ನಿಮ್ಮ ಸುಪರ್ದಿಯಲ್ಲಿರುವ ಮರಗಳ ಬಗ್ಗೆ ಮಾಹಿತಿ ಅಪ್ ಲೋಡ್ ಮಾಡಲು ಬಂದಿದೆ 'ದಿ ಬೆಂಗಳೂರು ಟ್ರೀ ಸೆನ್ಸಸ್ ಆ್ಯಪ್'!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಾಗರಿಕರು ತಮಗೆ ಸೇರಿದ ಜಮೀನಿನಲ್ಲಿ ಅಥವಾ ತಮ್ಮ ಸುಪರ್ದಿಯಲ್ಲಿರುವ ಮರಗಳ ಮಾಹಿತಿಯನ್ನು ಸುಲಭವಾಗಿ ಅಪ್ ಲೋಡ್ ಮಾಡಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಾಗರಿಕರು ತಮಗೆ ಸೇರಿದ ಜಮೀನಿನಲ್ಲಿ ಅಥವಾ ತಮ್ಮ ಸುಪರ್ದಿಯಲ್ಲಿರುವ ಮರಗಳ ಮಾಹಿತಿಯನ್ನು ಸುಲಭವಾಗಿ ಅಪ್ ಲೋಡ್ ಮಾಡಬಹುದಾಗಿದೆ.

ದಿ ಬೆಂಗಳೂರು ಟ್ರೀ ಸೆನ್ಸಸ್ ಆ್ಯಪ್ ನಲ್ಲಿ ಮರಗಳ ಗಣತಿ ಮಾಡಬಹುದಾಗಿದೆ. ಜೂನ್ 30 ರಂದು ಸಿಎಂ ಯಡಿಯೂರಪ್ಪ ಈ ಆ್ಯಪ್ ಲೋಕಾರ್ಪಣೆಗೊಳಿಸಿದರು. ನಾಗರಿಕರು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ನಾಗರಿಕರು ಮಾಹಿತಿಯನ್ನು ಸುಲಭವಾಗಿ ಅಪ್‌ಲೋಡ್ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದರಲ್ಲಿ ಜಿಪಿಎಸ್ , ಮರಗಳ ಅಳತೆ, ಜಾತಿಗಳು ಮತ್ತು ಇತರ ಎಲ್ಲಾ ವಿವರಗಳಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್ ಹೇಳಿದ್ದಾರೆ.

ನಾಗರಿಕರಿಂದ ಸ್ವಯಂಪ್ರೇರಿತ ಘೋಷಣೆ ಪ್ರಕ್ರಿಯೆಯು ಈಗ ಮರಗಳ ಗಣತಿಗೆ ಸಹಾಯ ಮಾಡುತ್ತದೆ. ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಪ್ರಕಾರ, ಒಂದು ಮರವನ್ನು ಕನಿಷ್ಠ 27.5 ಸೆಂ.ಮೀ ಸುತ್ತಳತೆ ಹೊಂದಿರುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.

ಖಾಸಗಿ ಆಸ್ತಿಗಳಲ್ಲಿನ ಮರಗಳಿಗೆ ಬೆಂಗಳೂರು ನಗರ ವಿಭಾಗ ಅರಣ್ಯ ಇಲಾಖೆ ಜವಾಬ್ದಾರಿಯಾಗಿದ್ದು. ರಸ್ತೆ ಬದಿ, ಉದ್ಯಾನವನಗಳು ಮತ್ತು ಉದ್ಯಾನಗಳಲ್ಲಿನ ಮರಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ವಿಭಾಗದ ಜವಾಬ್ದಾರಿಯಾಗಿದೆ.

ಮರಗಳಗಣತಿಯ ಕೆಲಸವು ಆರು ತಿಂಗಳ ಹಿಂದೆಯೇ ಪ್ರಾರಂಭವಾಯಿತು, ಆದರೆ ಪ್ರತಿ ಮರದ ಜಿಪಿಎಸ್ ಸ್ಥಳವನ್ನು ಅದರ ಸುತ್ತಳತೆಯೊಂದಿಗೆ ದಾಖಲಿಸಲಾಗುತ್ತಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com