ಜಾರ್ಜಿಯಾದಲ್ಲಿ ಅಧಿಕೃತವಾಗಿ ನವೆಂಬರ್ 1 ರಾಜ್ಯೋತ್ಸವ ದಿನ ಆಚರಣೆ: ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ

ಅಮೆರಿಕದ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಪಿ. ಕೆಂಪ್ ನವೆಂಬರ್ 1ರಂದು ಕನ್ನಡ ಭಾಷೆ ಮತ್ತು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಶಿಂಗ್ಟನ್: ಅಮೆರಿಕದ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಪಿ. ಕೆಂಪ್ ನವೆಂಬರ್ 1ರಂದು ಕನ್ನಡ ಭಾಷೆ ಮತ್ತು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ಆದೇಶ ಹೊರಡಿಸಿದ್ದಾರೆ. ಜಾರ್ಜಿಯಾ ಸರ್ಕಾರದ ಜಾಲತಾಣದಲ್ಲಿ ಅದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ. 

ಅದರಲ್ಲಿ ಕನ್ನಡ ಭಾಷೆ ನಾಡು ನುಡಿಯ ಗುಣಗಾನ ಮಾಡಲಾಗಿದೆ. ಜಗತ್ತಿನ ಅತ್ಯಂತ ಹಳೆಯ ಹಾಗೂ ಇನ್ನೂ ಜೀವಂತವಾಗಿರುವ ಭಾಷೆಗಳಲ್ಲಿ ಕನ್ನಡವೂ ಒಂದು. ಕ್ರಿ.ಪೂ.450 ಇಸವಿಯಷ್ಟು ಪ್ರಾಚೀನ ಇತಿಹಾಸವನ್ನು ಕನ್ನಡ ಹೊಂದಿದೆ. 

ಜಾರ್ಜಿಯಾದ ಕನ್ನಡಿಗರ ಸಮುದಾಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾಣಿಕೆ ಸಲ್ಲಿಸುತ್ತಿದ್ದಾರೆ. ಔಷಧ, ಎಂಜಿನಿಯರಿಂಗ್, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಹೆಸರು ಮಾಡಿದ್ದಾರೆ. ಇವೇ ಮುಂತಾದ ಸಂಗತಿಗಳನ್ನು ಆದೇಶ ಪ್ರತಿಯಲ್ಲಿ ಬರೆಯಲಾಗಿದೆ. ಇದು ಕನ್ನಡಿಗರು ಮತ್ತು ಕರ್ನಾಟಕ ರಾಜ್ಯಕ್ಕೆ ಸಂದ ಗೌರವ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com