ಧಾರವಾಡದ ಎಸ್ ಡಿಎಂ ವೈದ್ಯಕೀಯ ಕಾಲೇಜಿನಲ್ಲಿ 25 ಹೊಸ ಕೋವಿಡ್ ಪ್ರಕರಣ: ಸೋಂಕಿತರ ಸಂಖ್ಯೆ 306ಕ್ಕೆ ಏರಿಕೆ
ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 306ಕ್ಕೇರಿದ್ದು, ನಿನ್ನೆ 25 ಹೊಸ ಕೇಸುಗಳು ಪತ್ತೆಯಾಗಿವೆ.
Published: 28th November 2021 09:37 AM | Last Updated: 28th November 2021 09:57 AM | A+A A-

ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿರುವ ಜನರು
ಧಾರವಾಡ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 306ಕ್ಕೇರಿದ್ದು, ನಿನ್ನೆ 25 ಹೊಸ ಕೇಸುಗಳು ಪತ್ತೆಯಾಗಿವೆ.
ಮಾಸ್ಕ್ ಹಾಕದಿದ್ದರೆ ದಂಡ: ಧಾರವಾಡದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚರ ವಹಿಸಲು ಆದೇಶ ಹೊರಡಿಸಲಾಗಿದೆ. ಮಾಸ್ಕ್ ಧರಿಸದೆ ಜನರು ಹೊರಗೆ ಬಂದರೆ ದಂಡ ವಿಧಿಸುವ ಕ್ರಮವನ್ನು ಹುಬ್ಬಳ್ಳಿ-ಧಾರವಾಡ ಜಿಲ್ಲಾಡಳಿತ ಮತ್ತೆ ಆರಂಭಿಸಿದ್ದು ನಿನ್ನೆ 280 ಕೇಸುಗಳನ್ನು ದಾಖಲಿಸಲಾಗಿದೆ. ಮಾರ್ಷಲ್ ಗಳು ಅಖಾಡಕ್ಕಿಳಿದು ಮಾಸ್ಕ್ ಹಾಕದವರಿಗೆ ಬುದ್ದಿವಾದ ಹೇಳಿ ದಂಡ ಹಾಕಿದ್ದು ಕಂಡುಬಂತು.
ಇದನ್ನೂ ಓದಿ: ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸ್ಫೋಟ: ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆ
ನಿನ್ನೆ ಎಸ್ ಡಿಎಂ ಕಾಲೇಜು ಕ್ಲಸ್ಟರ್ ನಿಂದ 2 ಸಾವಿರದ 217 ಮಂದಿಯಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು ಕಳೆದ ಮೂರು ದಿನಗಳಲ್ಲಿ 3 ಸಾವಿರದ 973 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದುವರೆಗೆ ಕೋವಿಡ್ -19 ಎಸ್ ಡಿಎಂ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳಿಗೆ ಹಬ್ಬಿರುವ ಬಗ್ಗೆ ವರದಿಯಾಗಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
#Justin With 25 new cases SDM Medical College Covid19 numbers now reach to 306 @santwana99 @ramupatil_TNIE @NewIndianXpress @XpressBengaluru @KannadaPrabha @Arunkumar_TNIE @HubliCityeGroup @hublimandi @Hubballi_Infra @Namma_HD @Namma_Dharwad pic.twitter.com/4J0F24BNjZ
— Amit Upadhye (@Amitsen_TNIE) November 27, 2021