
ಬೆಂಗಳೂರು: ತಮ್ಮ ಸಹಿ ನಕಲಿ ಮಾಡಿದ್ದಾರೆ ಎಂದು ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ವಿರುದ್ಧ ಆರ್‌ಟಿಐ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಅವರು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸರಿಗೆ ಮತ್ತು ಕರ್ನಾಟಕ ವೈದ್ಯಕೀಯ ಮಂಡಳಿಗೆ ದೂರು ನೀಡಿದ್ದು, ಕೋವಿಡ್ -19 ಚಿಕಿತ್ಸೆಗಾಗಿ ಆಸ್ಪತ್ರೆ ಮೋಸ ಮಾಡಿದೆ ಎಂದು ದೂರಿದ್ದಾರೆ.
ಆಗಸ್ಟ್ 14 ರಂದು ವಿಚಾರಣೆಗೆ ಕರೆದಾಗ ನನ್ನ ನಕಲಿ ಸಹಿ ಮಾಡಿದ ಒಂದು ಡಾಕ್ಯುಮೆಂಟ್ ಸಿಕ್ಕಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉಮೇಶ್ ಎನ್ ಅವರು ನಕಲಿ ದಾಖಲೆ ಸೃಷ್ಟಿಸಿ 10,001 ರೂಪಾಯಿ ಮರುಪಾವತಿ ಪಡೆದಿದ್ದಾರೆ ಎಂದು ಮೂರ್ತಿ ಆರೋಪಿಸಿದ್ದಾರೆ.
ಡಾಕ್ಯುಮೆಂಟ್ ಅನ್ನು ಖಾಸಗಿ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ವಂಚಿಸುವ ಉದ್ದೇಶದಿಂದ ಸಹಿ ನಕಲಿ ಮಾಡಿರುವುದು ದೃಢಪಟ್ಟಿದೆ. ಹಾಗಾಗಿ ಮೂರ್ತಿ ಅವರು ಡಾ. ಉಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement