ಕ್ಲಿನಿಕ್ ಸೇವಾ ಲೋಪ ಸಾಬೀತು: ದೂರುದಾರರಿಗೆ 3 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕರ ವೇದಿಕೆ ನಿರ್ದೇಶನ

ದೂರುದಾರರು ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು. ಈ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಹಕರ ವೇದಿಕೆ ನಗರದ ಶ್ರವಣ ಕ್ಲಿನಿಕ್ ಒಂದಕ್ಕೆ 3 ಲಕ್ಷ ರೂ.ಗಳನ್ನು ದೂರುದಾರಿಗೆ ನೀಡುವಂತೆ ನಿರ್ದೇಶನ ನೀಡಿದೆ. 

ಸುದೀಪ್ ಹೇಮಾರೆಡ್ಡಿ ಎಂಬುವವರು ಕ್ಲಿನಿಕ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 2019ರಲ್ಲಿ ಸುದೀಪ್ ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ಅದರ ಮೊತ್ತ 2.5 ಲಕ್ಷ ರೂ. ಅದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು.

ಎರಡನೇ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು. ಅಲ್ಲದೆ 2.5 ಲಕ್ಷ ಹಣವನ್ನು ಮರಳಿಸಲೂ ನಿರಾಕರಿಸಿದರು. ಆಗ ಸುದೀಪ್ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆಯಲ್ಲಿ ಕ್ಲಿನಿಕ್ ತಪ್ಪು ಎಸಗಿರುವುದು ಸಾಬೀತಾಗಿತ್ತು. ಹೀಗಾಗಿ ಸಾಧನದ ಶುಲ್ಕ ಸೇರಿದಂತೆ 50,000 ಪರಿಹಾರ ಸೇರಿ ಒಟ್ಟು 3 ಲಕ್ಷ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ವೇದಿಕೆ ಕ್ಲಿನಿಕ್ಕಿಗೆ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com