
ಧಾರವಾಡದ ಎಸ್ ಡಿಎಂ ವೈದ್ಯಕೀಯ ಕಾಲೇಜು
ಧಾರವಾಡ: ಧಾರವಾಡ ನಗರದ ಎಸ್ ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಶನಿವಾರ 281ಕ್ಕೇರಿದೆ. ನಿನ್ನೆ ಹೊಸದಾಗಿ 77 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 281 ಸೋಂಕಿತರ ಪೈಕಿ 6 ಮಂದಿ ಮಾತ್ರ ಕೋವಿಡ್-19 ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ತಿಳಿಸಿದ್ದಾರೆ.
ಇನ್ನು ಕಾಲೇಜಿನ 1,822 ಮಂದಿಯ ಸ್ಯಾಂಪಲ್ ಗಳ ವರದಿ ಬರಬೇಕಾಗಿದ್ದು, ಇಂದು ಸಾಯಂಕಾಲ ವರದಿ ಸಿಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಎಸ್ ಡಿಎಂ ಮೆಡಿಕಲ್ ಕಾಲೇಜಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದುತ್ತಿರುವ ರೋಗಿಗಳು ಆರ್ ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಮತ್ತು 7 ದಿನ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಆಸ್ಪತ್ರೆ ಆವರಣಕ್ಕೆ ಹೋಗಲು ಆಯ್ದ ಪೊಲೀಸರಿಗೆ ಮಾತ್ರ ಅವಕಾಶ ಕಲ್ಪಸಲಾಗಿದೆ.
#DharwadCovidCluster #Hubballi-#Dharwad
— Arunkumar Huralimath (@Arunkumar_TNIE) November 27, 2021
77 new #COVID19 cases reported at SDM medical college. Total case increases to 2️⃣8️⃣1️⃣@NewIndianXpress @XpressBengaluru @santwana99 @ramupatil_TNIE @Amitsen_TNIE @pramodvaidya06 @KannadaPrabha @HubliCityeGroup @Hubballi_Infra @hublimandi pic.twitter.com/MCLzLR5m21