ದಿನದ 15 ಗಂಟೆ ಜನರ ಆರೈಕೆ: ಇದು ಮಂಗಳೂರಿನ ಆಶಾ ಕಾರ್ಯಕರ್ತೆಯ ಜೀವನ ಕಥೆ

ಕಳೆದ ವರ್ಷ ಕೋವಿಡ್ -19 ಮೊದಲ ಅಲೆ ಸಂಭವಿಸಿದಾಗಿನಿಂದ, 47 ವರ್ಷದ ಸುಜಾತಾ ಶೆಟ್ಟಿ ತನ್ನನ್ನು ತಾನು ಕೆಲಸಕ್ಕೆ ಸಮರ್ಪಿಸಿಕೊಂಡಿದ್ದಾರೆ. ದಿನಕ್ಕೆ 15 ಗಂಟೆಗಳ ಕಾಲ ವಿರಾಮವಿಲ್ಲದೆ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
ಸುಜಾತಾ ಶೆಟ್ಟಿ
ಸುಜಾತಾ ಶೆಟ್ಟಿ
Updated on

ಮಂಗಳೂರು: ಕಳೆದ ವರ್ಷ ಕೋವಿಡ್ -19 ಮೊದಲ ಅಲೆ ಸಂಭವಿಸಿದಾಗಿನಿಂದ, 47 ವರ್ಷದ ಸುಜಾತಾ ಶೆಟ್ಟಿ ತನ್ನನ್ನು ತಾನು ಕೆಲಸಕ್ಕೆ ಸಮರ್ಪಿಸಿಕೊಂಡಿದ್ದಾರೆ. ದಿನಕ್ಕೆ 15 ಗಂಟೆಗಳ ಕಾಲ ವಿರಾಮವಿಲ್ಲದೆ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಈ ಆಶಾ ಕಾರ್ಯಕರ್ತೆ  ಕಾಟಿಪಳ್ಳದ  39 ಆಶಾ ಕಾರ್ಯಕರ್ತರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ತೂರು-ಕೆಮ್ರಾಲು  ಪಿಎಚ್‌ಸಿಗಳಿಗೆ ಆಶಾ ಫೆಸಿಲಿಟೇಟರ್ ಆಗಿದ್ದಾರೆ.

ಲಸಿಕಾ ಅಭಿಯಾನಗಳನ್ನು ನಡೆಸುವುದುಮತ್ತು ಸಾರಿಗೆ ಸೌಲಭ್ಯಗಳನ್ನು ಏರ್ಪಡಿಸುವುದರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಪ್ರತಿದಿನ ತನ್ನ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಇಂತಹ ನಿರಂತರ ಪ್ರಯತ್ನಗಳಿಂದಾಗಿ, ಸುರಿಂಜೆ ಗ್ರಾಮ ಪಂಚಾಯಿತಿಯ ಕಾಟಿಪಳ್ಳ ಪಿಎಚ್‌ಸಿ ಅಡಿಯಲ್ಲಿರುವ ದೇಲಾಂತಬೆಟ್ಟು ಗ್ರಾಮವು ಕಳೆದ ವರ್ಷ ಮಾರ್ಚ್‌ನಿಂದ ಕೇವಲ ಮೂರು ಪ್ರಕರಣಗಳನ್ನು ವರದಿ ಮಾಡಿದೆ.

“ನಿವಾಸಿಗಳಲ್ಲಿ ಒಬ್ಬರಿಗೆ ಜ್ವರದ ಲಕ್ಷಣಗಳಿವೆ ಎಂದು ತಿಳಿದಾಗ, ನಾನು ಮನೆಗೆ ತೆರಳಿಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಕೇಳಿದೆ. ಹಳ್ಳಿಯಲ್ಲಿ 276 ಕುಟುಂಬಗಳು ಮತ್ತು 1,475 ಜನರಿದ್ದಾರೆ. , ”ಎಂದು ಅವರು ಹೇಳುತ್ತಾರೆ, ಜನರ ಸಹಕಾರದಿಂದಾಗಿ ಈ ವೈರಸ್ ಸೋಂಕು ಇಳಿದಿದೆ.

