ಐವರು ಆತ್ಮಹತ್ಯೆ ಪ್ರಕರಣ: ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಚಿನ್ನಾಭರಣ ಪತ್ತೆ!

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಭಾನುವಾರ ಪೊಲೀಸರು ಸ್ಥಳ ಮಹಜರು ಮುಗಿಸಿದ್ದು, ಈ ವೇಳೆ ಹಲವು ಪ್ರಮುಖ ಸಾಕ್ಷ್ಯಗಳು  ಪತ್ತೆಯಾಗಿವೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ತಿಗಳರಪಾಳ್ಯದ ಮನೆಯ ಚಿತ್ರ
ತಿಗಳರಪಾಳ್ಯದ ಮನೆಯ ಚಿತ್ರ

ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಭಾನುವಾರ ಪೊಲೀಸರು ಸ್ಥಳ ಮಹಜರು ಮುಗಿಸಿದ್ದು, ಈ ವೇಳೆ ಹಲವು ಪ್ರಮುಖ ಸಾಕ್ಷ್ಯಗಳು  ಪತ್ತೆಯಾಗಿವೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ತಿಗಳರಪಾಳ್ಯದ  ಮನೆಯಲ್ಲಿ ಎಸಿಪಿ, ಇನ್‍ಸ್ಪೆಕ್ಟರ್ ಗಳ ನೇತೃತ್ವದಲ್ಲಿಇಂದು ಸ್ಥಳ ಮಹಜರು ನಡೆದಿದ್ದು, ಈ  ವೇಳೆ ಮೂವರ ಡೆತ್ ನೋಟ್ ಪತ್ತೆಯಾಗಿವೆ. ಅಲ್ಲದೇ, ಮನೆಯಲ್ಲಿ 15 ಲಕ್ಷ ರೂ.ನಗದು, ಎರಡು  ಕೆ.ಜಿ.ಯಷ್ಟು ಚಿನ್ನಾಭರಣ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸುಮಾರು  ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆ  ಮಾಲೀಕ ಶಂಕರ್, ಇಬ್ಬರು ಅಳಿಯಂದಿರು, ಒಬ್ಬ ಸಂಬಂಧಿಕ ಸಹ ಉಪಸ್ಥಿತರಿದ್ದರು. ಪೊಲೀಸರು  ಕೀ ಮೇಕರ್ ನನ್ನು ಕರೆಸಿ, ಲಾಕರ್ ತೆಗೆಸಿದ್ದಾರೆ. ಅಲ್ಲದೇ ತಪಾಸಣೆ ವೇಳೆ ಮನೆಯ  ರೂಮ್‍ಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿದ್ದವು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com