
ಹುಬ್ಬಳ್ಳಿ: ಕೋವಿಡ್ ನಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹುಬ್ಬಳ್ಳಿ ವೈದ್ಯರಿಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ.
ನಗರದಲ್ಲಿನ ಪುಟ್ಟ ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಳೆದ 2 ತಿಂಗಳುಗಳಿಂದ ಗಂಭೀರ ಲಕ್ಷಣಗಳೊಂದಿಗೆ 250 ಮಂದಿ ಮಕ್ಕಳು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಮಳೆಗಾಲದಲ್ಲಿ ಸಾಕಷ್ಟು ಮಕ್ಕಳು ಹಾಗೂ ಮಧ್ಯವಯಸ್ಕ ಮಕ್ಕಳದ್ಲಿ ವೈರಲ್ ಜ್ವರ ಹೆಚ್ಚಾಗುತ್ತದೆ. ಈ ಜ್ವರಕ್ಕೆ ಸಾಮಾನ್ಯ ಔಷಧಿಗಳನ್ನು ನೀಡಿದರೆ ವಾಸಿಯಾಗುತ್ತಿತ್ತು. ಆದರೆ, ಈ ವರ್ಷ ಕಾಣಿಸಿಕೊಂಡಿರುವ ವೈರಲ್ ಜ್ವರ ಗಂಭೀರ ಸ್ವರೂಪದ್ದಾಗಿದೆ. ಈ ಜ್ವರವು ಮಕ್ಕಳಲ್ಲಿ ಅತೀವ್ರ ಕೆಮ್ಮು ಹಾಗೂ ಉಸಿರಾಟ ಸಮಸ್ಯೆಗಳನ್ನು ಉಂಟು ಮಾಡಿದೆ.
ಕಿಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಾತನಾಡಿ, ಆಗಸ್ಟ್ ತಿಂಗಳೊಂದರಲ್ಲೇ 163 ಮಂದಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ತಿಂಗಳು 90 ಮಕ್ಕಳು ದಾಖಲಾಗಿದ್ದು, ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ, ಸೋಂಕಿನಿಂದ ಯಾವುದೇ ಮಕ್ಕಳು ಸಾವನ್ನಪ್ಪಿಲ್ಲ. ಆದರೆ, ಈ ವರೆಗೂ ವರದಿಯಾಗಿರುವ ಮಕ್ಕಳ ಸಾವು ದೀರ್ಘಕಾಲಿಕ ರೋಗದಿಂದಾಗಿ ಆಗಿರುವುದಾಗಿದೆ ಎಂದು ಹೇಳಿದ್ದಾರೆ.
ಕಿಮ್ಸ್ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಪ್ರಕಾಶ್ ವಾರಿಯವರು ಮಾತನಾಡಿ, ವೈರಲ್ ಜ್ವರಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೆ, ಅಧ್ಯಯನಗಳ ಪ್ರಕಾರ ಹವಾಮಾನ ಬದಲಾವಣೆ ಹಾಗೂ ರೋಗ ನಿರೋಧಕ ಶಕ್ತಿ ಕುಸಿತದಿಂದಾಗಿ ಎದುರಾಗಿದೆ ಎಂದು ಹೇಳಿದೆ. ಕೋವಿಡ್ ಹಾಗೂ ಲಾಕ್ಡೌನ್ ನಿಂದಾಗಿ ಮಕ್ಕಳು ಹಾಗೂ ಹಾಲುಣಿಸುವ ತಾಯಿಯಂದಿರು ಹೊರಗೆ ಬರುತ್ತಿಲ್ಲ. ಇದರಿಂದ ರೋಗ ನಿರೋಧ ಶಕ್ತಿ ಕಡಿಮೆಯಾಗುವಂತೆ ಮಾಡಿದೆ. ಇದೂ ಕೂಡ ಒಂದು ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
Advertisement