ರಾಜಕೀಯದಲ್ಲಿ ಯಾರ ಪರವಾಗಿಯೂ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬಿಜೆಪಿಗೆ ಸಹಾಯ ಮಾಡಲು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆಂದು ತಮ್ಮ ಪಕ್ಷವನ್ನು ಟೀಕಿಸುತ್ತಿರುವವರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ತೀವ್ರವಾಗಿ ಕಿಡಿಕಾರಿದ್ದು, ರಾಜಕೀಯದಲ್ಲಿ ನಾವು ಯಾರ ಪರವಾಗಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಗೆ ಸಹಾಯ ಮಾಡಲು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆಂದು ತಮ್ಮ ಪಕ್ಷವನ್ನು ಟೀಕಿಸುತ್ತಿರುವವರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ತೀವ್ರವಾಗಿ ಕಿಡಿಕಾರಿದ್ದು, ರಾಜಕೀಯದಲ್ಲಿ ನಾವು ಯಾರ ಪರವಾಗಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಮ್ಮನ್ನು ನಿರ್ದೇಶಿಸಲು ಅವರು ಯಾರು? ನಾವು ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ವತಂತ್ರರಾಗಿದ್ದೇವೆಂದು ಹೇಳಿದ್ದಾರೆ. 

"ನಮ್ಮ ಪರಿಸ್ಥಿತಿಯನ್ನು ನೋಡಿ. ನಾವು ಮುಸ್ಲಿಮರಿಗೆ ಟಿಕೆಟ್ ನೀಡಿದರೆ, ಅವರು ನಮಗೆ ಬಿಜೆಪಿ ಒಲವು ತೋರಿದ್ದಾರೆ ಎಂದು ಆರೋಪಿಸುತ್ತಾರೆ. ನಾವು ಅದನ್ನು ಒಬಿಸಿಗೆ ನೀಡಿದರೆ, ಕಾಂಗ್ರೆಸ್ ವಿರುದ್ಧ ಎಂದು ಹೇಳುತ್ತಾರೆ ಮತ್ತು ನಾವು ಲಿಂಗಾಯತರನ್ನು ಕಣಕ್ಕಿಳಿಸಿದರೆ, ಬಿಜೆಪಿಯನ್ನು ಸೋಲಿಸಲು ಇದನ್ನು ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ನಾವು ಬಿಜೆಪಿ ಅಥವಾ ಕಾಂಗ್ರೆಸ್ ಪರವಾಗಿ ಇಲ್ಲ. ನಾವು ನಮ್ಮದೇ ಕಾರ್ಯತಂತ್ರದಲ್ಲಿ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ. 

ಪ್ರಾದೇಶಿಕ ಪಕ್ಷವಾಗಿ ನಾವು ಅಕ್ಟೋಬರ್ 30ರ ಉಪಚುನಾವಣೆಗೆ ಕ್ರಮವಾಗಿ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳಾಗಿ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ ಮತ್ತು ನಿಯಾಜ್ ಶೇಖ್ ಅವರನ್ನು ಕಣಕ್ಕಿಳಿಸುತ್ತಿದೆ. ಸಿಂದಗಿಯಲ್ಲಿ ಗೆಲುವು ಖಚಿತ, ಹಾಸನಗಲ್ ಉತ್ತಮವಾದಿ ಸ್ಪರ್ಧೆ ಏರ್ಪಡುವ ವಿಶ್ವಾಸವಿದೆ ಎಂದಿದ್ದಾರೆ.  

"ಅಲ್ಪಸಂಖ್ಯಾತ ಸಮುದಾಯದ ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಲ್ಲಿ ಏನು ತಪ್ಪಿದೆ. ವಾಸ್ತವವಾಗಿ, ಜೆಡಿಎಸ್ ಅನ್ನು ಬಿಜೆಪಿ ಬಿ-ಟೀಮ್ ಎಂದು ಕರೆಯುವ ಮೂಲಕ, ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಕಳೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆಲ್ಲಲು ಅವರಿಗೆ ಸಹಾಯ ಮಾಡಿದರು. ಇಲ್ಲದಿದ್ದರೆ ನಾವು 60-65 ಮತ್ತು ಬಿಜೆಪಿ 70-75 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತ್ತು ಎಂದು ಹೇಳಿದ್ದಾರೆ. 

