ಬೆಂಗಳೂರು: 2006 ರಲ್ಲಿ ಬಂಧನವಾಗಿದ್ದ ಪಾಕಿಸ್ತಾನ ಮೂಲದ ಎಂಜಿನೀಯರ್ ಗೆ ಜೈಲು ಶಿಕ್ಷೆ

ಕರಾಚಿ ಮೂಲದ ಕೆಮಿಕಲ್ ಎಂಜಿನೀಯರ್ ಒಬ್ಬನಿಗೆ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ವಿಧಿಸಿದೆ. ನಿಷೇಧಿತ ಆಲ್ ಬದರ್ ಉಗ್ರ ಸಂಘಟನೆಗೆ ಸೇರಿದ್ಧ ಈತನನ್ನು 2006 ರಲ್ಲಿ ಮೈಸೂರಿನಲ್ಲಿ ಬಂಧಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರಾಚಿ ಮೂಲದ ಕೆಮಿಕಲ್ ಎಂಜಿನೀಯರ್ ಒಬ್ಬನಿಗೆ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ವಿಧಿಸಿದೆ. ನಿಷೇಧಿತ ಆಲ್ ಬದರ್ ಉಗ್ರ ಸಂಘಟನೆಗೆ ಸೇರಿದ್ಧ ಈತನನ್ನು 2006 ರಲ್ಲಿ ಮೈಸೂರಿನಲ್ಲಿ ಬಂಧಿಸಲಾಗಿತ್ತು.

ಕರಾಚಿಯ ಉತ್ತರ ನಿಜಾಮಾಹಾದ್ ನ ಫಹಾದ್ ಅಲಿಯಾಸ್ ನಡುತಾನಿ ಅಲಿಯಾಸ್ ಮೊಹಮದ್ ಕೊಯಾ ನನ್ನು ಬಂಧಿಸಲಾಗಿತ್ತು, ಬಂಧನವಾದ ವೇಳೆ ಆತನಿಗೆ 24 ವರ್ಷ ವಯಸ್ಸಾಗಿತ್ತು.

ಪಾಕಿಸ್ತಾನ ಪಾಸ್‌ಪೋರ್ಟ್‌ ಹೊಂದಿದ್ದ ಮಹಮದ್ ಕೋಯಾ ಅಲಿಯಾಸ್‌ ಫಹಾದ್‌ (27)ನನ್ನು ಭಯೋತ್ಪಾದಕರಿಗೆ ಸಹಕರಿಸಿದ ಆಪಾದನೆಯ ಹಿನ್ನೆಲೆಯಲ್ಲಿ 2006ರ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ಬಂಧಿಸಲಾಗಿತ್ತು. 

ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಫಹಾದ್‌ 2005ರಲ್ಲಿ ಕರಾಚಿಯಲ್ಲಿ ನೀಡಲಾಗಿದ್ದ ಪಾಕಿಸ್ತಾನಿ ಪಾಸ್‌ಪೋರ್ಟ್‌ ಹೊಂದಿದ್ದ. ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉಗ್ರರಿಗೆ ಈತ ರಹಸ್ಯ ಸಹಕಾರ ನೀಡಿದ್ದ ಎಂಬ ಆರೋಪವಿತ್ತು.

ಆತನ ಮನೆಯನ್ನು ಶೋಧ ಮಾಡುವ ವೇಳೆ ಫಹಾದ್ ನ ರಾಜೀವ್ ನಗರದ ಮನೆಯಲ್ಲಿ ಪಾಕಿಸ್ತಾನಿ ಪಾಸ್ ಪೋರ್ಟ್, ವಿವಿಧ ರೀತಿಯ ಆರು ಕೆಮಿಕಲ್ಸ್, ಬ್ಲಾಸ್ಟಿಂಗ್ ಕೇಪ್ಸ್, 90 ಸಜೀವ ಗುಂಡು, ಹಾಗೂ ಎಕೆ 47 ಮ್ಯಾಗಜೀನ್ ಸಿಕ್ಕಿತ್ತು, ಮೇಕಿಂಗ್ ಕೆಮಿಕಲ್ಸ್ ಎಕ್ಸೋಪ್ಲೋಸಿವ್ ಡಿಟೇಲ್ಸ್  ಎಂದು ಬರೆದಿದ್ದ 30 ಸಿಡಿಗಳು ದೊರೆತಿದ್ದವು. ಒಸಾಮಾ ಬಿನ್ ಲಾಡೆನ್ ಫೋಟೋವಿದ್ದ ಪುಸ್ತಕ ಕೂಡ ದೊರೆತಿತ್ತು.

ಭಾರತದ ವಿರುದ್ಧ ಷಡ್ಯಂತ್ರ ನಡೆಸಿದ್ದ ಎಂಬ ಆರೋಪದ ಮೇಲೆ ಆತನ ವಿರುದ್ಧ ಸಾಕ್ಷಿಗಳನ್ನು ಒದಗಿಸಲಾಗಿತ್ತು. ಭಾರತದ ವಿರದ್ಧ ಪಿತೂರಿ ನಡೆಸಿ  ಅಕ್ರಮ ಚಟುವಟಿಕೆ ನಡೆಸುತ್ತಿದ್ದ, ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡಲು ಯತ್ನಿಸಿದ್ದ, ನಿಷೇಧಿತ ಶಸ್ತ್ರಗಳನ್ನು ಬಳಸುತ್ತಿದ್ದ, ಆತನನ್ನು ಬಂಧಿಸಲು ಯತ್ನಿಸಿದ ಪೊಲೀಸರ ವಿರುದ್ಧ  ಇದೇ ಶಸ್ತ್ರಾಸ್ತ್ರಗಳಿಂದ ಅವರ ವಿರುದ್ಧ ಫೈರಿಂಗ್ ಮಾಡಿದ್ದ ಎಂದು ನಗರ ಪ್ರಧಾನ ಕೋರ್ಟ್ ಮತ್ತು ಸೆಷನ್ಸ್ ಜಡ್ಜ್ ಅನಿಲ್ ಬಿ ಕಟ್ಟಿ ತೀರ್ಪಿನಲ್ಲಿ ತಿಳಿಸಿದ್ದಾರೆ. 

ಭಾರತದ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪದಲ್ಲಿ 10 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರು ದಂಡ, ಎರಡು ವರ್ಷ ಸರಳ ಸಜೆ ಮತ್ತು 2 ಸಾವಿರ ರು ದಂಡ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಕ್ಕಾಗಿ 1 ವರ್ಷ ಶಿಕ್ಷೆ ಮತ್ತು 1 ಸಾವಿರ ರು ದಂಡ, ಭಾರತೀಯ ಸಶಸ್ತ್ರ ಕಾಯಿದೆ  ಅನ್ವಯ 7 ವರ್ಷ ಶಿಕ್ಷೆ ಮತ್ತು 22 ಸಾವಿರ ರು ದಂಡ ಹಾಗೂ ವಿದೇಶಿ ಕಾಯ್ದೆ ಪ್ರಕಾರ 2 ವರ್ಷ ಶಿಕ್ಷೆ ಹಾಗೂ 11 ಸಾವಿರ ರು ದಂಡ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com