಾನೂನುಗಳ ಕುರಿತು ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ನಿರ್ಣಯವನ್ನು ರೂಪಿಸಿದರು.

 ಚುನಾವಣೆಗಳು ಮತ್ತು ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಗಳನ್ನು ಪ್ರಯೋಗಿಸುತ್ತವೆ. ನಮ್ಮ ದೇಶ ವಿವಿಧ ಧರ್ಮಗಳು, ಭಾಷೆಗಳು, ನಾಗರಿಕತೆಯನ್ನು ಒಳಗೊಂಡಿದ್ದು, ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ, ಇಂದು ಇದರ ಶಾಂತಿಯುತ ವಾತಾವಣರಣವನ್ನು ಕೋಮುವಾದಿ ಶಕ್ತಿಗಳು ಹಾಳು ಮಾಡುತ್ತಿವೆ. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಅಪನಂಬಿಕೆ ವಾತಾವರಣ ಸೃಷ್ಟಿಸಲಾಗುತ್ತಿದೆ. ದುರ್ಬಲ ವರ್ಗದ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಲು ಹೀನ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. 

ಬಲತ್ಕಾರ, ಬೆದರಿಕೆ ಅಥವಾ ಯಾವುದೇ ರೀತಿಯ ಪ್ರಲೋಭನೆಯಿಂದ ಮತಾಂತರಗೊಳ್ಳುವುದನ್ನು ಎಲ್ಲರೂ ವಿರೋಧಿಸಬೇಕು, ಆದರೆ ಜನರು ತಮ್ಮ ಇಚ್ಛೆಯ ನಂಬಿಕೆಯನ್ನು ಆಚರಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಹೇಳಿದ ಹುಸೈನಿ,  ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಲಾಗಿದೆ ಮತ್ತು ಅವರ ಪೂಜಾ ಸ್ಥಳಗಳು ಮತ್ತು ಚರ್ಚ್‌ಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com