ಸುಭಾಷ್
ಸುಭಾಷ್

ಕಲಬುರಗಿ: ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ಕೊರೋನಾಗೆ ತಂದೆ ಬಲಿ

ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೋನಾಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ: ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೋನಾಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ನಿವಾಸಿ ಸುಭಾಷ್ ತಾವರಖೇಡ(32) ಅವರಿ​ಗೆ ವಾರದ ಹಿಂದೆ  ಕೊರೋನಾ ಸೋಂಕು ದೃಢವಾಗಿತ್ತು. 

ಹೀಗಾಗಿ ಅವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್​ನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೇ ಸುಭಾಷ್ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೋನಾಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related Stories

No stories found.

Advertisement

X
Kannada Prabha
www.kannadaprabha.com