ಬೆಂಗಳೂರು: ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ.
ಈ ಗೋಡೆ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ವರ್ಧಿತ ಪದರವನ್ನು ನೀಡಲಿದ್ದು ದೇಶದಲ್ಲಿ ಇಂಥಹದ್ದೊಂದು ಪ್ರಯೋಗ ಇದೇ ಮೊದಲಾಗಿದೆ.
16 ಅಡಿ ಉದ್ದ 10 ಅಡಿ ಅಗಲ ಅಳತೆಯಿರುವ ಈ ಗೋಡೆಗೆ 16 ವಿಂಡೋಗಳಿದ್ದು ಏಕ ಕಾಲಕ್ಕೆ ರೈಲ್ವೆ ನಿಲ್ದಾಣದಾದ್ಯಂತ ವಿವಿಧ ಭಾಗಗಳಲ್ಲಿ ಕಣ್ಗಾವಲು ವಹಿಸುವುದಕ್ಕೆ ಸಹಕಾರಿಯಾಗಲಿದ್ದು ಕೃತಕ ಬುದ್ಧಿಮತ್ತೆ ಆಧರಿತ ಚಾಲನೆಯನ್ನು ಹೊಂದಿದೆ. ಅರ್ ಪಿಎಫ್ ಈ ವ್ಯವಸ್ಥೆಯ ಕಮಾಂಡ್ ನಿಯಂತ್ರಣ ಕೇಂದ್ರವನ್ನು ನಿಭಾಯಿಸಲಿದೆ.
ಹಿರಿಯ ಭದ್ರತಾ ಅಧಿಕಾರಿ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಈ ಹೊಸ ವ್ಯವಸ್ಥೆ ಆರ್ ಪಿಎಫ್ ಪ್ನ್ ( ಓಮ್ನಿಪ್ರೆಸೆಂಟ್ ನೆಟ್ವರ್ಕ್ ಎನ್ಸೆಂಬಲ್) ನ ಭಾಗವಗಿದ್ದು 2.2 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ನ ಮೊದಲ ವಾರದಲ್ಲಿ ಈ ಗೋಡೆಯನ್ನು ಅಳವಡಿಸಲಾಗಿದೆ. ಫೇಶಿಯಲ್ ರೆಕಗ್ನಿಷನ್ ಗೆ ಸಿಸಿಟಿವಿ ಕ್ಯಾಮರಾವನ್ನು ಬಳಕೆ ಮಾಡಲಾಗುತ್ತದೆ. ಪೊಲೀಸರು ಧರಿಸುವ ಬಾಡಿ ಕ್ಯಾಮರಾಗಳು, ಬ್ಯಾಗೇಜ್ ಸ್ಕ್ಯಾನರ್ ಗಳು, ವಾಹನತಪಾಸಣೆ ಒಂದು ಭಾಗದಲ್ಲಿರಲಿದೆ. ಆಲ್ಗರಿದಂ ಫೀಡ್ ನ ಆಧಾರದಲ್ಲಿ 24*7 ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. ಆರ್ ಪಿಎಫ್ ನೊಂದಿಗೆ ಯೋಜನೆಗಾಗಿ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯಿಂದ ಈ ಭದ್ರತಾ ಗೋಡೆಯನ್ನು ಆಮದು ಮಾಡಿಕೊಳ್ಳಲಾಗಿದೆ.
Advertisement