ಸರ್ಕಾರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾದರೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆ ಮುಚ್ಚುವುದಾಗಿ RUPSA ಎಚ್ಚರಿಕೆ

ಅವೈಜ್ಞಾನಿಕ ಸುತ್ತೋಲೆಯಿಂದ 10,000 ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗುವಂತಾಗಲಿದ್ದು, ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ   ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (ರುಪ್ಸಾ ಕರ್ನಾಟಕ) ಎಚ್ಚರಿಕೆ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅವೈಜ್ಞಾನಿಕ ಸುತ್ತೋಲೆಯಿಂದ 10,000 ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗುವಂತಾಗಲಿದ್ದು, ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ   ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (RUPSA Karnataka) ಎಚ್ಚರಿಕೆ ನೀಡಿದೆ. 

ಒಂದು ಕಡೆ ಕೊರೋನಾದಿಂದ ಅನುದಾನರಹಿತ ಶಾಲೆಗಳಿಗೆ ಆರ್ಥಿಕ ಹೊಡೆತ ಬಿದಿದ್ದರೆ ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳು, ದುರಾಸೆಯ ಜನರೊಂದಿಗೆ ಬಿದ್ದು,  ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಕ್ಕಳು  ಅನುದಾನಿತ ರಹಿತ ಖಾಸಗಿ ಶಾಲೆಗಳಿಗೆ ಸೇರದಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಕೂಡಲೇ ನಿಯಮ ಪಾಲನೆಗೆ ಸುತ್ತೋಲೆಯಲ್ಲಿ ಬೇಡಿಕೆ ಇಟ್ಟಿರುವುದು ಸಮಸ್ಯೆಯಾಗುತ್ತಿದೆ ಎಂದು ರಾಜ್ಯ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. 

ಮಾನ್ಯತೆ ನವೀಕರಣಕ್ಕೆ 61 ದಾಖಲೆಗಳನ್ನು ಕೋರಲಾಗಿದ್ದು, ಆರು ದಿನಗಳ ಗಡುವು ನೀಡಲಾಗಿದೆ. ಇದು ಅಧಿಕಾರಿಗಳಿಗೆ ಲಂಚ ನೀಡಲು ದಾರಿ ಮಾಡಿಕೊಟ್ಟಿದೆ. 1995 ರ ನಂತರ ಸ್ಥಾಪಿಸಲಾದ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸರ್ಕಾರವು ಸಹಾಯವನ್ನು ನೀಡಿಲ್ಲ, ಅಲ್ಲದೇ ಶಾಲಾ ಕಾರ್ಮಿಕರಿಗೆ ಕೋವಿಡ್ ಪ್ಯಾಕೇಜ್ ಅನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ ಎಂದು ಅವರು ಹೇಳಿದರು.

ಈ ವರ್ಷವೂ ಕ್ರೀಡಾ ನಿಧಿ ಶುಲ್ಕ ವಿಧಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದರಂತೆ, 6-10 ನೇ ತರಗತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದನ್ನು ಪಾವತಿಸಲು ಕೇಳಲಾಗುತ್ತದೆ.

6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ತಲಾ 5 ರೂ., 8-10ನೇ ತರಗತಿಯ ವಿದ್ಯಾರ್ಥಿಗಳು ತಲಾ 15 ರೂ. ಪಾವತಿಸಬೇಕಾಗಿದೆ. ಕೋವಿಡ್-19 ಕಾರಣದಿಂದಾಗಿ ಕಳೆದ ವರ್ಷ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಬಳಸಲಾಗಿದ್ದ ಶುಲ್ಕವನ್ನು ಸಂಗ್ರಹಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಖಾಸಗಿ ಶಾಲೆಗಳು ಶುಲ್ಕಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com