ಮಂಗಳೂರು: ಕೂಲಿ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ಪ್ರಜೆಗಳ ಬಂಧನ

"ಜೂನ್ 11 ಶುಕ್ರವಾರದಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಮಾಹಿತಿ ನೀಡಿದರು.
ಬಂಧಿತ ಶ್ರೀಲಂಕಾ ಪ್ರಜೆಗಳು
ಬಂಧಿತ ಶ್ರೀಲಂಕಾ ಪ್ರಜೆಗಳು
Updated on

ಮಂಗಳೂರು: "ಜೂನ್ 11 ಶುಕ್ರವಾರದಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಮಾಹಿತಿ ನೀಡಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆಯುಕ್ತರು, “ಮೂವತ್ತೆಂಟು ಶ್ರೀಲಂಕಾದ ಪ್ರಜೆಗಳು ಶ್ರೀಲಂಕಾದಿಂದ ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಒಂದು ತಿಂಗಳ ಹಿಂದೆ ಮಂಗಳೂರು ತಲುಪಿದ್ದರು. ಅವರು ಕಳೆದ ಒಂದೂವರೆ ತಿಂಗಳಿನಿಂದ ಎರಡು ಲಾಡ್ಜ್‌ಗಳು ಮತ್ತು ಎರಡು ಮನೆಗಳಲ್ಲಿ ತಂಗಿದ್ದರು ಮತ್ತು ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಳ್ಳುತ್ತಿದ್ದರು" ಎಂದು ಮಾಹಿತಿ ನೀಡಿದ್ದಾರೆ.

“ಅವರು ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾ ನಗದನ್ನು  ಪಾವತಿಸಿ ಶ್ರೀಲಂಕಾದಿಂದ ಹೊರಟರು. ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಅವರು ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದರು. ತೂತುಕುಡಿಯನ್ನು ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನಲ್ಲಿ ಏಜೆಂಟರೂ ಇದ್ದರು. ಬೆಂಗಳೂರಿನಿಂದ ಅವರು ಮಂಗಳೂರು ತಲುಪಿದರು.

“ಶ್ರೀಲಂಕಾದ 39 ಮಂದಿ ಇದ್ದವರಲ್ಲಿ 38 ಜನರನ್ನು ಬಂಧಿಸಲಾಗಿದೆ. ಸುಮಾರು 65-70 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಕೆಲವು ವಾರಗಳ ಹಿಂದೆ ಮರಳಿದ್ದಾನೆ. ನಾವು ಅವನನ್ನು ಪತ್ತೆ ಮಾಡುತ್ತೇವೆ. ನಾವು ಐಪಿಸಿ ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945 ಮತ್ತು ವಿದೇಶಿಯರ ಆದೇಶ 1948 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ.

"ಈ ಪ್ರಕರಣದ ಪ್ರಮುಖ ಏಜೆಂಟರನ್ನು ಪತ್ತೆಹಚ್ಚಲು ನಾವು ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡುತ್ತೇವೆ, ಅವರು ದೊಡ್ಡ ಪಿತೂರಿಯ ಭಾಗವಾಗಿದ್ದಾರೆ" ಎಂದರು.

"ಉದ್ಯೋಗ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಮಂಗಳೂರು ಇತರ ರಾಜ್ಯಗಳು ಮತ್ತು ದೇಶಗಳಿಂದ ಅನೇಕರಿಗೆ ಆಶ್ರಯ ನೀಡಿದೆ. ಯಾರಾದರೂ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡುಬಂದರೆ, ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಒಂದು ವೇಳೆ ಜನರು ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಸರಿಯಾದ ದಾಖಲೆಗಳನ್ನು ನೀಡಲು ವಿಫಲವಾದರೆ, ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದರು.

"ತಮಿಳುನಾಡು ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಅವರು 40 ಜನರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗಾಗಿ ನಾವು 6-7 ಜನರನ್ನು ವಶಕ್ಕೆ ಪಡೆದಿದ್ದೇವೆ.

"ತಮಿಳುನಾಡಿನಲ್ಲಿ ಇಂತಹಾ ಸಂಘಟಿತ ದಂಧೆ ಇದೆ, ಅಲ್ಲಿ ಜನರಿಗೆ ಕೆನಡಾದಲ್ಲಿ ಉದ್ಯೋಗದ ಭರವಸೆ ನೀಡಲಾಗುತ್ತಿದೆ. ಮಂಗಳೂರಿನಲ್ಲಿಯೂ ಈ ಬಗ್ಗೆ ಯಾರಾದರೂ ಇರಬಹುದಾದ ಕಾರಣ  ನಾವು ಆಳವಾಗಿ ತನಿಖೆ ಮಾಡುತ್ತೇವೆ. 38 ಶ್ರೀಲಂಕಾ ಪ್ರಜೆಗಳು ಯಾವುದೇ ನೆಟ್ವರ್ಕ್ ಅಥವಾ ಸಂವಹನವಿಲ್ಲದೆ ಮಂಗಳೂರಿನಲ್ಲಿ ಒಂದು ತಿಂಗಳು ಉಳಿಯುವುದು ಅಸಾಧ್ಯ” ಎಂದು ಅವರು ಹೇಳಿದರು.

ಡಿಸಿಪಿ ಕಾನೂನು ಸುವ್ಯವಸ್ಥೆ ಹರಿರಾಮ್ ಶಂಕರ್, ಉತ್ತರ ವಿಭಾಗದ ಎಸಿಪಿ ರಂಜಿತ್ ಮತ್ತು ಇತರರು ಉಪಸ್ಥಿತರಿದ್ದರು.

16.8 ಲಕ್ಷ ಮೌಲ್ಯದ 840 ಎಲ್‌ಎಸ್‌ಡಿ ಸ್ಟ್ರಿಪ್ಸ್ ವಶ, ಕೇರಳದ ವ್ಯಕ್ತಿ ಅರೆಸ್ಟ್

ಕದ್ರಿ ಪೊಲೀಸ ಓರ್ವನನ್ನು ಬಂಧಿಸಿ 16,80,000 ರೂ.ಗಳ 840 ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಕ್ಯಾಲಿಕಟ್ ಮೂಲದ ಮೊಹಮ್ಮದ್ ಅಜಿನಾಸ್ (25) ಎಂದು ಗುರುತಿಸಲಾಗಿದೆ.

ಎಲ್‌ಎಸ್‌ಡಿ ಸೈಕೋಟ್ರೋಪಿಕ್ ಔಷಧವಾಗಿದ್ದು ಒಂದು ಸ್ಟ್ರಿಪ್ 2,000 ರೂ ನಿಂದ 6,000 ರೂ. ಬೆಲೆ ಬಾಳುತ್ತದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com