ನಿರ್ದೇಶಕ ಇಂದ್ರಜೀತ್ ಲಂಕೇಶ್ ಜೊತೆಗಿನ ಫೋಟೋ ವೈರಲ್: ಇತ್ತೀಚಿಗೆ ಭೇಟಿಯಾಗಿಲ್ಲ ಎಂದ ಹೆಚ್‌ಡಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಿಂದ ಸಪ್ಲೈರ್ ಮೇಲಿನ ಹಲ್ಲೆ ಸುದ್ದಿ ಸದ್ದಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಯಾಗಿರುವ ಫೋಟೋ ವೈರಲ್ ಆಗಿದ್ದು, ತಾವು ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್-ಹೆಚ್ ಡಿ ಕುಮಾರಸ್ವಾಮಿ
ಇಂದ್ರಜಿತ್ ಲಂಕೇಶ್-ಹೆಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಿಂದ ಸಪ್ಲೈರ್ ಮೇಲಿನ ಹಲ್ಲೆ ಸುದ್ದಿ ಸದ್ದಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಯಾಗಿರುವ ಫೋಟೋ ವೈರಲ್ ಆಗಿದ್ದು, ತಾವು ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಏಕೆ ಈ ಪ್ರಕರಣದಲ್ಲಿ ನನ್ನ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸ ಇವೆ. ನಾನು ರಾಜಕೀಯ ಮಾಡಿದರೆ ನೇರವಾಗಿ ಮಾಡುತ್ತೇನೆ. ಕದ್ದು ಮುಚ್ಚಿ ರಾಜಕಾರಣ ಮಾಡುವುದಿಲ್ಲ ಎಂದರು. 

ನನ್ನ ರೀತಿ ವಿಷಯವನ್ನು ಮುಕ್ತವಾಗಿ ಪ್ರಸ್ತಾಪ ಮಾಡುವವರು ಈ ದೇಶದಲ್ಲಿ ಯಾರೂ ಇಲ್ಲ. ಮುಕ್ತವಾಗಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಈ ಫೋಟೋ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶ ಏನು ಎಂದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ. ಈ ಹಿಂದೆ ಅನೇಕ ಬಾರಿ ಇಂದ್ರಜಿತ್ ಲಂಕೇಶ್ ನನ್ನನ್ನು ಭೇಟಿಯಾಗಿ ಸಂದರ್ಶನ ತೆಗೆದುಕೊಂಡಿದ್ದಾರೆ. 

ಆದರೆ ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ ಭೇಟಿ ಮಾಡಿಲ್ಲ. ಪ್ರತಿ ನಿತ್ಯ ನೂರಾರು ಜನ ನನ್ನನ್ನು ಭೇಟಿ ಆಗುತ್ತಾರೆ. ಯುವಕರು, ವಯಸ್ಸಾಗಿರುವವರು ಫೊಟೋ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನಾನು ಇಂದ್ರಜಿತ್ ಭೇಟಿಯಾಗಿಲ್ಲ.

ಈ ಫೋಟೋ ‌ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗುತ್ತಿದ್ದಾರೆ ಎನ್ನುವ ಸತ್ಯವನ್ನು ಇಂದ್ರಜಿತ್ ಲಂಕೇಶ್ ತಿಳಿಸಲಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com