ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ವಿದೇಶಿ ಪ್ರಜೆ ಬಂಧನ

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆಯನ್ನು ಉತ್ತರ ಪ್ರದೇಶದಲ್ಲಿ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ವಿದೇಶಿ ಪ್ರಜೆ ಬಂಧನ
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆಯನ್ನು ಉತ್ತರ ಪ್ರದೇಶದಲ್ಲಿ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಘಾನ ದೇಶದ ಆರೋಪಿ ಮೋರ್ಗನ್(34) ಬಂಧಿತ ಆರೋಪಿ.

ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ. 

ಜೂ.25 ರಂದು ರಾತ್ರಿ ವಾರಾಣಸಿ ಎನ್​ಕ್ಲೇವ್ ಬಳಿ ನಾಲ್ವರು ವಿದೇಶಿಯರು ಜಗಳ‌ ಮಾಡಿಕೊಂಡು ಕಿರುಚಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಪ್ರಶ್ನಿಸಿ ಗಲಾಟೆ ಬಿಡಿಸಿ ಮನೆಗೆ ಹೋಗುವಂತೆ  ಹೇಳಿದಾಗ ನಾಲ್ವರಲ್ಲಿ ಮೂವರು ಪೋಲೀಸರ ಕ್ಷಮೆ ಕೇಳಿದ್ದರೆ ಆರೋಪಿ ಮಾರ್ಗನ್  ವಾಗ್ವಾದ ನಡೆಸಿ ಪೊಲೀಸರಿಗೆ ನಿಂದಿಸಿದ್ದಲ್ಲದೆ ಬೆದರಿಕೆ ಹಾಕಿದ್ದ. ಆರೋಪಿ ಪೊಲೀಸರ ಚೀತಾ ವಾಹನಕ್ಕೆ ಸಹ ಹಾನಿ ಮಾಡಿದ್ದನೆಂದು ಪೋಲೀಸರು ಹೇಳಿದ್ದಾರೆ.

ಕೆ.ಆರ್ ಪುರ ಸಬ್​ ಇನ್​ಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೆ ಅವನ ಕಾರನ್ನು ಸಹ ವಶಕ್ಕೆ ಪಡೆದಿದೆ.

ಮಾದಕ ವಸ್ತು ಮಾರಾಟ: ಓರ್ವನ ಬಂಧನ

ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಸಖ್​ದೇವ್​ ಬಂಧಿತ ಆರೋಪಿ.

ಬಂಧಿತನಿಂದ 1.84 ಕೆ.ಜಿ ಅಫೀಮು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ 9 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com