ನಟ ಪುನೀತ್ ರಾಜ್ ಕುಮಾರ್'ಗೆ ಭಾವಪೂರ್ಣ ವಿದಾಯ: ಅಂತಿಮ ಸಂಸ್ಕಾರದಲ್ಲಿ ರವಿಚಂದ್ರನ್, ಸುದೀಪ್, ಯಶ್ ಸೇರಿ ಗಣ್ಯರ ಕಂಬನಿ

ಕನ್ನಡ ಚಿತ್ರರಂಗದ ಪೀತಿಯ 'ಅಪ್ಪು' ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಬೆಂಗಳೂರು: ಕನ್ನಡ ಚಿತ್ರರಂಗದ ಪೀತಿಯ 'ಅಪ್ಪು' ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.

'ವೀರ ಕನ್ನಡಿಗ'ನ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯುತ್ತಿದ್ದು, ರಾಜ್​ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಸ್ಥಳದಲ್ಲಿ ನೆರೆದಿದೆ.

ನಟ ರವಿಚಂದ್ರನ್, ಸುದೀಪ್, ಯಶ್​, ನಟ ರಿಷಭ್ ಶೆಟ್ಟಿ, ಟೆನಿಸ್ ಕೃಷ್ಣ, ನಟಿ, ಸೃಜನ್ ಲೋಕೇಶ್​, ಸಂಸದೆ ಸುಮಲತಾ, ಯೋಗಿ ಸೇರಿದಂತೆ ಅನೇಕರು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಈ ವೇಳೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​​ವೈ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪುನೀತ್ ಅಂತ್ಯಕ್ರಿಯೆಗೂ ಮುನ್ನ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.

ಕುಶಾಲ ತೋಪು ಹಾರಿಸಿ ಪುನೀತ್​ಗೆ ಗೌರವ ಸಲ್ಲಿಕೆ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲ ಹೊತ್ತಿನಲ್ಲೇ​​ ಪುನೀತ್ ರಾಜ್​​ಕುಮಾರ್​​ ಅಂತ್ಯಕ್ರಿಯೆ ನಡೆಯಲಿದ್ದು, ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.

ಸರ್ಕಾರದ ವತಿಯಿಂದ ವಿಧಿವಿಧಾನಗಳು ಮುಕ್ತಾಯವಾಗಿದ್ದು, ಇದೀಗ ಕುಟುಂಬಸ್ಥರಿಂದ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com