ಪಿಯು ವರೆಗೆ ಅಧ್ಯಯನ ಮಾಡಿದ ಸುಜಾತಾ ಮಾರ್ಚ್‌ನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಶಸ್ವಿ ಲಸಿಕೆ ಅಭಿಯಾನಗಳನ್ನು  ಆಯೋಜಿಸಿದ್ದರು. ಜನರು ಲಸಿಕೆ ತೆಗೆದುಕೊಳ್ಳಲು ನಿರಾಕರಿಸುತ್ತಿರುವಾಗ, ಅವರು ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಮಾತನಾಡಿದರು ಮತ್ತು ಡೋಸ್ ತೆಗೆದುಕೊ:ಳ್ಳುವವರಿಗೆ  ಬಸ್ ವ್ಯವಸ್ಥೆ ಮಾಡಿದರು. ಈಗ, ಅವರು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಟು ಲಸಿಕಾ ಕೇಂದ್ರವನ್ನು ತಲುಪುತ್ತಾರೆ ಮತ್ತು ಬೆಳಿಗ್ಗೆ 4 ರಿಂದ ಕಾಯುವ ಜನರಿಗೆ ಟೋಕನ್ ನೀಡುತ್ತಾರೆ. " ಸಮಯ ಎಷ್ಟೇಂದು ನಾವು ನೋಡುವುದಿಲ್ಲ, ಮತ್ತು ಕೆಲವೊಮ್ಮೆ, ನಾವು ಸಂಜೆ 4 ರವರೆಗೆ ಊಟ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ.

"ಅವರು ಎಲ್ಲಾ ಗ್ರಾಮಸ್ಥರಿಗೆ ಲಸಿಕೆ ಹಾಕುವ ಉಪಕ್ರಮವನ್ನು ತೆಗೆದುಕೊಂಡರು, ಏಕೆಂದರೆ ಅನೇಕ ಜನರು ಭಯಭೀತರಾಗಿದ್ದರು, ಅವರು ಅಡ್ಡಪರಿಣಾಮಗಳನ್ನು ಅನುಭವಿಸಬಹುದೆಂದು ಭಾವಿಸಿದ್ದಾರೆ.ಕಳೆದ 12 ವರ್ಷಗಳಿಂದ, ಅವರು ಎಲ್ಲಾ ಮನೆಗಳಿಗೆ ಭೇಟಿ ನೀಡಿದ್ದಾರೆ ಮತ್ತು ಆರೋಗ್ಯ ತುರ್ತು ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ ”ಎಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಹೇಳಿದರು. ಅವರು ಪ್ರತಿವರ್ಷ 25 ಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಜನರಿಗೆ ಸೇವೆ ಮಾಡುವುದು ತನ್ನ “ಭಾಗ್ಯ” ಎಂದು ಅವರು ಹೇಳುತ್ತಾರೆ. “ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಮತ್ತು ಶಾಲಾ ಪರಿಚಾರಕರಾಗಿ ಕೆಲಸ ಮಾಡುವ ನನ್ನ ಪತಿ ಮನೆಯಲ್ಲಿದ್ದಾರೆ. ನನ್ನ ಕುಟುಂಬವನ್ನು ನೋಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ಅವರ ಊಟವಾಗಿದೆಯೆ ಎಂದು ನನಗೆ ತಿಳಿದಿಲ್ಲ. ನಾವು ಹೆಚ್ಚಿನ ಅಪಾಯದಲ್ಲಿದ್ದೇವೆ ಆದರೆ ನಾವು ಜನರಿಗೆ ನಮ್ಮ ಅತ್ಯುತ್ತಮ ಸೇವೆ  ನೀಡುತ್ತಿದ್ದೇವೆ, ”ಎಂದು ಅವರು ಹೇಳುತ್ತಾರೆ. ಅವರು ಇದುವರೆಗೆ ಒಂದೇ ಇಂದು ಕೌಟುಂಬಿಕ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಅಥವಾ ರಜೆ ಪಡೆದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com