ಬೆಂಗಳೂರು: ಪಾದಚಾರಿಗಳು, ಸ್ಥಳೀಯರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದ ಹಳೇ ಮದ್ರಾಸ್ ರಸ್ತೆಯ ಪಾದಚಾರಿ ಮಾರ್ಗದ ತೆರೆದ ಸ್ಥಳವನ್ನು ಬಿಬಿಎಂಪಿ ಅಧಿಕಾರಿಗಳು ದುರಸ್ತಿ ಮಾಡಿದ್ದಾರೆ.
ಹಲಸೂರು ಮೆಟ್ರೊ ಸ್ಟೇಷನ್ ಹತ್ತಿರವಿರುವ ಹಳೆ ಮದ್ರಾಸ್ ರಸ್ತೆ ಕ್ರಾಸ್ ನ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಚರಂಡಿಗೆ ಸಂಪರ್ಕವಿರುವ ಶೌಚಾಲಯ ಒಳಚರಂಡಿ ಮಾರ್ಗದಿಂದಾಗಿ ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿತ್ತು.
ಚರಂಡಿಯಿಂದ ಬರುವ ಗಬ್ಬು ನಾತದಿಂದಾಗಿ ಇಲ್ಲಿನ ನಿವಾಸಿಗಳು ಹಾಗೂ ಪಾದಚಾರಿಗಳು ಪ್ರತಿನಿತ್ಯ ಸಮಸ್ಯೆ ಅನುಭವಿಸುವಂತಾಗಿತ್ತು.
ಈ ಕುರಿತು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿತ್ತು. ವರದಿ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ದುರಸ್ತಿ ಕಾರ್ಯ ನಡೆಸಿದ್ದಾರೆ.
ಲಕ್ಷ್ಮೀ ಮಾರುಕಟ್ಟೆಯ ಅಂಗಡಿಯೊಂದರ ಮಾಲೀಕ ಮಾತನಾಡಿ, ದಿನಪತ್ರಿಕೆಯಲ್ಲಿ ಈ ಕುರಿತು ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಪಾಲಿಕೆ, ದುರಸ್ತಿ ಕಾರ್ಯ ನಡೆಸಿದೆ. ಇದೀಗ ಮಾದಚಾರಿ ಮಾರ್ಗ ಸುರಕ್ಷಿತವಾಗಿದ್ದು, ನಿರಾಳ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
Advertisement