ಶಾಲೆ, ವಿದ್ಯಾಭ್ಯಾಸಕ್ಕೂ, ಮಹಿಳೆಯರು ಸಂತಾನ ಪಡೆಯುವುದಕ್ಕೂ ನಂಟಿರುವುದನ್ನು ದೃಢಪಡಿಸಿದ ಸಮೀಕ್ಷೆ...

ಶಾಲೆ, ವಿದ್ಯಾಭ್ಯಾಸಕ್ಕೂ ಮಹಿಳೆಯರು ವಿವಾಹವಾಗಿ ಸಂತಾನ ಪಡೆಯುವುದಕ್ಕೂ ನೇರವಾದ ಸಂಬಂಧವಿರುವುದನ್ನು 2019-2020 ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಹಿರಂಗಪಡಿಸಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಬೆಂಗಳೂರು: ಶಾಲೆ, ವಿದ್ಯಾಭ್ಯಾಸಕ್ಕೂ ಮಹಿಳೆಯರು ವಿವಾಹವಾಗಿ ಸಂತಾನ ಪಡೆಯುವುದಕ್ಕೂ ನೇರವಾದ ಸಂಬಂಧವಿರುವುದನ್ನು 2019-2020 ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಹಿರಂಗಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದೆ. 

ಶಾಲೆಗೆ ಹೋಗದೇ ಇರುವ ಹೆಣ್ಣುಮಕ್ಕಳು ಬೇಗ ಅಥವಾ ಹೆಚ್ಚು ಮಕ್ಕಳನ್ನು ಪಡೆಯುವ ಪ್ರಮಾಣ ಶೇ.18 ರಷ್ಟಿದ್ದು ಏರುಗತಿಯಲ್ಲಿದೆ. 12 ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರಲ್ಲಿ ಈ ಪ್ರಮಾಣ ಶೇ.3 ರಷ್ಟಿದೆ. 

ಈಗಿನ ಸಂತಾನೋತ್ಪತ್ತಿ ದರದಲ್ಲಿ 12 ವರ್ಷಕ್ಕಿಂತ ಹೆಚ್ಚಿನ ಕಾಲ ಶಾಲೆಗೆ ಹೋದ ಮಹಿಳೆಯರಿಗಿಂತಲೂ ಶೇ.04. ರಷ್ಟು ಹೆಚ್ಚು ಮಕ್ಕಳನ್ನು ಶಾಲೆಗೆ ಹೋಗದ ಮಹಿಳೆಯರು ಹೊಂದಿರುತ್ತಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ವಾಸ್ತವಿಕ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸಮುದಾಯ ಆರೋಗ್ಯ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಕ್ಯಾರೊಲಿನ್ ಎಲಿಜಬೆತ್ ಜಾರ್ಜ್ ಹೇಳಿದ್ದಾರೆ.
 
ಕಡಿಮೆ ಸಂಪನ್ಮೂಲಗಳಿರುವ ಪ್ರದೇಶಗಳಲ್ಲಿ, ಉದಾಹರಣೆಗೆ, ಡಿಜೆ ಹಳ್ಳಿಯ ಸ್ಲಮ್ ಗಳಲ್ಲಿ 13 ವರ್ಷಕ್ಕೆ ಪ್ರೌಢಾವಸ್ಥೆ ತಲುಪುವ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಾರೆ, 14ನೇ ವರ್ಷಕ್ಕೆ ಅವರಿಗೆ ಮಕ್ಕಳಾಗಿರುತ್ತವೆ. ವಿದ್ಯಾಭ್ಯಾಸಕ್ಕೆ ಅವಕಾಶ ನೀಡದೇ ಇದ್ದಲ್ಲಿ ಗುರಿ ಸ್ಪಷ್ಟವಾಗಿರುವುದಿಲ್ಲ ಪರಿಣಾಮವಾಗಿ ಬೇಗ ಮದುವೆಯಾಗುತ್ತಾರೆ. ಯಾವಾಗ ಮೊದಲ ಮಗು ಬೇಕು, ಎರಡು ಮಕ್ಕಳ ನಡುವೆ ಅಂತರ ಏನಿರಬೇಕು, ಮುನ್ನೆಚ್ಚರಿಕಾ ಕ್ರಮ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯ ಅವರಿಗಿರುವುದಿಲ್ಲ ಎಂದು ಡಾ. ಕ್ಯಾರೊಲಿನ್ ಎಲಿಜಬೆತ್ ಜಾರ್ಜ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com