ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಟ್ವಿಟರ್ ಖಾತೆ ಹ್ಯಾಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್‍ ಗುಪ್ತ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಕೇಡಿಗಳು, ಗೌರವ್ ಗುಪ್ತಾ ಎಂಬ ಹೆಸರಿನ ಬದಲಿಗೆ ಟೆಸ್ಲಾ ಎಂದು ನಮೂದಿಸಿ ಕ್ರಿಪ್ಟೊಕರೆನ್ಸಿಯ ಬಗ್ಗೆ ಕೆಲವು ಟ್ವೀಟ್ ಗಳನ್ನು ಮಾಡಿದ್ದರು ಎಂದು ಹೇಳಲಾಗುತ್ತಿದೆ. 
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್‍ ಗುಪ್ತ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಕೇಡಿಗಳು, ಗೌರವ್ ಗುಪ್ತಾ ಎಂಬ ಹೆಸರಿನ ಬದಲಿಗೆ ಟೆಸ್ಲಾ ಎಂದು ನಮೂದಿಸಿ ಕ್ರಿಪ್ಟೊಕರೆನ್ಸಿಯ ಬಗ್ಗೆ ಕೆಲವು ಟ್ವೀಟ್ ಗಳನ್ನು ಮಾಡಿದ್ದರು ಎಂದು ಹೇಳಲಾಗುತ್ತಿದೆ. 

ಆದರೆ ಇದಕ್ಕೆ ಯಾರು ಕಾರಣ ಎಂಬುದು ತಿಳಿದುಬಂದಿಲ್ಲ. ಹ್ಯಾಕರ್ ಈ ಟ್ವಿಟ್ಟರ್ ಬಳಸಿ ಮಾಡಿದ ಟ್ವೀಟ್ ಒಂದರಲ್ಲಿ ವಿಶ್ವದ ಕಠಿಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮಾನವೀಯತೆಯ ಹಾದಿಯಲ್ಲಿ ನಡೆಯುವುದು ನಮ್ಮ ಗುರಿ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿರುವುದು ಕಂಡು ಬಂದಿತ್ತು. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 5 ಸಾವಿರ ಬಿಟಿಸಿ ವಿತರಿಸಲಾಗುವುದು ಎಂದು ಬರೆದು ಬಳಿಕ ಟ್ವೀಟ್ ಡಿಲೀಟ್ ಮಾಡಲಾಗಿತ್ತು. 

ಖಾತೆ ಹ್ಯಾಕ್ ಅಗಿರುವುದು ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಖಾತೆಯನ್ನು ಸಂಜೆ ವೇಳೆಗೆ ಮರಳಿ ಪಡೆಯಲಾಯಿತು. 

ಈ ಕುರಿತು ಗೌರವ್ ಗುಪ್ತಾ ಅವರು ಸೈಬರ್ ಸೆಲ್'ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com