ರಾಜ ಭವನದಲ್ಲಿ ಉದ್ಯಾನವನ ನಿರ್ವಹಣೆಗೆ 3 ವರ್ಷಗಳಲ್ಲಿ ಮಾಡಿರುವ ಖರ್ಚು ಬರೋಬ್ಬರಿ 3.2 ಕೋಟಿ ರೂ!

ಮೂರು ವರ್ಷಗಳಲ್ಲಿ (2014ರಿಂದ 2017ರವರೆಗೆ) ರಾಜ ಭವನದ ಉದ್ಯಾನವನವನ್ನು ನಿರ್ವಹಿಸಲು ಬರೋಬ್ಬರಿ 3.27 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ ಎಂದು ಆರ್ ಟಿಐ ನಿಂದ ಬಹಿರಂಗವಾಗಿದೆ.
ರಾಜ ಭವನ
ರಾಜ ಭವನ
Updated on

ಬೆಳಗಾವಿ: ಮೂರು ವರ್ಷಗಳಲ್ಲಿ ವಿಧಾನ ಸೌಧದ ಪಕ್ಕದಲ್ಲಿರುವ ರಾಜ ಭವನದಲ್ಲಿ ಉದ್ಯಾನವನದ ಅಲಂಕಾರಕ್ಕೆ ಹೂವುಗಳಿಗೆ 4.80 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇನ್ನು ಮೂರು ವರ್ಷಗಳಲ್ಲಿ(2014ರಿಂದ 2017ರವರೆಗೆ) ರಾಜ ಭವನದ ಉದ್ಯಾನವನವನ್ನು ನಿರ್ವಹಿಸಲು ಬರೋಬ್ಬರಿ 3.27 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಬಳಕೆ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.

ಮೂರು ವರ್ಷಗಳ ಅವಧಿಯಲ್ಲಿ ರಾಜ ಭವನ ತೋಟದಲ್ಲಿ ಕೆಲಸ ಮಾಡುವ ದಿನನಿತ್ಯದ ಕಾರ್ಮಿಕರಿಗೆ ಸುಮಾರು 11.59 ಲಕ್ಷ ರೂ, ಪರಿಕಲ್ಪನೆ, ಮಾಸ್ಟರ್ ಪ್ಲ್ಯಾನ್ ಮತ್ತು ಉದ್ಯಾನದ ಅಭಿವೃದ್ಧಿಗೆ 2.95 ಕೋಟಿ ರೂ, ತರಕಾರಿಗಳ ಬೀಜಗಳಿಗೆ 15 ಲಕ್ಷ ರೂ, ರಸಗೊಬ್ಬರಗಳು, ಕೆಂಪು ಮಣ್ಣು, ಬ್ರಷ್ ಕಟ್ಟರ್ ಮತ್ತು ಪವರ್ ಟಿಲ್ಲರ್‌ಗೆ ಇಂಧನದ ಮೇಲೆ 52,000 ರೂ ಮತ್ತು ರಾಜಭವನದ ಗವರ್ನರ್ ನಿವಾಸದಲ್ಲಿ, ಡೈನಿಂಗ್ ಹಾಲ್, ಮುಖ್ಯ ಕಚೇರಿ, ವಿಐಪಿ ಲಾಂಜ್ ಮೊದಲಾದ ಕಡೆಗಳಲ್ಲಿ ಹೂವುಗಳ ಅಲಂಕಾರಕ್ಕೆ 4.80 ಲಕ್ಷ ರೂಪಾಯಿ ಸೇರಿ ಸುಮಾರು 3.27 ಕೋಟಿ ರೂಪಾಯಿ ಖರ್ಚಾಗಿದೆ.

ಆರ್ ಟಿಐಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಭೀಮಪ್ಪ ಗಡದ್ ರಾಜ್ಯ ಸರ್ಕಾರದ ಖಜಾನೆಯಿಂದ ಇಷ್ಟೊಂದು ಹಣವನ್ನು ಉದ್ಯಾನವನದ ಅಭಿವೃದ್ಧಿಗೆ ಖರ್ಚು ಮಾಡುವುದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಕೇವಲ ಹೂವುಗಳ ಮಡಕೆ ಅಲಂಕಾರಕ್ಕೆ 5 ಲಕ್ಷದಷ್ಟು ಹಣ ಖರ್ಚು ಮಾಡುವುದನ್ನು ನೋಡಿ ಇನ್ನೂ ಆಘಾತವಾಯಿತು ಎನ್ನುತ್ತಾರೆ.

2014ರಲ್ಲಿ ವಜುಭಾಯಿ ವಾಲಾ ಅವರು ರಾಜ್ಯಪಾಲರಾದ ನಂತರ ಸಾರ್ವಜನಿಕರಿಗೆ ಭೇಟಿಗೆ ಅವಕಾಶ ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗಡದ್, ರಾಜ್ಯಪಾಲರು ಜನರ ಸಂಕಷ್ಟಗಳಿಗೆ ಯಾವ ಮಟ್ಟದಲ್ಲಿ ಎಷ್ಟು ಸ್ಪಂದಿಸಿದ್ದಾರೆ ಎಂದು ಕೇಳಿದ್ದಾರೆ. ಇನ್ನು ರಾಜ ಭವನದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅವರು, ಅಲ್ಲಿನ ಅಧಿಕಾರಿಗಳು ಜನಸ್ನೇಹಿಯಾಗಿಲ್ಲ ಎಂದು ಆರೋಪಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com