ತುಮಕೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ; ಚರಂಡಿಗೆ ತಳ್ಳಿ ಕೊಲೆ!

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ನಡೆದಿದೆ.  
ಮೃತ ನಾರಾಯಣ ಮತ್ತು ಆತನ ಪತ್ನಿ ಅನ್ನಪೂರ್ಣ
ಮೃತ ನಾರಾಯಣ ಮತ್ತು ಆತನ ಪತ್ನಿ ಅನ್ನಪೂರ್ಣ
Updated on

ತುಮಕೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ನಡೆದಿದೆ. 

ನಾರಾಯಣ(52) ಕೊಲೆಯಾದ ವ್ಯಕ್ತಿ. ಪತ್ನಿ ಅನ್ನಪೂರ್ ಶವವನ್ನು ಚರಂಡಿಗೆ ಎಸೆದಿದ್ದಾಳೆ. ಸದ್ಯ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಬಳಿಯ ಟೋಲ್​ನಲ್ಲಿ ಪತಿ ನಾರಾಯಣ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. 

ನಿನ್ನೆ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಪತಿ ನಾರಾಯಣನಿಗೆ ಪತ್ನಿ ಅನ್ನಪೂರ್ಣ ಬೆಂಕಿ ಹಚ್ಚಿದಳು, ಬೆಂಕಿ ಹಚ್ಚಿದ ಮೇಲೆ ಆತ ಉರಿ ತಾಳಲಾರದೇ ಓಡಿ ಹೋಗಿ ರಕ್ಷಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ನಾರಾಯಣನನ್ನು ಆಕೆ ಚರಂಡಿಗೆ ತಳ್ಳಿದ್ದಾಳೆ, ಆತ ಅಲ್ಲಿಯೇ ಬಿದ್ದು ಪ್ರಾಣಬಿಟ್ಟಿದ್ದಾನೆ, ಆತ ಸತ್ತಿದ್ದಾನೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಆತನ ಮೇಲೆ ಕಲ್ಲು ಎಸೆದಿದ್ದಾಳೆ.

ಪಕ್ಕದ ಮನೆಯ ರಾಮಕೃಷ್ಣ ಎಂಬಾತನ ಜೊತೆ ಅನ್ನಪೂರ್ಣಳಿಗೆ ಅಕ್ರಮ ಸಂಬಂಧವಿತ್ತು, ಇದನ್ನು ನಾರಾಯಣ ಪ್ರಶ್ನಿಸುತ್ತಿದ್ದ, 8 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದರು. ಕಳೆದ ಕೆಲವು ವರ್ಷಗಳಿಂದ ದಿನ ನಿತ್ಯ ಜಗಳ ನಡೆಯುತ್ತಿತ್ತು.

ಇನ್ನೂ ಪೊಲೀಸರಿಗೆ ಶರಣಾಗಿರುವ ಆರೋಪಿ ಅನ್ನಪೂರ್ಣ, ತಪ್ಪೊಪ್ಪಿಕೊಂಡಿದ್ದಾಳೆ, ಪ್ರತಿನಿತ್ಯ ಆತನ ನಿಂದನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ, ಇನ್ನೂ ಆರೋಪಿಗೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ರಾಮಕೃಷ್ಣನನ್ನು ಬಂಧಿಸಿರುವುದಾಗಿ ಎಸ್ ಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com