ತಾತ ಆಗುತ್ತಿದ್ದಾರೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ: ಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮೀ ಮತ್ತು ರೇವತಿ
ನಿಖಿಲ್ ಕುಮಾರಸ್ವಾಮೀ ಮತ್ತು ರೇವತಿ
Updated on

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗುತ್ತಿದ್ದಾರೆ.

ನಿನ್ನೆಯಷ್ಟೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ, ಇದೇ ವೇಳೆ ಮಾಜಿ ಸಿಎಂ ಕುಮಾರ ಸ್ವಾಮಿಯವರ ಸೊಸೆ ರೇವತಿಯವರು 5 ತಿಂಗಳ ಗರ್ಭಿಣಿಯಾಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ,

ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com