ಬೆಂಗಳೂರು: ಕಳೆದ 6 ತಿಂಗಳಲ್ಲಿ 45 ಮಾನವ ಕಳ್ಳಸಾಗಣೆ ಪ್ರಕರಣ ದಾಖಲು

ಜೂನ್ 30 ರ ಹೊತ್ತಿಗೆ 45 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ್ದಾಗಿ ಬೆಂಗಳೂರು ನಗರ ಪೋಲೀಸರು ಹೇಳಿದ್ದು ಅದರಲ್ಲಿ 40 ಪ್ರಕರಣಗಳನ್ನು ಅನೈತಿಕ ಸಾಗಾಟ(ತಡೆಗಟ್ಟುವಿಕೆ) ಕಾಯ್ದೆ (ಐಟಿಪಿಎ), 1956 ರ ಅಡಿಯಲ್ಲಿ ದಾಖಲಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೂನ್ 30 ರ ಹೊತ್ತಿಗೆ 45 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ್ದಾಗಿ ಬೆಂಗಳೂರು ನಗರ ಪೋಲೀಸರು ಹೇಳಿದ್ದು ಅದರಲ್ಲಿ 40 ಪ್ರಕರಣಗಳನ್ನು ಅನೈತಿಕ ಸಾಗಾಟ(ತಡೆಗಟ್ಟುವಿಕೆ) ಕಾಯ್ದೆ (ಐಟಿಪಿಎ), 1956 ರ ಅಡಿಯಲ್ಲಿ ದಾಖಲಿಸಲಾಗಿದೆ. “ಪೊಲೀಸರು 111 ಮಹಿಳಾ ಸಂತ್ರಸ್ತರನ್ನು ರಕ್ಷಿಸಿದ್ದಾರೆ ಮತ್ತು 28 ಮಹಿಳೆಯರು ಸೇರಿದಂತೆ 134 ಜನರನ್ನು ಬಂಧಿಸಿದ್ದಾರೆ” ಅಧಿಕೃತ ಮೂಲವೊಂದು ತಿಳಿಸಿದೆ.

ಇತ್ತೀಚೆಗೆ, ರಾಮಮೂರ್ತಿ ನಗರ ಮತ್ತು ಜೀವನ್ ಬೀಮಾ ನಗರ ಪೊಲೀಸ್ ಠಾಣೆಗಳಲ್ಲಿ ಬಾಂಗ್ಲಾದೇಶದ ಮಹಿಳೆಯ  ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ (ಐಟಿಪಿಎ) ಸೆಕ್ಷನ್ 3, 4, 5, 6 ಮತ್ತು ಸೆಕ್ಷನ್ 370 ರ ಅಡಿಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34 ರೊಂದಿಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ 12 ಜನರನ್ನು ಬಂಧಿಸಿ ಚಾರ್ಜ್‌ಶೀಟ್ ಮಾಡಲಾಗಿದೆ. ಈ ಪೈಕಿ 11 ಆರೋಪಿಗಳು ಮತ್ತು ಅತ್ಯಾಚಾರ ಸಂತ್ರಸ್ತೆ ಸಹ ಬಾಂಗ್ಲಾದೇಶದ ಪ್ರಜೆಗಳು.

"ತನಿಖೆಯ ನಂತರ, ಪೊಲೀಸರು ಸುಸಂಘಟಿತ ಮಾನವ ಕಳ್ಳಸಾಗಣೆದಾರರ ಜಾಲವನ್ನು ಪತ್ತೆ ಮಾಡಿದ್ದಾರೆ, ಇದರಲ್ಲಿ ಬಾಂಗ್ಲಾದೇಶಿ ಮತ್ತು ಭಾರತೀಯ ಪ್ರಜೆಗಳು ಸೇರಿದ್ದಾರೆ, ಅವರು ಯುವತಿಯರನ್ನು ಪುಸಲಾಯಿಸಿಬಲೆಗೆ ಬೀಳಿಸುತ್ತಾರೆ ಮತ್ತು ಅವರಿಗೆ ಉದ್ಯೋಗ ನೀಡುವ ನೆಪದಲ್ಲಿ ಅವರನ್ನು ಬೇರೆಡೆ ಸಾಗಿಸುತ್ತಾರೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ. “ರಾಮಮೂರ್ತಿ ನಗರ ಪ್ರಕರಣ (ಸಾಮೂಹಿಕ ಅತ್ಯಾಚಾರ) ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆ ಬಗ್ಗೆ ಗಮನ ಸೆಳೆಯುತ್ತದೆ. ಸಂತ್ರಸ್ತೆಯನ್ನು 16 ನೇ ವಯಸ್ಸಿನಲ್ಲಿ ಬಾಂಗ್ಲಾದೇಶದಿಂದ ದುಬೈಗೆ ಮತ್ತು ಅಲ್ಲಿಂದ ಭಾರತಕ್ಕೆ ಸಾಗಿಸಲಾಯಿತು ”ಎಂದು ಮೂಲಗಳು ತಿಳಿಸಿವೆ.

ತನ್ನ ದೇಶದ ನೂರಾರು ಯುವತಿಯರನ್ನು ನೆಟ್‌ವರ್ಕ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಕಳೆದ ವರ್ಷ ನಗರ ಪೊಲೀಸರು ಐಪಿಸಿ ಮತ್ತು ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್‌ಎಲ್‌ಎಲ್) ವಿವಿಧ ವಿಭಾಗಗಳ ಅಡಿಯಲ್ಲಿ 93 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ್ದರು. ಈ ಪೈಕಿ 77 ಪ್ರಕರಣಗಳು ಐಟಿಪಿಎ ಅಡಿಯಲ್ಲಿ ದಾಖಲಾಗಿದ್ದು, 245 ಮಹಿಳಾ ಸಂತ್ರಸ್ತರು ಮತ್ತು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪೊಲೀಸರು 216 ಜನರನ್ನು ಬಂಧಿಸಿದ್ದರು, ಅವರಲ್ಲಿ 172 ಪುರುಷರು ಮತ್ತು 44 ಮಹಿಳೆಯರು ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com