ಬೆಂಗಳೂರು: ಯಲಹಂಕ ವಾಯುನೆಲೆ ತಲುಪಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪಾರ್ಥಿವ ಶರೀರ

ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ವಾಯುಪಡೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಯಲಹಂಕ ವಾಯುನೆಲೆ ತಲುಪಿತು. ವಾಯಪಡೆಯ ಸೇನಾ ಅಧಿಕಾರಿಗಳು ಅಂತಿಮ ಗೌರವ ಸಲ್ಲಿಸಿದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪಾರ್ಥಿವ ಶರೀರ
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪಾರ್ಥಿವ ಶರೀರ

ಬೆಂಗಳೂರು: ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ವಾಯುಪಡೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಯಲಹಂಕ ವಾಯುನೆಲೆ ತಲುಪಿತು. ವಾಯಪಡೆಯ ಸೇನಾ ಅಧಿಕಾರಿಗಳು ಅಂತಿಮ ಗೌರವ ಸಲ್ಲಿಸಿದರು.

ತಮಿಳುನಾಡಿನ ಕುನೂರು ಬಳಿ ಡಿಸೆಂಬರ್ 8 ರಂದು ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು 8 ದಿನಗಳವರೆಗೂ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ವರುಣ್ ಸಿಂಗ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತ: ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ; ಪ್ರಧಾನಿ ಸೇರಿ ಹಲವರು ಸಂತಾಪ
ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಯಲಹಂಕ ವಾಯುನೆಲೆಯಿಂದ ವಿಶೇಷ ವಿಮಾನ ಮೂಲಕ ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com