ಬೆಂಗಳೂರು: ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಉಚಿತ ಆಹಾರ ಸೇವೆ!

ಕೋವಿಡ್-19 ಸೋಂಕಿತರು ಹಾಗೂ ಅದರಿಂದ ಚೇತರಿಕೊಂಡ ಅವರ ಕುಟುಂಬದವರಿಗಾಗಿ ಮನೆಯಲ್ಲಿಯೇ ತಯಾರಿಸಿದ ಪೌಷ್ಠಿಕಯುಕ್ತ ಆಹಾರವನ್ನು ಪೂರೈಸುವ ಕೆಲಸದಲ್ಲಿ ಕೆಲ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು:ಕೋವಿಡ್-19 ಸೋಂಕಿತರು ಹಾಗೂ ಅದರಿಂದ ಚೇತರಿಕೊಂಡ ಅವರ ಕುಟುಂಬದವರಿಗಾಗಿ ಮನೆಯಲ್ಲಿಯೇ ತಯಾರಿಸಿದ ಪೌಷ್ಠಿಕಯುಕ್ತ ಆಹಾರವನ್ನು ಪೂರೈಸುವ ಕೆಲಸದಲ್ಲಿ ಕೆಲ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ.

ಈ ಸ್ವಯಂ ಸೇವಕರಲ್ಲಿ ಕೆಲ ಯುವತಿಯರಿದ್ದು, ತಮ್ಮ ಸ್ಕೂಟರ್ ನಲ್ಲಿ ಮನೆಗೆ ಮನೆಗೆ ತೆರಳಿ, ಹೋಮ್  ಐಸೋಲೇಷನ್ ನಲ್ಲಿ ಇರುವವರಿಗೆ ಉಚಿತವಾಗಿ ಆಹಾರದ ಪಾಕೆಟ್ ನೀಡುತ್ತಿದ್ದಾರೆ.

ಗುಡ್ ಕ್ವೆಸ್ಟ್ ಫೌಂಡೇಶನ್, ಕೊರೋನಾ ಕೇರ್ ಬೆಂಗಳೂರು, ಬೆಂಗಳೂರು ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸೂಸೈಟಿ, ಪ್ರಾಜೆಕ್ಟ್ ವಿಸನ್, ಎಐಎಫ್ ಒ ಮತ್ತು ಇಸಿಹೆಚ್ ಒದ ಸ್ವಯಂ ಸೇವಕರು, ಬೆಂಗಳೂರು ಪೂರ್ವ  ಮತ್ತು ಬೆಂಗಳೂರು ಕೇಂದ್ರದಲ್ಲಿ ಉಚಿತ ಆಹಾರ ಸೇವೆಯನ್ನು ಆರಂಭಿಸಿದ್ದಾರೆ.

ಇದೀಗ ಕೆಆರ್ ಪುರಂ ಮತ್ತು ಮೈಸೂರು ರಸ್ತೆವರೆಗೂ ತಲುಪಿದ್ದೇವೆ. ಸುಮಾರು 80 ಕುಟುಂಬಗಳು ಮತ್ತು 300
 ಜನರಿಗೆ ಆಹಾರ, ಪ್ರಸ್ತುತ ಆರ್ ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಕಿಚನ್ ಒಂದನ್ನು ಹೊಂದಿರುವುದಾಗಿ ಗುಡ್ ಕ್ವೆಸ್
ಫೌಂಡೇಶನ್ ಮತ್ತು ಪುಡ್ ಟು ಯುವರ್ ಡೂರ್ ಸ್ಟೆಪ್ ಕಾರ್ಯಕ್ರಮದ ಸಂಘಟಕ ವಿನೋದ್ ಕುಮಾರ್
ಹೇಳಿದ್ದಾರೆ.

ಸದ್ಯದಲ್ಲೇ ದಕ್ಷಿಣ ಬೆಂಗಳೂರು ಮತ್ತು ವೈಟ್ ಫೀಲ್ಡ್ ನಲ್ಲಿ ಕಿಚನ್ ಸೇವೆಯನ್ನು ಆರಂಭಿಸಲಾಗುವುದು, 28 ಸಂಘಟಕರ
ಪೈಕಿ ಮಹಿಳೆಯರು, ಪುರುಷರು ಸೇರಿದಂತೆ  18 ಫೀಲ್ಡ್ ಸ್ವಯಂ ಸೇವಕರಿದ್ದಾರೆ. ಆರು ಸ್ವಯಂ ಸೇವಕರು ಮನೆಯಿಂದಲೇ
 ಕೆಲಸ ಮಾಡುತ್ತಾರೆ. ಜನರು ಕಳುಹಿಸುವ ಸಂದೇಶವನ್ನು ಅವರು ಸ್ವೀಕರಿಸಿ, ಅವರ ವಿಳಾಸವನ್ನು ಗೊತ್ತುಪಡಿಸಿ, ಸ್ವಯಂ
ಸೇವಕರನ್ನು ನಿಯೋಜಿಸುತ್ತಾರೆ ಮತ್ತು ಪ್ರತಿಕ್ರಿಯೆಯನ್ನು ಪಡೆಯುತ್ತಾರೆ. ಅಲ್ಲದೇ, ಮನವಿ ಮಾಡಿದ ರೋಗಿಗಳಿಗೆ ಔಷಧವನ್ನು
ಸಹ ತಲುಪಿಸಲಾಗುವುದು ಎಂದು ವಿನೋದ್ ತಿಳಿಸಿದರು.

ಇಂತಹ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಮನೆ ಬಾಗಿಲಿಗೆ ಉಚಿತ ಆಹಾರ ಸೇವೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು
ಫಲಾನುಭವಿ ಶ್ರೀಧರ್ ತಿಳಿಸಿದರು.

ಕಳೆದ ವರ್ಷ ದೇಶಾದ್ಯಂತ ಲಾಕ್ ಡೌನ್ ಆದಾಗ ಈ ಸ್ವಯಂ ಸೇವಾ ಸಂಸ್ಥೆಗಳು, ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿನ ಬುಡಕಟ್ಟು ಸಮುದಾಯದ ಕಾಲೋನಿಗಳಲ್ಲಿ ಆಹಾರಧಾನ್ಯ ಮತ್ತಿತರ ಅವಶ್ಯಕ ವಸ್ತುಗಳನ್ನು ವಿತರಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com