ಯಶವಂತಪುರ ರೈಲು ನಿಲ್ದಾಣದಲ್ಲಿ ಗುಜರಿ ವಸ್ತುಗಳಿಂದ ಡಾ. ಅಬ್ದುಲ್ ಕಲಾಂ ಸುಂದರ ಮೂರ್ತಿ ಸ್ಥಾಪನೆ!

ಯಶವಂತಪುರ ರೈಲು ನಿಲ್ದಾಣದ ಆರನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೂರ್ತಿ ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದ್ದು, ರೈಲ್ವೆ ಉದ್ಯೋಗಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ ನಿಂತಿದೆ.
ಡಾ. ಅಬ್ದುಲ್ ಕಲಾಂ ಅವರ ಪ್ರತಿಮೆ
ಡಾ. ಅಬ್ದುಲ್ ಕಲಾಂ ಅವರ ಪ್ರತಿಮೆ
Updated on

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಆರನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೂರ್ತಿ ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದ್ದು, ರೈಲ್ವೆ ಉದ್ಯೋಗಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ ನಿಂತಿದೆ. ಯಶವಂತಪುರ ಕೋಚಿಂಗ್ ಡಿಪೋದ ಯಾಂತ್ರಿಕ ವಿಭಾಗದ ಎಂಜಿನಿಯರ್‌ಗಳು 800 ಕಿ.ಗ್ರಾಂನಷ್ಟು ಗುಜರಿ ವಸ್ತುಗಳನ್ನು ಬಳಸಿ ಇದನ್ನು ನಿರ್ಮಿಸಿದ್ದಾರೆ. ಒಟ್ಟು ಇದಕ್ಕೆ 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. 

ಮಂಗಳವಾರ ಸಂಜೆ “ಕ್ಷಿಪಣಿ ಮನುಷ್ಯನಿಗೆ ಸೃಜನಶೀಲ ಗೌರವ” ಎಂಬ ಪದಗಳೊಂದಿಗೆ ಕೋಚಿಂಗ್ ಡಿಪೋದ ಟ್ವಿಟರ್ ಖಾತೆಯಲ್ಲಿ ಇದನ್ನು ಸಾರ್ವಜನಿಕ ಮುಕ್ತಗೊಳಿಸಲಾಯಿತು. ಗುಜರಿಗೆ ಹಾಕಿದ್ದ ರೈಲಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲಾಗಿದೆ.ಇದು 7.8 ಅಡಿ ಎತ್ತರವಿದೆ, ಯಶವಂಪುರಕ್ಕೆ ಬರುವ ಪ್ರಯಾಣಿಕರು ಇದನ್ನು ನೋಡಬಹುದಾಗಿದೆ. ನಿತ್ಯ ಯಶವಂಪುರ ಮಾರ್ಗದಲ್ಲಿ 200 ಪ್ಯಾಸೆಂಜರ್ ರೈಲುಗಳು ಓಡಾಡುತ್ತವೆ.

ಈ ಮೂರ್ತಿ ನಿರ್ಮಾಣ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವಿವರ ನೀಡಿದ ಹಿರಿಯ ಕೋಚಿಂಗ್ ಡಿಪೋ ಅಧಿಕಾರಿ ವಿಕಾಸ್ ಗಾರ್ವಾನಿ, ಮೈಸೂರು ಕಾರ್ಯಾಗಾರದಿಂದ ಮತ್ತು ನಮ್ಮ ಕೋಚಿಂಗ್ ಡಿಪೋದಿಂದ ತಂದ  ನಟ್ಸ್, ಬೋಲ್ಟ್ಸ್, ಮೆಟಾಲಿಕ್ ರೋಪ್, ಡ್ಯಾಂಪರ್ ವಸ್ತುಗಳಿಂದ ಡಾ. ಕಲಾಂ ಅವರ ಮೂರ್ತಿಗೆ ಬೆಸುಗೆ ಹಾಕಲಾಯಿತು. ಮೊದಲು ಪ್ಲಾಸ್ಟರ್ ಪ್ಯಾರಿಸ್ ಬಳಸಿಕೊಂಡು ಮೂರ್ತಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದರ ಮೇಲೆ ನಟ್ಸ್‌, ಬೋಲ್ಟ್‌ಗಳನ್ನು ಬಳಕೆ ಮಾಡಲಾಗಿದೆ. ಡಿಪೋದ ಹಿರಿಯ ಸೆಕ್ಷನ್ ಎಂಜಿನಿಯರ್ ಗಳಾದ ಸಿ. ಪಿ. ಶ್ರೀಧರ್ ಮತ್ತು ಶ್ರೀನಿವಾಸ್ ರಾಜ್ ಅವರಿಗೆ ಈ ಎಲ್ಲಾದರ ಕ್ರೆಡಿಟ್ ಸಲ್ಲಬೇಕು ಎಂದರು.

'ನಮ್ಮ ಡಿಪೋ 20 ವರ್ಷಗಳಷ್ಟು ಹಳೆಯದು, ಈಗಾಗಲೇ ಕೆಂಪೇಗೌಡ ಹೆರಿಟೇಜ್ ಗಾರ್ಡನ್‌ನಲ್ಲಿ ಸ್ವಾಮಿ ವಿವೇಕಾನಂದ, ಮೇಕ್ ಇನ್ ಇಂಡಿಯಾದ  3ಡಿ ಹುಲಿ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಮೂರ್ತಿಗಳ ಮೂಲಕ ರೈಲ್ವೆ ಇಂಜಿನಿಯರ್ ಗಳ ಸುರಕ್ಷತೆಯನ್ನು ಮಹತ್ವವನ್ನು ಪ್ರತಿಪಾದಿಸಲಾಗಿದೆ. ಜಪಾನಿನ 5ಎಸ್ ಕಾರ್ಯಗಾರದ ಸಿದ್ಧಾಂತವನ್ನು ಇಲ್ಲಿ ಬಳಸಲಾಗಿದೆ. ಸ್ವಚ್ಛ ವಾತಾವರಣದೊಂದಿಗೆ ಕೆಲಸ ಮಾಡುವುದರೊಂದಿಗೆ ಸಿಬ್ಬಂದಿಯಲ್ಲಿ ನೈತಿಕ ಮೌಲ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಗುರ್ವಾನಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com