ಡೀಸೆಲ್ ದರ ಇಳಿಕೆ ಮಾಡದಿದ್ದರೆ ನ.5ರಂದು ವಿಧಾನಸೌಧ ಮುತ್ತಿಗೆ: ಲಾರಿ ಮಾಲೀಕರ ಎಚ್ಚರಿಕೆ

ದೇಶದಲ್ಲಿ ದಿನೆ ದಿನೇ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ.‌ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಈ ತೈಲ ಬೆಲೆ ಏರಿಕೆ ಬಿಸಿ ತುಪ್ಪದಂತೆ ಪರಿಣಮಿಸಿದೆ. ಇದರ ಜೊತೆಗೆ ಹೊಸ ವಾಹನಗಳು, ಬಿಡಿಭಾಗಗಳು, ಡೀಸೆಲ್, ಪೆಟ್ರೋಲ್ ಸೇರಿದಂತೆ ಹಲವಾರು ತೆರಿಗೆಗಳ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದಲ್ಲಿ ದಿನೆ ದಿನೇ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ.‌ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಈ ತೈಲ ಬೆಲೆ ಏರಿಕೆ ಬಿಸಿ ತುಪ್ಪದಂತೆ ಪರಿಣಮಿಸಿದೆ. ಇದರ ಜೊತೆಗೆ ಹೊಸ ವಾಹನಗಳು, ಬಿಡಿಭಾಗಗಳು, ಡೀಸೆಲ್, ಪೆಟ್ರೋಲ್ ಸೇರಿದಂತೆ ಹಲವಾರು ತೆರಿಗೆಗಳ ಭಾರವೂ ಅಧಿಕವಾಗಿದ್ದು, ಸಾಗಣೆ ಉದ್ಯಮ ಅಧೋಗತಿಯಲ್ಲಿದೆ. ವ್ಯವಹಾರ ಬಹುತೇಕ ಕುಸಿದಿರುವಾಗ ಲಾರಿ ಮಾಲೀಕರು ಬದುಕುವುದಾದರೂ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಇಂದು ಲಾರಿ ಮಾಲೀಕರ ಸಂಘವು ರಾಜ್ಯಮಟ್ಟದ ತುರ್ತು ಸಭೆ ನಡೆಸಿದ್ದು, ಶೀಘ್ರವೇ ಡೀಸೆಲ್ ದರ ಕಡಿಮೆ ಮಾಡದಿದ್ದಲ್ಲಿ ರಾಜ್ಯದಾದ್ಯಂತ ತಾಲೂಕು ಕಚೇರಿ ಹಾಗೂ ಸಾರಿಗೆ ಕಚೇರಿಗಳ ಮುತ್ತಿಗೆ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತು ಮಾತಾನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡುವಂತೆ ಈಗಾಗಲೇ ಸಾಕಷ್ಟು ಸಲ ಮನವಿ ಮಾಡಲಾಗಿದೆ. ನವೆಂಬರ್ 5 ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡುತ್ತಿದ್ದೇವೆ. ಡೀಸೆಲ್ ಲೀಟರ್ ಮೇಲೆ 10 ರೂ ತೆರಿಗೆ ಕಡಿಮೆ ಮಾಡಬೇಕು. ಜನವರಿ ಕೊನೆ ತನಕ ಪರ್ಮಿಟ್ ಕೊಡಬೇಕು. ಲೋಡಿಂಗ್ ಅನ್ ಲೋಡಿಂಗ್​ನಲ್ಲಿ ಸಾಕಷ್ಟು ಸಮಸ್ಯೆ ಆಗ್ತಾ ಇದೆ. ಆರ್.ಟಿ.ಓ ಹಾಗೂ ಪೊಲೀಸ್ ‌ಕಿರುಕುಳ ಹೆಚ್ಚಾಗುತ್ತಿದೆ. ಓವರ್ ಲೋಡ್ ಕಡಿಮೆ ಮಾಡಬೇಕು ಅಂತ ನಾವು ಹೇಳಿದ್ದೇವೆ. ಆದ್ರೆ ಆರ್.ಟಿ.ಓ ಅವರು ಲಂಚ ತಗೊಂಡು ಬಿಡ್ತಾ ಇದ್ದಾರೆ, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ತಿಳಿಸಿದರು.

ಸರ್ಕಾರ ಈಗಲಾದರೂ ನಮ್ಮ ಸಮಸ್ಯೆಗಳಿಗೆ ಕ್ಯಾರೆ ಅನ್ನದೇ ಹೋದರೆ, ನವೆಂಬರ್ 5ರಂದು ಎಲ್ಲಾ ಆರ್.ಟಿ.ಒ ಕಚೇರಿ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಬೇಡಿಕೆ ಈಡೇರದಿದ್ದರೆ ನವೆಂಬರ್ 15 ಕ್ಕೆ ಲಾರಿ ಮುಷ್ಕರಕ್ಕೆ ಕರೆ ನೀಡಲಾಗುತ್ತೆ ಎಂದು ಎಚ್ಚರಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com