ಕೋವಿಡ್ ಸೋಂಕಿನಿಂದ ಕಳೆದ 18 ತಿಂಗಳು ಶಾಲೆಗಳು ತೆರೆಯದೆ ವಿದ್ಯಾರ್ಥಿಗಳ ಮೇಲೆ ತೀವ್ರ ದುಷ್ಪರಿಣಾಮ: ವರದಿ

ಕೋವಿಡ್-19 ಸೋಂಕಿನಿಂದಾಗಿ ಕಳೆದ 18 ತಿಂಗಳಲ್ಲಿ ನಿರಂತರ ಶಾಲಾ ಮುಚ್ಚುವಿಕೆ ಮತ್ತು ಆನ್‌ಲೈನ್ ಕಲಿಕೆಯ ಸೀಮಿತ ವ್ಯಾಪ್ತಿಯು ಶೈಕ್ಷಣಿಕ, ಭಾವನಾತ್ಮಕ, ಪೌಷ್ಟಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ವಿದ್ಯಾರ್ಥಿ ಸಮುದಾಯಕ್ಕೆ ದುರಂತದ-ಸಂಕಷ್ಟದ ಪರಿಣಾಮಗಳನ್ನು ತಂದೊಡ್ಡಿದೆ ಎಂದು ರಾಷ್ಟ್ರೀಯ ಶಿಕ್ಷಣ ತುರ್ತುಸ್ಥಿತಿ ಒಕ್ಕೂಟ (NCEE) ವರದಿ ಆತಂಕಕಾರಿ ಅಂಶ ಹೊರಹಾಕಿದೆ.
ಬೆಂಗಳೂರಿನ ಶಾಲೆಯೊಂದರಲ್ಲಿ ನಿನ್ನೆ ಪಾಠ ಮಾಡುತ್ತಿರುವ ಶಿಕ್ಷಕಿ
ಬೆಂಗಳೂರಿನ ಶಾಲೆಯೊಂದರಲ್ಲಿ ನಿನ್ನೆ ಪಾಠ ಮಾಡುತ್ತಿರುವ ಶಿಕ್ಷಕಿ
Updated on

ಬೆಂಗಳೂರು: ಕೋವಿಡ್-19 ಸೋಂಕಿನಿಂದಾಗಿ ಕಳೆದ 18 ತಿಂಗಳಲ್ಲಿ ನಿರಂತರ ಶಾಲಾ ಮುಚ್ಚುವಿಕೆ ಮತ್ತು ಆನ್‌ಲೈನ್ ಕಲಿಕೆಯ ಸೀಮಿತ ವ್ಯಾಪ್ತಿಯು ಶೈಕ್ಷಣಿಕ, ಭಾವನಾತ್ಮಕ, ಪೌಷ್ಟಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ವಿದ್ಯಾರ್ಥಿ ಸಮುದಾಯಕ್ಕೆ ದುರಂತದ-ಸಂಕಷ್ಟದ ಪರಿಣಾಮಗಳನ್ನು ತಂದೊಡ್ಡಿದೆ ಎಂದು ರಾಷ್ಟ್ರೀಯ ಶಿಕ್ಷಣ ತುರ್ತುಸ್ಥಿತಿ ಒಕ್ಕೂಟ (NCEE) ವರದಿ ಆತಂಕಕಾರಿ ಅಂಶ ಹೊರಹಾಕಿದೆ.

'ಶಿಕ್ಷಣ ಹೊರಗಿಡುವುದನ್ನು ಅಂತ್ಯಗೊಳಿಸಿ: 26 ಕೋಟಿ ಮಕ್ಕಳಿಗೆ ಶಿಕ್ಷಣವನ್ನು ಪುನರಾರಂಭಿಸಿ ಮತ್ತು ನವೀಕರಿಸಿ' ಎಂಬ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

NCEE - ದೇಶದ 70 ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರ ಒಕ್ಕೂಟವಾಗಿದ್ದು, ಭಾರತದಾದ್ಯಂತ ನಡೆಸಿದ ಅಧ್ಯಯನಗಳಿಂದ ಪಡೆದ ಅಂಕಿಅಂಶಗಳನ್ನು ಸಂಕ್ಷಿಪ್ತಗೊಳಿಸಿ ಈ ವರದಿ ತಯಾರಿಸಿದೆ.

ವರದಿಯಲ್ಲಿ ಆನ್‌ಲೈನ್ ಶಿಕ್ಷಣದ ಸವಾಲುಗಳನ್ನು ಒತ್ತಿ ಹೇಳಲಾಗಿದೆ. ಅಂಗನವಾಡಿಯಿಂದ ಪ್ರೌಢ ಶಾಲೆಯವರೆಗೆ ಶಾಲೆಗಳನ್ನು "ಸುರಕ್ಷಿತವಾಗಿ" ಪುನಃ ತೆರೆಯಲು ಸರ್ಕಾರಕ್ಕೆ ಸಂಸ್ಥೆ ವಿನಂತಿಸಿದೆ. ಅಗತ್ಯ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕುವುದು ಮತ್ತು ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಆಫ್‌ಲೈನ್ ಶಿಕ್ಷಣದ ಮಹತ್ವವೆಂದು ಸಾರಿದೆ. 

"ಶೇಕಡ 90 ಕ್ಕಿಂತಲೂ ಹೆಚ್ಚು ಹಿಂದುಳಿದಿರುವ ಪೋಷಕರು ಶಾಲೆಗಳನ್ನು ಮತ್ತೆ ತೆರೆಯಬೇಕೆಂದು ಬಯಸುತ್ತಾರೆ. ಅಂಚಿನಲ್ಲಿರುವ ಸಮುದಾಯಗಳ ಮಕ್ಕಳು ಇಂಟರ್ನೆಟ್ ಅಥವಾ ಸೆಲ್ ಫೋನ್ ಹೊಂದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ನಾಲ್ಕು ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಅಗತ್ಯವಾದ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿದ್ದಾರೆ; ನಗರ ಪ್ರದೇಶಗಳಲ್ಲಿನ 80 ಪ್ರತಿಶತದಷ್ಟು ವಿದ್ಯಾರ್ಥಿಗಳಿಗೆ ಅಗತ್ಯವಾದ ಡಿಜಿಟಲ್ ಮೂಲಸೌಕರ್ಯಗಳು ಲಭ್ಯವಿಲ್ಲ'' ಎಂದು ವರದಿಯು ಹೇಳುತ್ತದೆ, ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ನಡೆಸಿದ ಹಲವಾರು ಅಧ್ಯಯನಗಳು ಮತ್ತು ಆನ್ ಲೈನ್ ಶಿಕ್ಷಣದ ಬಗ್ಗೆ ನಡೆಸಿದ ವರದಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಕೇವಲ 4 ಪ್ರತಿಶತ, ಮುಸ್ಲಿಮರಲ್ಲಿ 8 ಪ್ರತಿಶತ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಕೇವಲ 7 ಪ್ರತಿಶತದಷ್ಟು ಜನರು ಅಗತ್ಯ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿದ್ದಾರೆ. ಅಲ್ಲದೆ ಆನ್ ಲೈನ್ ಶಿಕ್ಷಣದಲ್ಲಿ ಲಿಂಗ ಅಸಮಾನತೆ ಕೂಡ ಕಂಡುಬರುತ್ತಿದೆ ಎಂದು ಹೇಳಿದೆ.

ಸೆಂಟರ್ ಫಾರ್ ಬಜೆಟ್ ಮತ್ತು ಪಾಲಿಸಿ ಸ್ಟಡೀಸ್ ನಡೆಸಿದ ನಾಲ್ಕು ರಾಜ್ಯಗಳ 3 ಸಾವಿರದ 176 ಕುಟುಂಬಗಳ ಇತ್ತೀಚಿನ ಸಮೀಕ್ಷೆಯಲ್ಲಿ, ಶೇಕಡಾ 70 ಕ್ಕಿಂತ ಹೆಚ್ಚು ಮನೆಗಳಲ್ಲಿ, ಫೋನ್ ಪುರುಷ ಸದಸ್ಯರಿಗೆ ಸೇರಿದ್ದು ಎಂದು ಕಂಡುಬಂದಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಕೇವಲ ಶೇಕಡಾ 26 ರಷ್ಟು ಹುಡುಗಿಯರು ಮಾತ್ರ ಮನೆಯಲ್ಲಿ ಫೋನ್‌ಗಳಿಗೆ ಅಡ್ಡಿಯಿಲ್ಲದೆ ಆನ್ ಲೈನ್ ಶಿಕ್ಷಣಕ್ಕೆ ಅನುಕೂಲ ಹೊಂದಿದ್ದಾರೆ. ಹಲವು ಕಡೆಗಳಲ್ಲಿ ಹೆಣ್ಣು ಮಕ್ಕಳನ್ನು ಮನೆ ಕೆಲಸಗಳಿಗೆ ಮತ್ತು ಆರೈಕೆ ಕೆಲಸಗಳಿಗೆ ದೂಡಲಾಗುತ್ತಿದ್ದು, ಶಿಕ್ಷಣಕ್ಕಾಗಿ ಕಡಿಮೆ ಸಮಯವನ್ನು ವ್ಯಯಿಸುತ್ತಾರೆ.

2020 ರ ಮಧ್ಯದಲ್ಲಿಯೇ, ಯುನೆಸ್ಕೋ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 14 ಕೋಟಿ ವಿದ್ಯಾರ್ಥಿಗಳು ಮತ್ತು ಮಾಧ್ಯಮಿಕ ಶಾಲೆಗಳಲ್ಲಿ 13 ಕೋಟಿ ವಿದ್ಯಾರ್ಥಿಗಳು ಭಾರತದಲ್ಲಿ ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿದ್ದಾರೆ ಎಂದು ಅಂದಾಜಿಸಿದೆ. ಯುನಿಸೆಫ್, 2021 ರ ವರದಿಯಲ್ಲಿ, ಅರ್ಧಕ್ಕಿಂತ ಹೆಚ್ಚು ಶಿಕ್ಷಕರು ತರಗತಿಯ ಬೋಧನೆಗಳಿಗಿಂತ ಆನ್ ಲೈನ್ ಕಲಿಕೆ ಮತ್ತು ವಿಧಾನಗಳು ಕಡಿಮೆ ಪರಿಣಾಮಕಾರಿ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದೆ. 

ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳಿಗೆ ಮಧ್ಯಾಹ್ನ ಭೋಜನ ಸಿಗುತ್ತಿಲ್ಲ ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com