ರಾಜ್ಯದ 20 ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು!

ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಕೋವಿಡ್-19 ಪ್ರಕರಣದ ಸಾವಿನ ದರವನ್ನು (ಸಿಎಫ್‌ಆರ್) ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆದಾಗ್ಯೂ, ರಾಜ್ಯ ಕೋವಿಡ್ -19 ವಾರ್ ರೂಮ್ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್ -19 ಮರಣ ಪ್ರಮಾಣ ಶೇಕಡಾ 1ಕ್ಕಿಂತ ಹೆಚ್ಚಿದೆ. 
ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರೊಬ್ಬರಿಂದ ಸ್ವಾಬ್ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು
ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರೊಬ್ಬರಿಂದ ಸ್ವಾಬ್ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು
Updated on

ಬೆಂಗಳೂರು: ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಕೋವಿಡ್-19 ಪ್ರಕರಣದ ಸಾವಿನ ದರವನ್ನು (ಸಿಎಫ್‌ಆರ್) ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆದಾಗ್ಯೂ, ರಾಜ್ಯ ಕೋವಿಡ್ -19 ವಾರ್ ರೂಮ್ ನೀಡಿರುವ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್-19 ಮರಣ ಪ್ರಮಾಣ ಶೇಕಡಾ 1ಕ್ಕಿಂತ ಹೆಚ್ಚಿದೆ. 

ಹಾವೇರಿ, ಧಾರವಾಡ, ಬಳ್ಳಾರಿ, ಬೀದರ್ ಮತ್ತು ಶಿವಮೊಗ್ಗದಲ್ಲಿ ಹೆಚ್ಚಿನ ಕೋವಿಡ್-19 ಮರಣ ಪ್ರಮಾಣವಿದ್ದರೆ, ಉಳಿದ 10 ಜಿಲ್ಲೆಗಳಲ್ಲಿ ಅದು ಶೇಕಡಾ 1ಕ್ಕಿಂತ ಕಡಿಮೆಯಿದೆ. ಚಿತ್ರದುರ್ಗ, ಉಡುಪಿ, ಯಾದಗಿರಿ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಕಡಿಮೆ ಮರಣ ಪ್ರಮಾಣವಿದೆ.

ಬೆಂಗಳೂರಿನ ಹೊರಗಿನ ರೋಗಿಗಳನ್ನು ತಡವಾಗಿ ಆಸ್ಪತ್ರೆಗೆ ತೋರಿಸುತ್ತಿರುವುದು ಇನ್ನೂ ಸಮಸ್ಯೆಯಾಗಿದೆ.  ಕೆಲವು ಜಿಲ್ಲೆಗಳಲ್ಲಿ ಸೌಲಭ್ಯಗಳ ಕೊರತೆ ಕೂಡ ಸಮಸ್ಯೆಯಾಗಿರಬಹುದು ಎಂದು ಖ್ಯಾತ ಶ್ವಾಸಕೋಶಶಾಸ್ತ್ರಜ್ಞ ಹಾಗೂ ರಾಜ್ಯ ಕೋವಿಡ್-19 ಡೆತ್ ಆಡಿಟ್ ಕಮಿಟಿ ಸದಸ್ಯ ಡಾ. ಕೆ. ಎಸ್. ಸತೀಶ್ ಹೇಳಿದ್ದಾರೆ.

ಹೆಚ್ಚಿನ ಮರಣ ಪ್ರಮಾಣವಿರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಗತಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಅಮೆರಿಕದಲ್ಲಿ ಲಸಿಕೆ ಪ್ರಮಾಣ ಕಡಿಮೆಯಿರುವ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಅಧಿಕವಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಮರಣ ಪ್ರಮಾಣ ಅಂಕಿಅಂಶಗಳ ಬಗ್ಗೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ. 

ಸಾವಿನ ದರವು ಕಡಿಮೆಯಾಗುವುದು ನಿಧಾನವಾಗಿದೆ ಆದರೆ ಒಮ್ಮೆ ಹೊಸ ಕೇಸ್ ಲೋಡ್ ಕಡಿಮೆಯಾದರೆ, ಸಾವುಗಳು ಕೂಡ ಆಗುತ್ತವೆ. ವ್ಯಾಕ್ಸಿನೇಷನ್ ಒಂದು ಮಾಂತ್ರಿಕ ದಂಡವಾಗಿದ್ದು ಅದು ಕೋವಿಡ್ -19 ಸಾವುಗಳನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ರೋಗಿಗಳನ್ನು ಮೊದಲೇ ಪರೀಕ್ಷಿಸಿ ಚಿಕಿತ್ಸೆ ನೀಡುವುದರ ಹೊರತಾಗಿ ನಾವು ಈ ಬಗ್ಗೆ ಗಮನ ಹರಿಸಬೇಕು ಎಂದು ಡಾ ಪ್ರದೀಪ್ ಬಾನಂದೂರು ವಿವರಿಸಿದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆಗೆ ಸಿಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com