ನನಗೇನು ಭಯ! ಮಾಗಡಿ ರಸ್ತೆಯಲ್ಲಿ ಪೋಲಿ ಆಟ ಆಡಿ ಬಂದವನು ನಾನು: ಹಂಸಲೇಖ

ನನಗೇನು ಭಯ! ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೊಂದು ಚರಿತ್ರೆಯೇ ಇದೆ ಎಂದು ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.
ಹಂಸಲೇಖ
ಹಂಸಲೇಖ
Updated on

ಬೆಂಗಳೂರು: ನನಗೇನು ಭಯ! ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೊಂದು ಚರಿತ್ರೆಯೇ ಇದೆ ಎಂದು ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಬಹುರೂಪಿ ಪ್ರಕಾಶನ ಮತ್ತು ಲಂಡನ್ ನ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊಫೆಸರ್ ಎಸ್. ಜಿ. ಸಿದ್ದರಾಮಯ್ಯ ಅವರ ಆತ್ಮಕಥೆ 'ಯರೆಬೇವು' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಇತ್ತೀಚಿಗೆ ಒಂದು ವಿವಾದವಾಗಿ ನನಗೆ ಗೊತ್ತಿಲ್ಲದ ಸಮುದಾಯದವರೆಲ್ಲ ನನ್ನ ಜೊತೆಗೆ ನಿಂತರು. ಹೀಗೆಲ್ಲ ಆಗುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಈ ಹಿಂದೆ ಬರೆದುಕೊಳ್ಳದೇ ಭಾಷಣ ಮಾಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಜೀವನದಲ್ಲಿ ಮೊದಲು ಬರೆದುಕೊಂಡು ಮಾತನಾಡುತ್ತಿದ್ದೇನೆ ಎಂದರು.

ನಾನು ಭಯಸ್ತನಲ್ಲ, ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ಆದರೆ, ನುಡಿದರೆ ಮುತ್ತಿನ ಹಾರದಂತೆ ಇರಬೇಕು. ನುಡಿ ಕೆಲವೊಮ್ಮೆ ಸ್ಫಟಿಕದ ಸಲಾಕೆಯೂ ಆಗುತ್ತದೆ. ನಾನು ವಿವಾದದಲ್ಲಿ ಸಿಲುಕಿದಾಗ ನನ್ನ ರಕ್ಷಣೆಗೆ ಬಂದವರು ಪ್ರೊ. ಸಿದ್ದರಾಮಯ್ಯ ಎಂದು ಸ್ಮರಿಸಿದರು.

ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ, ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು. ಎರಡು ಹೊತ್ತು ಬಸವನ ಹಸಿವು ಪ್ರೋಟಿನ್ ನೀಡುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com