ಜೀವ ಉಳಿಸುವುದು ಮುಖ್ಯವೇ ಹೊರತು ರಾಜಕೀಯವಲ್ಲ: ಡಿಕೆಶಿ

ಕೊರೋನಾ ಮಹಾಮಾರಿ ಹೆಚ್ಚುತ್ತಿರುವಂತಹ ಪ್ರಸಕ್ತ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವುದು,ಜೀವ ಉಳಿಸುವುದು ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Updated on

ಬೆಂಗಳೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವಂತಹ ಪ್ರಸಕ್ತ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವುದು,
ಜೀವ ಉಳಿಸುವುದು ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಚಾಮರಾಜನಗರಕ್ಕೆ ತೆರಳುವ ಮುನ್ನ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸೋಮವಾರ ಆರೇಳು ದೇಹಗಳ ಶವಸಂಸ್ಕಾರ ಪೊಲೀಸರೇ ಮಾಡಿದ್ದಾರೆ, ಉಳಿದದ್ದನ್ನು ಊರಿಗೆ ಕಳಿಸಿದ್ದಾರೆ, ಜನರ ಆಕ್ರಂದನ ಮುಗಿಲು ಮುಟ್ಟಿದೆ. ಚಾಮರಾಜನಗರದಲ್ಲಿ ಇಪ್ಪತ್ತನಾಲ್ಕು ಜನರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಸಾವಿನ ಸಂಖ್ಯೆ ಇನ್ನೂ ಗಣನೀಯವಾಗಿದ್ದು, ಸರ್ಕಾರ ಅದನ್ನು ಮರೆಮಾಚುತ್ತಿದೆ.ನಿಜವಾದ ಅಂಕಿಅಂಶವನ್ನು ಕಾಂಗ್ರೆಸ್ ಕಲೆಹಾಕಿದೆ 
ಗಾಬರಿಯಲ್ಲಿ ನನ್ನ ಸ್ನೇಹಿತರು ಒಬ್ಬರು ಸತ್ತಿದ್ದಾರೆ‌.ಹೀಗಾಗಿ ಈಗಲೇ ಅದನ್ನು ಜನರಿಗೆ ಹೇಳಿದರೆ ಜನ ಇನ್ನಷ್ಟು ಗಾಬರಿ ಆಗಿತ್ತಾರೆ ಎಂದರು.

ಇಡೀ ದೇಶದಲ್ಲೇ ಕರ್ನಾಟಕಕ್ಕೆ ದೊಡ್ಡ ಅವಮಾನ ಆಗುತ್ತಿದೆ. ಜನರ ಕಷ್ಟದಲ್ಲಿ ನಾವು ಜೊತೆಗಿರಬೇಕು.ಸಾವು ಹೇಗಾಯ್ತು? ಏನಾಯ್ತು? ಎಂಬ ವಾಸ್ತವಾಂಶ ತಿಳಿಸಬೇಕು.ಇವರಿಗೆ ಸರ್ಕಾರ ನಡೆಸೋಕೆ ಆಗದೇಯಿದ್ದರೆ ಎಲ್ಲರೂ ಸಚಿವ ಸಂಪುಟ ಬಿಟ್ಟು ಹೋಗಲಿ, ಎಲ್ಲರೂ ರಾಜೀನಾಮೆ ಕೊಡಲಿ, ಸರ್ಕಾರವೇ ರಾಜೀನಾಮೆ ಕೊಡಲಿ, ಗೌವರ್ನರ್ ಆಡಳಿತ ಬರಲಿ, 
ಅವರೇ ನಡೆಸುತ್ತಾರೆ ಎಂದು ಶಿವಕುಮಾರ್ ಹೇಳಿದರು.

ಸಂಪುಟದ ಒಬ್ಬ ಮಂತ್ರಿಯೂ ಸತ್ತವರ ಕುಟುಂಬಸ್ಥರ ಜೊತೆಗೆ ಮಾತನಾಡಿಲ್ಲ.ಸರ್ಕಾರದ ಮೇಲೆ ನಂಬಿಕೆ ಇಲ್ಲ ಅಂತಾನೇ ನಾವು ನಿನ್ನೆ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ  ಮನವಿ ಸಲ್ಲಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜರಾಜೇಶ್ವರಿ ಆಸ್ಪತ್ರೆಗೆ ಹಾಗೂ ಆರ್.ಟಿ.‌ ನಗರದ ಆಸ್ಪತ್ರೆಗೆ ಸೋಮವಾರ ರಾತ್ರಿ  ಆಕ್ಸಿಜನ್ ಬಂದಿದೆ.ಮೃತಪಟ್ಟ ಕುಟುಂಬಕ್ಕೆ ಧೈರ್ಯ ಕೊಡಬೇಕು‌. ಹಿಂದೆ ಎಲ್ಲಾ 60 ವರ್ಷ,  65 ವರ್ಷ ಅಂತಿದ್ದವರು.ಆದರೀಗ 20, 21, 22 ವರ್ಷದ ಯುವಕರು, ಮದುವೆಯಾದ  ಮಾರನೇ ದಿನವೇ ಮೃತಪಟ್ಟವರ ಬಗ್ಗೆ ವರದಿಯಾಗಿವೆ.ನಮ್ಮ ಕುಟುಂಬದಲ್ಲಿಯೇ ಎರಡು ಮದುವೆ ಇತ್ತು .ನನ್ನ ಚಿಕ್ಕಪ್ಪ, ತಮ್ಮನ ಮಗಳ ಮದುವೆ ಹಾಗೂ ನನ್ನ ಭಾವಮೈದನ ಮದುವೆ, ಎರಡೂ ಮುಂದೂಡಿರುವುದಾಗಿ ಡಿಕೆಶಿ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com