ಬೆಂಗಳೂರಿನಲ್ಲಿ ಕಟ್ಟಡ ಯೋಜನೆ ಅನುಮೋದನೆ ದರ ಕಡಿತ!

ಬೆಂಗಳೂರಿನೊಳಗೆ ಕಟ್ಟಡ ಯೋಜನೆಗಳನ್ನು ಅನುಮೋದಿಸಲು ರಾಜ್ಯ ಸರ್ಕಾರ ಕಳೆದ ವರ್ಷ ನಿಗದಿಪಡಿಸಿದ ಶುಲ್ಕವನ್ನು ಕಡಿತಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನೊಳಗೆ ಕಟ್ಟಡ ಯೋಜನೆಗಳನ್ನು ಅನುಮೋದಿಸಲು ರಾಜ್ಯ ಸರ್ಕಾರ ಕಳೆದ ವರ್ಷ ನಿಗದಿಪಡಿಸಿದ ಶುಲ್ಕವನ್ನು ಕಡಿತಗೊಳಿಸಿದೆ. ಮಾರ್ಗದರ್ಶನ ಮೌಲ್ಯದ ಪ್ರತಿ ಚದರ ಮೀಟರ್‌ಗೆ 0.5 ಶೇಕಡಾದಿಂದ ಶೇ .60 ರಷ್ಟು ಕಡಿತಗೊಳಿಸಿ, ವಸತಿ ಆಸ್ತಿಗಳಿಗೆ ಶೇ 0.2 ಕ್ಕೆ ಇಳಿಸಿದೆ. ಕೈಗಾರಿಕೆಗಳಿಗೆ ಇದನ್ನು ಶೇಕಡಾ 1 ರಿಂದ 0.3 ಕ್ಕೆ ಇಳಿಸಲಾಗಿದೆ. ಅಭಿವೃದ್ಧಿ ಅಥವಾ ಹೆಚ್ಚುವರಿ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ.

ಪರಿಷ್ಕೃತ ಶುಲ್ಕಗಳನ್ನು ಜಾರಿಗೆ ತರಲು  ಕರ್ನಾಟಕ ಪಟ್ಟಣ ಯೋಜನಾ ಪ್ರಾಧಿಕಾರ (ಎರಡನೇ ತಿದ್ದುಪಡಿ) ನಿಯಮಗಳು  2021ನ್ನು  ಸೋಮವಾರ ಗೆಜಿಟ್ ನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಯೋಜನೆ ಅನುಮೋದನೆ ಶುಲ್ಕ ಹೆಚ್ಚಳದಿಂದಾಗಿ ಮನೆಗಳ ನಿರ್ಮಾಣವನ್ನು ವಿಳಂಬಗೊಳಿಸಿದ ಆಸ್ತಿ ಮಾಲೀಕರಿಗೆ ಈ ಕ್ರಮವು ದೊಡ್ಡ ಪರಿಹಾರವಾಗಿದೆ. 

ಸೆಪ್ಟೆಂಬರ್ 14, 2020 ರಂದು, ಬಿಬಿಎಂಪಿ ಸುತ್ತೋಲೆ ಹೊರಡಿಸಿ, ಮನೆ ಕಟ್ಟಡ ಯೋಜನೆ ಅನುಮೋದನೆ ಶುಲ್ಕವನ್ನು ಶೇಕಡಾ 0.5 ಕ್ಕೆ ಏರಿಸಿತು ಮತ್ತು ಇತರ ವರ್ಗಗಳಿಗೂ ಹೆಚ್ಚಳವನ್ನು ಮಾಡಿತು. ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಮತ್ತು ಅದನ್ನು ಇಳಿಸುವಂತೆ ಒತ್ತಾಯ ಕೇಳಿಬಂದಿತ್ತು. 

ಮಾರ್ಚ್ 10, 2021ರಂದು ಹೊರಡಿಸಲಾದ ಈ ಹಿಂದಿನ ಆದೇಶದಲ್ಲಿ 30 ದಿನಗಳೊಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದರ ಅನ್ವಯ ದರಗಳನ್ನು ಪರಿಷ್ಕರಿಸಲಾಗಿತ್ತು. ಈ ಹಿಂದೆ ವಸತಿ ಕಟ್ಟಡಗಳಿಗೆ ಪ್ಲಾಟ್ ನ ಮಾರುಕಟ್ಟೆ ಮೌಲ್ಯದ ಶೇ.0.2 ರಷ್ಟು ಅಭಿವೃದ್ಧಿ ವೆಚ್ಚ ನಿಗದಿಪಡಿಸಲಾಗಿತ್ತು. ಈಗ ಅದನ್ನು ಕಟ್ಟಡ ಅನುಮೋದನೆ ಯೋಜನೆ ಶುಲ್ಕದ ಶೇಕಡಾ 10 ಕ್ಕೆ ಕಡಿತಗೊಳಿಸಲಾಗಿದೆ.

ಈ ಕ್ರಮ ಕಟ್ಟಡ ನಿರ್ಮಾಣವನ್ನು ಉತ್ತೇಜಿಸುತ್ತದೆ. ಯೋಜನೆ ಅನುಮೋದನೆ ವೆಚ್ಚಗಳು ಹೆಚ್ಚಿದ್ದರೆ, ಜನರು ಕೆಲಸ ಕೈಗೊಳ್ಳಲು  ಹಿಂಜರಿಯುತ್ತಾರೆ. ಹಲವರು ತಕ್ಷಣ ಕಟ್ಟಡ ಪ್ರಾರಂಭಿಸುವುದಿಲ್ಲ. ಹೆಚ್ಚಿನ ಶುಲ್ಕವು ಅನುಮೋದನೆ ಪಡೆಯದಂತೆ ಜನರನ್ನು ತಡೆಯುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಬಿಬಿಎಂಪಿ ಅದನ್ನು ಎಂದಿಗೂ ಹೆಚ್ಚಿಸಬಾರದು ಎಂದು ಕ್ರೆಡಾಯ್ ಮುಖ್ಯಸ್ಥ ಸುರೇಶ್ ಹರಿ ಹೇಳಿದ್ದಾರೆ. 

 ಕೋವಿಡ್ ಸಾಂಕ್ರಾಮಿಕ ನಂತರ ಕಟ್ಟಡ ನಿರ್ಮಾಣ ಚಟುವಟಿಕೆ ಮೇಲೆ ಹೊಡೆತ ಬಿದ್ದಿದೆ. ಸಣ್ಣ ಡವಲಪರ್ಸ್ ಮೇಲೂ ಪರಿಣಾಮ ಬೀರಿದೆ. ಕಚ್ಚಾ ಸರಕುಗಳ ಬೆಲೆಯೂ ಹೆಚ್ಚಾಗಿದೆ. ಸರ್ಕಾರ ಈ ಕ್ರಮದ ಮೂಲಕ ಇದೀಗ ಬೆಂಬಲ ನೀಡಿರುವುದು ಮಹತ್ವದ್ದಾಗಿದೆ ಎಂದು ಹರಿ ತಿಳಿಸಿದ್ದಾರೆ.                                                                                   
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com