ದೊಡ್ಡ ಬಾವಿ
ದೊಡ್ಡ ಬಾವಿ

ಬೆಂಗಳೂರು: ಮೆಟ್ರೋ ಸುರಂಗ ಕೊರೆಯುವಾಗ ಹಳೆಯ ಕಾಲದ ದೊಡ್ಡ 'ಬಾವಿ' ಪತ್ತೆ

ಬೆಂಗಳೂರು ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯಾಗುವ ಹಳೆಯ ಕಾಲದ ದೊಡ್ಡದಾದ ಬಾವಿಯೊಂದು ಕಂಡುಬಂದಿದೆ.

ಬೆಂಗಳೂರು:  ಬೆಂಗಳೂರು ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯಾಗುವ ಹಳೆಯ ಕಾಲದ ದೊಡ್ಡದಾದ ಬಾವಿಯೊಂದು ಕಂಡುಬಂದಿದೆ.

ಬೆಂಗಳೂರು ಮೆಟ್ರೋ ಸುರಂಗ ಕೊರೆಯುವ 'ಭದ್ರಾ' ಯಂತ್ರ ವೆಂಕಟೇಶ್ ಪುರ ಮೆಟ್ರೋ ನಿಲ್ದಾಣದಿಂದ ಟ್ಯಾನರಿ ರಸ್ತೆ ನಿಲ್ದಾಣದವರೆಗೂ ಸುರಂಗ ಕೊರೆಯುವಾಗ ಇಂದು ಬೆಳಗ್ಗೆ ಸುಮಾರು 7-30ರ ಸುಮಾರಿನಲ್ಲಿ ದೊಡ್ಡ ಬಾವಿಯೊಂದು ಕಾಣಿಸಿಕೊಂಡಿದೆ. ನಂತರ ಕೆಲಸವನ್ನು ಅರ್ಧದಲ್ಲಿಯೇ  ಸ್ಥಗಿತಗೊಳಿಸಲಾಗಿದೆ.

ಮುಚ್ಚಿದ್ದ ಬಾವಿಯ ಮೇಲೆ  ಕಟ್ಟಡವೊಂದನ್ನು ನಿರ್ಮಿಸಲಾಗಿದ್ದು, ನೆಲ ಅಂತಸ್ತಿಯಲ್ಲಿ ಕೋಳಿ ಅಂಗಡಿ ಇದ್ದು, ಮೊದಲ ಅಂತಸ್ತಿಯನಲ್ಲಿ ಐವರು ಸದಸ್ಯರಿರುವ ಕುಟುಂಬವೊಂದು ವಾಸಿಸುತ್ತಿದೆ. ಈಗ ಬೆಂಗಳೂರು ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯುವ ಕೆಲಸ ನಡೆಯುತ್ತಿದ್ದಾಗ ಆ ಬಾವಿ ಕಂಡುಬಂದಿದೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com