ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಸದ್ಯಕ್ಕಿಲ್ಲ : ಸಚಿವ ಬಿ.ಸಿ ನಾಗೇಶ್

ಕೊರೋನಾ ಹೊಸ ತಳಿಯ ಕಾರಣದಿಂದ ರಾಜ್ಯದಲ್ಲಿ ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಮಾಡಿಲ್ಲ ಪೋಷಕರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ .
ಬಿಸಿ ನಾಗೇಶ್
ಬಿಸಿ ನಾಗೇಶ್

ಬೆಂಗಳೂರು: ಕೊರೋನಾ ಹೊಸ ತಳಿಯ ಕಾರಣದಿಂದ ರಾಜ್ಯದಲ್ಲಿ ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಮಾಡಿಲ್ಲ ಪೋಷಕರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ .

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವ ಬಗ್ಗೆ ಖಾಸಗಿ ಟಿವಿವಾಹಿನಿ ಜೊತೆ ಮಾತನಾಡಿದ ಸಚಿವರು, ಸದ್ಯಕ್ಕೆ ಶಾಲಾ -ಕಾಲೇಜು ಬಂದ್ ಮಾಡುವ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.

ಪೋಷಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ. ಶಾಲೆ ಮುಚ್ಚುವ ನಿರ್ಧಾರ ಶಿಕ್ಷಣ ಇಲಾಖೆಯ ಮುಂದಿಲ್ಲ. ಕೊರೊನಾ ಹೆಚ್ಚಾದರೆ ಸರ್ಕಾರದ ಸಲಹೆ ಪಡೆದು ನಿರ್ಧಾರ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಸದ್ಯ ಶಾಲೆ-ಕಾಲೇಜುಗಳಲ್ಲಿ ಸೋಂಕು ಗಂಭೀರವಾಗಿ ಹರಡಿಲ್ಲ ಎಂದು  ಶಿಕ್ಷಣ  ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.

ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಕೊವಿಡ್ ರೂಪಾಂತರಿ ‘ಒಮಿಕ್ರಾನ್’ ವೈರಸ್ ಆತಂಕ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತಪಾಸಣೆಯನ್ನು ಚುರುಕುಗೊಳಿಸಿದೆ. ತಲಪಾಡಿ ಗಡಿಯಲ್ಲಿ ವಾಹನಗಳ ತಪಾಸಣೆ ಚುರುಕಾಗಿದೆ. ಜಿಲ್ಲೆ ಪ್ರವೇಶಕ್ಕೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com