ಟ್ವಿಟ್ಟರ್ ಇಂಡಿಯಾ ಎಂಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಬೇಡ: ಯುಪಿ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಸೂಚನೆ

ವೈರಲ್ ವಿಡಿಯೋವೊಂದರ ಸಂಬಂಧ ನೋಂದಾಯಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಯುಪಿ ಪೊಲೀಸರನ್ನು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ. 
ಮನೀಶ್ ಮಹೇಶ್ವರಿ
ಮನೀಶ್ ಮಹೇಶ್ವರಿ

ಬೆಂಗಳೂರು: ವೈರಲ್ ವಿಡಿಯೋವೊಂದರ ಸಂಬಂಧ ನೋಂದಾಯಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಯುಪಿ ಪೊಲೀಸರನ್ನು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ . ಆದಾಗ್ಯೂ, ಅರ್ಜಿದಾರರ ಹೇಳಿಕೆಯನ್ನು ಪೊಲೀಸರು ವರ್ಚುವಲ್ ಮೋಡ್ ಮೂಲಕ ದಾಖಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ನಗರದ ವೈಟ್‌ಫೀಲ್ಡ್‌ನಲ್ಲಿ ನೆಲೆಸಿರುವ ಮಹೇಶ್ವರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಜಿ. ನರೇಂದರ್ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಟ್ವಿಟ್ಟರ್ ಇಂಡಿಯಾ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಜಾಹೀರಾತು ಮತ್ತು ಮಾರಾಟದ ಉಸ್ತುವಾರಿ ಮುಖ್ಯಸ್ಥ ಮಹೇಶ್ವರಿ, ಸಿಆರ್‌ಪಿಸಿಯ ಸೆಕ್ಷನ್ 41-ಎ ಅಡಿಯಲ್ಲಿ ಉತ್ತರ ಪ್ರದೇಶದ ಘಾ ಜಿಯಾಬಾದ್‌ನಲ್ಲಿ ಲೋನಿ ಬಾರ್ಡರ್ ಪೊಲೀಸರು ನೀಡಿರುವ ನೋಟಿಸ್ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. 

ಅರ್ಜಿದಾರರ ಪರ  ಹಿರಿಯ ವಕೀಲ ಸಿ.ವಿ. ನಾಗೇಶ್, ಅರ್ಜಿದಾರರು ವೀಡಿಯೊ ಅಪ್‌ಲೋಡ್ ಮಾಡಿಲ್ಲ ಅಥವಾ ಅರ್ಜಿದಾರರು ಕೆಲಸ ಮಾಡುತ್ತಿರುವ ಕಂಪನಿಯ ಪ್ಲಾಟ್‌ಫಾರ್ಮ್ ಬಳಸಿ ಆರೋಪಿಗಳು ಅಪ್‌ಲೋಡ್ ಮಾಡಿದ ವೀಡಿಯೊದ ಮೇಲೆ ಯಾವುದೇ ನಿಯಂತ್ರಣ ಇರಲಿಲ್ಲ ಎಂದು ವಾದಿಸಿದರು. ಆದರೆ, ಅರ್ಜಿದಾರರು ತನಗೆ ನೀಡಿದ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ಪೊಲೀಸರಿಗೆ ಉತ್ತರ  ಕಳುಹಿಸಿದ್ದು, ವರ್ಚುವಲ್ ಮೋಡ್ ಮೂಲಕ ಹೇಳಿಕೆ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. ಈ ವಿನಂತಿಯನ್ನು ತಿರಸ್ಕರಿಸಲಾಗಿದೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ಸ್ವಯಂ  ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಆದರೆ ಅವರು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರಿಂದ ಇದು  ಸಾಧ್ಯವಾಗಲಿಲ್ಲ ಎಂದು ನಾಗೇಶ್ ವಾದಿಸಿದರು.

ಪ್ರತಿಯಾಗಿ ಯುಪಿ ಪೊಲೀಸರ ಪರ ಹಾಜರಾದ ಪ್ರಸನ್ನ ಕುಮಾರ್, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು ಮತ್ತು ಅರ್ಜಿ ಸಲ್ಲಿಸಿದ ಕಾರಣ  ಸಮರ್ಥನೀಯವಲ್ಲ ಎಂಬ ಕಾರಣ ಮಧ್ಯಂತರ ಆದೇಶವನ್ನು ಅಂಗೀಕಾರಕ್ಕೆ ಆಕ್ಷೇಪಿಸಿದರು. ಈ ಬಗ್ಗೆ ನ್ಯಾಯಾಲಯ ವಿಚಾರಣೆಯನ್ನು ಜೂನ್ 29 ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com