ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಶೇಕಡಾ 90 ರಷ್ಟು ಕೋವಿಡ್ ಲಸಿಕೆ ನೀಡಿಕೆ ಕಷ್ಟಸಾಧ್ಯ

ಅರ್ಹ ಜನಸಂಖ್ಯೆಯ ಶೇಕಡ 90 ರಷ್ಟು ಲಸಿಕೆ ಹಾಕುವ ತನ್ನ ನಿರೀಕ್ಷಿತ ಗುರಿ ತಲುಪಲು ರಾಜ್ಯ ಸರ್ಕಾರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿಯಿದೆ. ಅಷ್ಟರೊಳಗೆ ಕೋವಿಡ್-19 ಎರಡು ಡೋಸ್ ಗಳೊಂದಿಗೆ ಕೇವಲ ಶೇ.82 ರಷ್ಟು ವಯಸ್ಕರಿಗೆ ಮಾತ್ರ ಲಸಿಕೆ ಹಾಕಬಹುದೆಂದು ಸ್ವತಂತ್ರ ಸಾರ್ವಜನಿಕ ಆರೋಗ್ಯ ನೀತಿ ವಿಶ್ಲೇಷಕ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ. 
ಆರೋಗ್ಯ ಸಿಬ್ಬಂದಿಯೊಬ್ಬರು ಲಸಿಕೆ ಹಾಕುತ್ತಿರುವ ಚಿತ್ರ
ಆರೋಗ್ಯ ಸಿಬ್ಬಂದಿಯೊಬ್ಬರು ಲಸಿಕೆ ಹಾಕುತ್ತಿರುವ ಚಿತ್ರ
Updated on

ಬೆಂಗಳೂರು: ಅರ್ಹ ಜನಸಂಖ್ಯೆಯ ಶೇಕಡ 90 ರಷ್ಟು ಲಸಿಕೆ ಹಾಕುವ ತನ್ನ ನಿರೀಕ್ಷಿತ ಗುರಿ ತಲುಪಲು ರಾಜ್ಯ ಸರ್ಕಾರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿಯಿದೆ. ಅಷ್ಟರೊಳಗೆ ಕೋವಿಡ್-19 ಎರಡು ಡೋಸ್ ಗಳೊಂದಿಗೆ ಕೇವಲ ಶೇ.82 ರಷ್ಟು ವಯಸ್ಕರಿಗೆ ಮಾತ್ರ ಲಸಿಕೆ ಹಾಕಬಹುದೆಂದು ಸ್ವತಂತ್ರ ಸಾರ್ವಜನಿಕ ಆರೋಗ್ಯ ನೀತಿ ವಿಶ್ಲೇಷಕ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ. 

ಲಸಿಕೆ ನೀಡಿಕೆ ಕುರಿತ ಲಭ್ಯವಿರುವ ರಾಜ್ಯದ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಡಾ. ಲಹರಿಯಾ, ಶೇ. 90 ರಷ್ಟು ಗುರಿ ಸಾಧನೆಗೆ ಪರ್ಯಾಯ ಮಾರ್ಗವಿಲ್ಲ, ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಶೇ. 82 ರಷ್ಟು ವಯಸ್ಕರಿಗೆ ಮಾತ್ರ ಎರಡು ಡೋಸ್ ಪಡೆದುಕೊಳ್ಳಬಹುದು ಎಂದು ಹೇಳಿದರು.

ರಾಜ್ಯದಾದ್ಯಂತ ಶೇ. 51 ರಷ್ಟು ವಯಸ್ಕರು ಎರಡು ಡೋಸ್ ಲಸಿಕೆ ಪಡೆದಿದ್ದರೆ, ಶೇ. 88 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಆದಾಗ್ಯೂ, ಮನೆ ಮನೆಗೆ ಲಸಿಕೆಯಂತಹ ಕಾರ್ಯಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಈಗಲೂ ಲಸಿಕೆ ನೀಡುವಿಕೆ ಸವಾಲಿನ ಕಾರ್ಯವಾಗಿದೆ. 

ಮನೆ ಮನೆಗೆ ಲಸಿಕೆ ಆಂದೋಲನ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಸ್ವಯಂ ಸೇವಕರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಜನರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವುದಾಗಿ ಹೇಳುತ್ತಾರೆ. ಆದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುತ್ತಿಲ್ಲ. ಮೊದಲ ಡೋಸ್ ತೆಗೆದುಕೊಳ್ಳಲು ಅವರು ಮತ್ತೊಂದು ಫೋನ್ ಬಳಕೆ ಇದಕ್ಕೆ ಕಾರಣವಾಗುತ್ತಿದೆ. ಎನ್ ಜಿ ಒ, ಆಶಾ ಕಾರ್ಯಕರ್ತರೊಂದಿಗೆ ಸೇರಿ ಈ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ರಾಜ್ಯ ನಿರ್ದೇಶಕರಾದ ಡಾ. ಅರುಂದತಿ ಚಂದ್ರಶೇಖರ್ ಹೇಳಿದ್ದಾರೆ. 

ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳು ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಹಿಂದೆ ಬಿದ್ದಿವೆ. ಕಲಬುರಗಿ, ಹಾವೇರಿ, ಮತ್ತು ರಾಯಚೂರಿನಲ್ಲಿ ಎರಡು ಡೋಸ್ ನೊಂದಿಗೆ ಕೇವಲ ಶೇ. 39 ರಷ್ಟು ಲಸಿಕೆ ಕಾರ್ಯ ನಡೆದಿದ್ದರೆ, ಶೇ.74 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ.  ದಾವಣಗೆರೆ, ಧಾರವಾಡ, ಚಾಮರಾಜನಗರ, ಯಾದಗಿರಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ 42 ರಿಂದ 49 ರಷ್ಟಿದೆ.

ಮನೆ ಮನೆಗೆ ಲಸಿಕೆ ನೀಡಿಕೆ ಕಾರ್ಯದೊಂದಿಗೆ ನಿಗದಿತ ಗುರಿಯನ್ನು ಸಾಧಿಸುವ ವಿಶ್ವಾಸವಿದೆ. ಜನರು ಎರಡನೇ ಡೋಸ್ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಡಾ. ಅರುಂದತಿ ವಿವರಿಸಿದ್ದಾರೆ. ಆದಾಗ್ಯೂ, ಡಿಸೆಂಬರ್ ಅಂತ್ಯದೊಳಗೆ ಶೇ 75 ರಿಂದ 80 ರಷ್ಟು ಎರಡನೇ ಡೋಸ್ ಗುರಿ ಸಾಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com