ರಾಜ್ಯಪಾಲ ಗೆಹ್ಲೋಟ್ ನಿರ್ಗಮನದ ಬಳಿಕ ಧುಮ್ಮಿಕ್ಕಿ ಹರಿದ ಜೋಗ ಜಲಪಾತ!

ಕೆಪಿಸಿಎಲ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭೋರ್ಗರೆಯುವ ಜೋಗ ಜಲಾಪಾತ ನೋಡಲು ಹೋದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ನಿರಾಸೆಯಾಗುವಂತಾಗಿದೆ.
ಜೋಗ ಜಲಪಾತ ವೀಕ್ಷಿಸುತ್ತಿರುವ ರಾಜ್ಯಪಾಲ ಗೆಹ್ಲೋಟ್
ಜೋಗ ಜಲಪಾತ ವೀಕ್ಷಿಸುತ್ತಿರುವ ರಾಜ್ಯಪಾಲ ಗೆಹ್ಲೋಟ್
Updated on

ಶಿವಮೊಗ್ಗ: ಕೆಪಿಸಿಎಲ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭೋರ್ಗರೆಯುವ ಜೋಗ ಜಲಾಪಾತ ನೋಡಲು ಹೋದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ನಿರಾಸೆಯಾಗುವಂತಾಗಿದೆ.

ಎರಡು ದಿನದ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು ನಿನ್ನೆ ಜೋಗ ಜಲಪಾತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.

ಬುಧವಾರ ಶಿವಮೊಗ್ಗ ಜಿಲ್ಲೆಗೆ ಗೆಹ್ಲೋಟ್ ಆಗಮಿಸಿದ್ದು, ಕೆಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಗುರುವಾರ ಜೋಗ್ ಫಾಲ್ಸ್'ಗೆ  ಭೇಟಿ ನೀಡುವುದಾಗಿ ತಿಳಿಸಿ ಜಲಪಾತದ ಬಳಿಯೇ ಇರುವ ಬಾಂಬೆ ಗೆಸ್ಟ್ ಹೌಸ್ ನಲ್ಲಿ ರಾತ್ರಿ ತಂಗಿದ್ದರು. ಗುರುವಾರ ಬೆಳಿಗ್ಗೆಯೇ ಜಲಪಾತಕ್ಕೆ ಭೇಟಿ ನೀಡಿದ್ದರು.

ರಾಜ್ಯಪಾಲರು ಜೋಗ ಜಲಪಾತ ನೋಡಲು ಬರುತ್ತಿದ್ದಾರೆಂದು ತಿಳಿಯುತ್ತಿದ್ದಂತೆ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ ಬೆಳ್ಳಂಬೆಳಗ್ಗೆ ನೀರು ಬಿಟ್ಟಿದ್ದರು. ಆದರೆ, ಜಲಾಶಯದಿಂದ ಜಲಪಾತದ ಭಾಗಕ್ಕೆ ನೀರು ಹರಿದು ಬರಲು 3 ಗಂಟೆಯಷ್ಟು ಸಮಯಬೇಕು. ಅಷ್ಟರಲ್ಲಿ ಬೆಳಗ್ಗೆ ಸುಮಾರು 7.30ರ ಸುಮಾರಿಗಾಗಲೇ ರಾಜ್ಯಪಾಲರು ಜೋಗ ಜಲಪಾತ ನೋಡಲು ಬಂದಿದ್ದಾರೆ.

ಆ ವೇಳೆಗೆ ಜಲಾಶಯದಿಂದ ಬಿಟ್ಟ ನೀರು ಜಲಪಾತ ತಲುಪದೆ ಕ್ಷೀಣ ಸ್ಥಿತಿಯಲ್ಲಿದ್ದ ಜಲಪಾತವನ್ನು ನೋಡುವುದಕ್ಕಷ್ಟೇ ಗೆಹ್ಲೋಟ್ ತೃಪ್ತಿಪಡಬೇಕಾಯಿತು. 10 ನಿಮಿಷ ಜಲಪಾತದ ವೀಕ್ಷಣಾ ಪ್ರದೇಶದಲ್ಲಿದ್ದುಕೊಂಡು ರಾಜ್ಯಪಾಲರು ಜಲಪಾತ ವೀಕ್ಷಿಸಿ. ಅಲ್ಲಿಂದ ಹೊರಟರು.

ರಾಜ್ಯಪಾಲರು ಸ್ಥಳದಿಂದ ಹೊರಟ ಬಳಿಕ ಲಿಂಗನಮಕ್ಕಿ ಆಣೆಕಟ್ಟೆಯ ನೀರು ಬಂದು ಜೋಗ ಆಕರ್ಷಕವಾಗಿ ಕಾಣಿಸಿತು. ಅಧಿಕಾರಿಗಳ ಎಡವಟ್ಟಿನಿಂದ ಧುಮ್ಮುಕ್ಕಿ ಹರಿಯುವ ಜೋಗವನ್ನು ನೋಡಲು ರಾಜ್ಯಪಾಲರಿಗೆ ಅವಕಾಶ ಸಿಗದಂತಾಯಿತು.

ಈ ನಡುವೆ ಯಾವುದೇ ಮಾಹಿತಿಗಳನ್ನೂ ನೀಡದೆ ಅಧಿಕಾರಿಗಳು ಹೆಚ್ಚಿನ ನೀರು ಹರಿಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

ಹೆಚ್ಚುವರಿ ನೀರು ಬಿಡುವುದಕ್ಕೂ ಮುನ್ನ ಅಧಿಕಾರಿಗಳು ಜನರಿಗೆ ಮಾಹಿತಿ ನೀಡಬೇಕೆಂದು ಅಂಬುಗಳಲೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಸಾಕಷ್ಟು ಬಾರಿ ಶರಾವತಿ ಜಲವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ (ಸಿವಿಲ್) ಲಿಂಗನಮಕ್ಕಿ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಗಿತ್ತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com