ಮುಂದಿನ ಕಠಿಣ ಸವಾಲನ್ನು ಅರಿತಿರುವ ಜೆಡಿಎಸ್ ಈಗಾಗಲೇ 2023ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಸಂಭಾವ್ಯ ಅಭ್ಯರ್ಥಿಗಳನ್ನು ಗುರ್ತಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರುವುದನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಇದಕ್ಕಾಗಿ ಸಿದ್ಧತೆ ನಡೆಸಲು 17 ತಿಂಗಳು ನಮ್ಮ ಬಳಿ ಕಾಲಾವಕಾಶವಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಜೆಡಿಎಸ್ ನ ನಾಲ್ಕು ದಿನಗಳ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮತ್ತೆ ಎರಡು ದಿನ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. 

ಪಕ್ಷದಿಂದ ಹೋಗೋದು ಬರೋದು ಹೊಸದೇನು ಅಲ್ಲ. ಜೆಡಿಎಸ್ ಮನೆ ಖಾಲಿ ಖಾಲಿ ಅಂತಾ ಬಿಂಬಿಸಲಾಗುತ್ತಿದೆ. ಸಿದ್ದರಾಮಯ್ಯ, ರಮೇಶ್‌ ಕುಮಾರ್, ಮಹಾದೇವಪ್ಪ, ಅಮರೇಗೌಡ ಬಯ್ಯಾಪುರ್, ಬಿ.ಎಲ್ ಶಂಕರ್ ಇವರೆಲ್ಲಾ ಎಲ್ಲಿದ್ದರು. ಸಿದ್ದರಾಮಯ್ಯ ಇದ್ದಾಗಲೂ ಪಕ್ಷ ಗೆದ್ದಿದ್ದು 58 ಸ್ಥಾನ ಅಷ್ಟೇ. ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಅಪವಾದ ಸೃಷ್ಟಿಸಲಾಯಿತು. ನನ್ನ ಪಾತ್ರವೇ ಇಲ್ಲದಿದ್ದರೂ ಅಪವಾದ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ಇದ್ದಾಗಲೂ ಶೇ.20ರಷ್ಟು. ಅವರು ಹೋದಾಗಲೂ ಶೇಕಡಾವಾರು ಅಷ್ಟೇ. ಈ ಪಕ್ಷ ನಿಂತಿರೋದು ನಾಯಕರಿಂದ ಅಲ್ಲ. ಕಾರ್ಯಕರ್ತರಿಂದ ಅಷ್ಟೇ ಈಗಲೂ ಉಳಿದಿದೆ ಎಂದರು.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ರಾಜಕಾರಣಕ್ಕೂ ನನ್ನ ರಾಜಕಾರಣಕ್ಕೂ ವ್ಯತ್ಯಾಸ ಇದೆ. ಬಿಜೆಪಿಯ ಅಂಗ ಪಕ್ಷಗಳೆಲ್ಲಾ ಸೇರಿ ಯಾವ ರೀತಿ ಚುನಾವಣೆ ನಡೆಸಿವೆ ಎಂಬುದು ಗೊತ್ತಿದೆ.

ರಾಜ್ಯದಲ್ಲಿ ಜೆಡಿಎಸ್ ಸೊರಗಿಲ್ಲ. 38 ಸ್ಥಾನಗಳನ್ನು ಪಡೆಯುವ ನಮ್ಮ ಪಕ್ಷಕ್ಕೆ 128 ಅಸಾಧ್ಯವೇನಲ್ಲ. ಯಾರೋ ಪಕ್ಷ ಬಿಡುತ್ತಾರೆಂದು ಗಾಬರಿಯಾಗೋದು ಬೇಡ. ಜೆಡಿಎಸ್ ಎಲ್ಲಾ ಸಂದರ್ಭದಲ್ಲಿ ಪರಾವಲಂಭಿ ಪಕ್ಷ ಅಂತಾ ಹೇಳ್ತಾರೆ. ಆದರೆ, ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳೇ ನಮ್ಮನ್ನ ಅವಲಂಬಿಸಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com